Darshan Thoogudeepa: ಕಟ್ಕೊಂಡವಳನ್ನ ಬಿಟ್ಟು ಇಟ್ಕೊಂಡವಳ ಹಿಂದೆ ಬಿದ್ದು ಹಾಳಾಗಿ ಹೋದ ದರ್ಶನ್: ಜನರ ಅಭಿಪ್ರಾಯ ಓದಿ

ದರ್ಶನ್ ತೂಗುದೀಪ್ ಜೀವನ ಈಗ ಮುಳ್ಳಿಗೆ ಸಿಲುಕಿದ ಬಟ್ಟೆಯಂತೆ ಆಗಿದೆ. ಎಳೆದರೂ ಕಷ್ಟ & ಹಾಗೇ ಬಿಟ್ಟರೂ ನಷ್ಟ. ಹೀಗಂತ ಸುಮ್ಮನೆ ಕೂರಲು ಆಗುವುದೂ ಇಲ್ಲ, ಯಾಕೆ ಅಂದ್ರೆ ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರ್ತಾರೆ ಅಂತಾ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ಕನ್ನಡಿಗರು ದರ್ಶನ್ ತೂಗುದೀಪ್ ಜೀವನದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ, ಪವಿತ್ರಾ ಗೌಡ ಬಂದ ನಂತರ ದರ್ಶನ್ ತೂಗುದೀಪ್ ಜೀವನಕ್ಕೆ ಏನೆಲ್ಲಾ ಆಯ್ತು? ಅನ್ನೋದನ್ನ ಚರ್ಚೆ ಮಾಡುತ್ತಿದ್ದಾರೆ ಕನ್ನಡಿಗರು.

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಏನು ಸಂಬಂಧ ಇತ್ತು ಅನ್ನೋ ಮ್ಯಾಟರ್ ಇಡೀ ಜಗತ್ತಿಗೆ ಈಗ ಗೊತ್ತಾಗಿದೆ. ಹಾಗೇ ಉಗುರಲ್ಲಿ ಹೋಗುವ ಮ್ಯಾಟರ್ ಊರೆಲ್ಲಾ ಮಾಡಿ ಜೈಲು ಸೇರಿದ್ದಾರೆ ದರ್ಶನ್ ತೂಗುದೀಪ್. ರೇಣುಕಾಸ್ವಾಮಿ ತಮ್ಮ ಆತ್ಮೀಯ ಗೆಳತಿ ಪವಿತ್ರಾ ಗೌಡಾಳಿಗೆ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಕಳುಹಿಸಿ & ಅಶ್ಲೀಲ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ, ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕೊಲೆ ಮಾಡಿರುವ ಆರೋಪ ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗ ಜನರು ಕೂಡ, 'ಕಟ್ಕೊಂಡವಳನ್ನ ಬಿಟ್ಟು ಇಟ್ಕೊಂಡವಳ ಹಿಂದೆ ಬಿದ್ದು ಹಾಳಾಗಿ ಹೋದ ದರ್ಶನ್...' ಅಂತಾ ಹೇಳುತ್ತಿದ್ದಾರೆ. ಯಾಕೆ ಗೊತ್ತಾ? ಮುಂದೆ ಓದಿ.

Kannadigas Saying This About Darshan Thoogudeepa And Pavithra Gowda Relationship

ಪವಿತ್ರಾ ಜೊತೆ ದರ್ಶನ್‌ಗೆ ಏನು ಸಂಬಂಧ?

ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದ ದೊಡ್ಡ ಹೀರೋ. ಹೀಗಾಗಿ, ಹುಡುಗಿಯರ ದಂಡೇ ಅವರ ಹಿಂದೆ ಬೀಳುತ್ತೆ ಅಂತಾ ಅಭಿಮಾನಿಗಳು ಹೇಳುತ್ತಾರೆ. ಅದೇ ರೀತಿ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್ ಹಿಂದೆ ಬಿದ್ದು ಲವ್ ಮಾಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಜನ ಮಾತನಾಡುತ್ತಿದ್ದಾರೆ. ಆದರೆ ಪೊಲೀಸರ ತನಿಖೆ ಸಮಯದಲ್ಲಿ ಬಯಲಾದ ಸಂಗತಿಯೇ ಬೇರೆ.

ಅದು ಏನಪ್ಪಾ ಅಂದ್ರೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲೀವ್ ಇನ್ ರಿಲೇಶನ್‌ಶಿಪ್ ಅಂದರೆ, ಮದುವೆ ಆಗದೆ ಜೊತೆಗೆ ಇರುವ ಸಂಬಂಧದಲ್ಲಿ ಇದ್ದರು ಎಂಬ ಭಯಾನಕ ಸತ್ಯ ಇದೀಗ ಬಯಲಾಗಿದೆ. ಹೀಗಿದ್ದಾಗಲೇ ಕನ್ನಡಿಗರು ಕೂಡ ದರ್ಶನ್ ಬಗ್ಗೆ ಮಾತನಾಡುತ್ತಿದ್ದು, 'ಕಟ್ಕೊಂಡವಳನ್ನ ಬಿಟ್ಟು ಇಟ್ಕೊಂಡವಳ ಹಿಂದೆ ಬಿದ್ದು ಹಾಳಾಗಿ ಹೋದ ನಟ ದರ್ಶನ್...' ಅಂತಿದ್ದಾರೆ. ಇದು ಈಗ ಫುಲ್ ವೈರಲ್ ಆಗುತ್ತಿದೆ.

ವಿಜಯಲಕ್ಷ್ಮೀ ಬಿಟ್ಟು ಪವಿತ್ರಾ ಗೌಡ...

ಒಟ್ನಲ್ಲಿ ತಾನಾಯ್ತು, ತನ್ನ ಸಂಸಾರ ಆಯ್ತು, ತನ್ನ ಸಿನಿಮಾ ಆಯ್ತು ಅಂತಾ ನಟ ದರ್ಶನ್ ತೂಗುದೀಪ್ ಇದ್ದಿದ್ದರೆ ಪರಿಸ್ಥಿತಿ ಇವತ್ತಿಗೂ ಸರಿಯಾಗೇ ಇರುತ್ತಿತ್ತು. ಆದರೆ ಆಗಿದ್ದೇ ಬೇರೆ, ದರ್ಶನ್ ತೂಗುದೀಪ್ ಬಾಳಲ್ಲಿ ವಿಜಯಲಕ್ಷ್ಮೀ ದರ್ಶನ್ ಬಿಟ್ಟು ಪವಿತ್ರಾ ಗೌಡ ಎಂಟ್ರಿಯ ನಂತರ ಅಲ್ಲೋಲ ಕಲ್ಲೋಲ ಶುರುವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲಲಿದೆ? ದರ್ಶನ್ ತೂಗುದೀಪ್ ಜೈಲಿಂದ ಹೊರಗೆ ಬಂದ ನಂತರವಾದ್ರೂ ಸರಿಯಾಗಿ ಸಂಸಾರ ಮಾಡುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+