Kantara-1: 'ಕಾಂತಾರ ಚಾಪ್ಟರ್ -1 ಟೀಸರ್' ಬಿಡುಗಡೆ ಮುನ್ನ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ
Rishab Shetty: ಕನ್ನಡ ಭಾಷೆಯೊಂದರಲ್ಲೇ ಸಿನಿಮಾ ಮಾಡಿ ಭಾರತದ ಚಿತ್ರರಂಗವನ್ನೆ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ 'ಕಾಂತಾರ' ಸಿನಿಮಾ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೆ ಕೊಲ್ಲೂರು 'ಶ್ರೀ ಕ್ಷೇತ್ರ ಮೂಕಾಂಬಿಕೆ' ತಾಯಿ ದರ್ಶನವನ್ನು ರಿಷಬ್ ಶೆಟ್ಟಿ ದಂಪತಿ ಪಡೆದಿದ್ದಾರೆ. ಇವರ ಮುಂದೆ ಫ್ಯಾನ್ಸ್ ವಿಶೇಷ ಮನವಿ ಮಾಡಿದ್ದಾರೆ.
ರಿಷಬ್ ಶೆಟ್ಟಿ ಹುಟ್ಟು ಹಬ್ಬ ಪ್ರಯುಕ್ತ ''ಕಾಂತಾರ ಚಾಪ್ಟರ್ 1'' ರಿಂದ ಉಗ್ರಾವತಾರದ ರಿಷಬ್ ಶೆಟ್ಟಿ ಕೈಲಿ ಕೊಡಲಿ ಹಿಡಿದ ಪೋಸ್ಟರ್ ಅನ್ನು ಹೊಂಬಾಳೆ ಫಿಲ್ಸ್ಮಂ ಬಿಡುಗಡೆ ಮಾಡಿತ್ತು. 'ದಂತಕತೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ...'ಶಿರ್ಷಿಕೆಯಡಿ ಬಿಡುಗಡೆಯಾದ ಪೋಸ್ಟರ್ ಅನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದರು. ಜನ್ಮದಿನಕ್ಕೆ ರಿಷಬ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಗುವ ಲಕ್ಷಣಗಳು ಕಂಡು ಬರುತ್ತಿವೆ.

ಕಾಂತಾರ-1 ಚಿತ್ರೀಕರಣದ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಡಬ್ಬಿಂಗ್ ಬಹುತೇಕ ಪೂರ್ಣಗೊಳಿಸಿ ನಿರಾಳರಾಗಿರುವ ನಟ ರಿಷಬ್ ಶೆಟ್ಟಿ ಪತ್ನಿ ಜೊತೆಗೆ ಕೊಲ್ಲೂರು ದೇವರ ದರ್ಶನ ಪಡೆದಿದ್ದಾರೆ. ಇದು ಟೀಸರ್ ಬಿಡುಗಡೆಯ ಮುನ್ಸೂಚನೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ದೇವರ ಮೇಲೆ ಅಪಾರ ಭಕ್ತಿ ಇರುವ ಶೆಟ್ರು ದೈವದ ಒಪ್ಪಿಗೆ ಪಡೆದೇ ಕಾಂತಾರಾ ಸರಣಿ ಸಿನಿಮಾ ಆರಂಭಿಸಿದ್ದರು. ಕಾಂತಾರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಕಾಂತಾರ ಮೊದಲ ಭಾಗ ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗುತ್ತಿದೆ. ಆದರೆ ಇನ್ನೂ ಟೀಸರ್ ಬಿಟ್ಟಿಲ್ಲ. ಅಭಿಮಾನಿಗಳು ಟೀಸರ್, ಟ್ರೈಲರ್ ಗಾಗಿ ಕಾಯುತ್ತಿದ್ದಾರೆ.
ಕಾಂತಾರ ಚಾಪ್ಟರ್ 1 ಟೀಸರ್ ಅಪ್ಡೇಟ್
ಪ್ರಕೃತಿ, ಕಾಡು, ದೈವಾರಾದನೆ ಸೇರಿದಂತೆ ತುಳುನಾಡಿನ ಸಂಸ್ಕೃತಿ ಬಿಂಬಿಸಿದ ಸಿನಿಮಾ 'ಕಾಂತಾರ'. ಅದರ ಪ್ರಿಕ್ವೆಲ್ ಮೇಲೆ ಅಪಾರ ನಿರೀಕ್ಷೆ ಇದೆ. ಇದರ ಮಧ್ಯೆ ಸದ್ದಿಲ್ಲದೇ ಟೀಸರ್ ಬಿಡುಗಡೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಏಕೆಂದರೆ ರಿಷಬ್ ಶೆಟ್ಟಿ ಅವರು ದೇವರ ದರ್ಶನ ಪಡೆದು ಟೀಸರ್ ಬಗ್ಗೆ ಬಿಗ್ ಅಪ್ಡೇಟ್ ನೀಡಲಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ಇನ್ನೂ ರಿಷಬ್ ಶೆಟ್ಟಿ ಕೊಲ್ಲೂರು ಭೇಟಿ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಫ್ಯಾನ್ಸ್ ಟೀಸರ್ ಯಾವಾಗ ಲಾಂಚ್? ಆಗುತ್ತದೆ. ಟೀಸರ್ ಬೇಗ ಬಿಡಿ ಸರ್ ಎಂದು ಆಗ್ರಹಿಸುತ್ತಿದ್ದಾರೆ. ನೆಚ್ಚಿನ ನಟನ ಬಳಿ ಪ್ರೀತಿಯಿಂದ ಮನವಿ ಮಾಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಪ್ರಯುಕ್ತವೇ ರಿಷಬ್ ಶೆಟ್ಟಿ ದಂಪತಿ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications