ಕನ್ನಡ vs ತಮಿಳು ಭಾಷಾ ವಿವಾದ: ಕನ್ನಡದ ಸ್ಟಾರ್‌ ನಟರೂ ಕೇಳದ ಪ್ರಶ್ನೆ ಕೇಳಿದ ರಮ್ಯಾ!

Kannada vs Tamil language controversy: ಕನ್ನಡ ಮತ್ತು ತಮಿಳು ಭಾಷಾ ವಿವಾದ ಜೋರಾಗಿದೆ. ಆದರೆ, ಕನ್ನಡದ ಸ್ಟಾರ್‌ ನಟರು ಎನಿಸಿಕೊಂಡ ಯಾವ ನಟರೂ ಇಲ್ಲಿಯ ವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಕನ್ನಡದಿಂದಲೇ ಬದುಕು ಕಟ್ಟಿಕೊಂಡಿರುವ ನಟರು ಹೇಳಿಕೆ ಕೊಡಬೇಕು ಅಥವಾ ಕನ್ನಡದ ಪರವಾಗಿ ಮಾತನಾಡಬೇಕು. ಕನ್ನಡದ ಹೋರಾಟಗಳು ಬಂದಾಗ ಮುಂಚೂಣಿಯಲ್ಲಿ ನಿಲ್ಲಬೇಕು ಎನ್ನುವ ಆಗ್ರಹಗಳು ಕನ್ನಡಿಗರದ್ದು. ಕಮಲ್‌ ನೀಡಿದ ಹೇಳಿಕೆಯನ್ನು ವಿರೋಧಿಸಿ, ಕನ್ನಡದ ಸಾಹಿತಿಗಳು ಹಾಗೂ ರಾಜಕಾರಣಿಗಳು ಮಾತನಾಡಿದ್ದಾರೆ. ಆದರೆ ಇಲ್ಲಿಯ ವರೆಗೆ ಯಾವೊಬ್ಬ ಸ್ಟಾರ್‌ ನಟರೂ ಈ ವಿಚಾರವಾಗಿ ಮಾತನಾಡಿಲ್ಲ. ಇದೀಗ ಮೊದಲ ನಟಿ & ರಾಜಕಾರಣಿ ರಮ್ಯಾ ಅವರು ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಯಾವ ನಟರೂ ತುಟಿ ಬಿಚ್ಚಲಿಲ್ಲವೇಕೆ. ಪ್ಯಾನ್‌ ಇಂಡಿಯಾ ಮೂವಿಗಳನ್ನು ಮಾತನಾಡಿದ ಮಾತ್ರಕ್ಕೆ ಕನ್ನಡ ಅಸ್ಮಿತೆ ಪ್ರಶ್ನೆ ಬಂದರೂ ಮಾತನಾಡಬಾರದ ಅಂತ ಕೇಳುತ್ತಿದ್ದಾರೆ.

ಕಳೆದ ಒಂದು ವಾರದಿಂದಲೂ ಸೋಷಿಯಲ್‌ ಮೀಡಿಯಾದಲ್ಲಿ ನಟ ಕಮಲ್‌ ಹಾಸನ್‌ ಅವರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಂದರ್ಭದಲ್ಲಿ ಆಡಳಿತ - ವಿರೋಧ ಪಕ್ಷ ಅಂತ ಪಕ್ಷಾತೀತವಾಗಿ ಕರ್ನಾಟಕದಲ್ಲಿ ಕಮಲ್‌ ಅವರ ಹೇಳಿಕೆಯನ್ನು ರಾಜಕಾರಣಿಗಳು ವಿರೋಧಿಸಿದ್ದಾರೆ. ಸಾಹಿತ್ಯ ಹಾಗೂ ಸಿನಿಮಾ ನಿರ್ದೇಶಕರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದರ ಹೊರತಾಗಿ ಸಿನಿಮಾ ರಂಗದ ಯಾವೊಬ್ಬ ನಟರೂ ಮಾತನಾಡಲಿಲ್ಲ. ಆದರೆ, ರಮ್ಯಾ ಅವರು ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಕಮಲ್‌ ಹೇಳಿಕೆಯನ್ನು ಖಂಡಿಸುವ ಮೂಲಕವೇ ನಮ್ಮಲ್ಲೇ ಶ್ರೇಷ್ಠತೆಯ ವ್ಯಸನ ಮೂಡಬಾರದು ಎಂದು ಹೇಳಿದ್ದಾರೆ.

Kannada vs Tamil language controversy Ramya question even Kannada star actors haven t asked

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳು ಒಂದು ಛತ್ರಿಯಡಿಯಲ್ಲಿ ಈ ಭಾಷೆಗಳು ಇವೆ. ನಮ್ಮಲ್ಲಿ ಕೆಲವು ಸಾಮಾನ್ಯತೆ ಮತ್ತು ಭಾಷಾ ಪರಂಪರೆಯು ವಂಶಾವಳಿ ಇರಬಹುದು. ಆದರೆ ಎರಡೂ ಶ್ರೇಷ್ಠವಲ್ಲ. ಸಂಸ್ಕೃತವು ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವ ಇತರರಿಗೆ - ನೀವು ಕೂಡ ತಪ್ಪಾಗಿ ಭಾವಿಸಿದ್ದೀರಿ. ಸಂಸ್ಕೃತ ಇಂಡೋ-ಆರ್ಯನ್ ಮತ್ತು ನಾವು ದ್ರಾವಿಡರು. ಪರಸ್ಪರ ಭಿನ್ನವಾಗಿದೆ. ಇಂಡೋ-ಆರ್ಯನ್ ವಲಸೆಗೆ ಬಹಳ ಹಿಂದೆಯೇ ನಮ್ಮ ದ್ರಾವಿಡ ಭಾಷೆ ಬಳಕೆಯಲ್ಲಿ ಇದೆ. ಕಮಲ್ ಹಾಸನ್ ಅವರು ತಪ್ಪು ಮಾಡಿದ್ದಾರೆ. ಆದರೆ ಚಿತ್ರವನ್ನು ಬಹಿಷ್ಕರಿಸುವುದು ಸ್ವಲ್ಪ ಅತಿ ಅಂತ ಅನಿಸುವುದಿಲ್ಲವೇ ? ಅಂತಲೂ ಅವರು ಇದೇ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಾರೆ.

ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು. ಆದರೆ ಅದಕ್ಕಾಗಿ ಮೊದಲು ನಾವು ಪರಸ್ಪರ ಗೌರವವನ್ನು ಹೊಂದಿರಬೇಕು ಎಂದು ಅವರು ಹೇಳಿದ್ದು. ದಕ್ಷಿಣ ಭಾರತದಲ್ಲಿ ಭಾಷಾ ಶ್ರೇಷ್ಠತೆ ವಿಚಾರಕ್ಕಿಂತ ನಾವೆಲ್ಲರೂ ಸಹೋದರರಂತೆ ಒಂದಾಗಿ ಹಿಂದಿ ಹೇರಿಕೆಯ ವಿರುದ್ಧ ಧ್ವನಿಯಾಗಬೇಕಿದೆ ಎಂದಿದ್ದಾರೆ.

ಮೃಧು ಧೋರಣೆಯೇ ?

ನಟಿ ರಮ್ಯಾ ಅವರು ಕನ್ನಡ ಪರವಾಗಿ ಹಾಗೂ ಕನ್ನಡ ವಿಚಾರವಾಗಿ ಮಾತನಾಡಿರುವುದನ್ನು ಕನ್ನಡಿಗರು ಸ್ವಾಗತಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕಮಲ್‌ ಹಾಸನ್‌ ಅವರ ಸಿನಿಮಾವನ್ನು ತಡೆಯಬಾರದು ಎಂಬರ್ಥದಲ್ಲಿ ಮಾತನಾಡಿರುವ ಒಂದು ವಿಷಯವು ಕನ್ನಡಿಗರು ಒಪ್ಪಿಕೊಂಡಿಲ್ಲ. ಈ ರೀತಿ ಮಾತನಾಡಿದರೂ ಅವರು ಕ್ಷಮೆ ಕೇಳಿಲ್ಲ. ಹೀಗಾಗಿ ಅವರ ಸಿನಿಮಾವನ್ನು ತಡೆಯುವುದರಲ್ಲಿ ತಪ್ಪೇನು ಇಲ್ಲ ಅಂತಲೂ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+