ಹೊಸ ಜೀವನ ಶುರು ಮಾಡಿದ್ದೇನೆ: ರ‍್ಯಾಪರ್ ಚಂದನ್‌ ಶೆಟ್ಟಿ ಹೇಳಿದ್ದೇನು?

ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಕನ್ನಡದ ರ‍್ಯಾಪರ್ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡ ಜೊತೆ ಮದುವೆಯಾಗಿ ಸರ್‌ಪ್ರೈಸ್‌ ನೀಡಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರು ಪರಸ್ಪರ ಡಿವೋರ್ಸ್‌ ಘೋಷಿಸಿ ಎಲ್ಲರಿಗೂ ಶಾಕ್‌ ಕೊಟ್ಟಿದ್ದರು. ಕಾರಣಾಂತರಗಳಿಂದ ಚಂದನ್‌ ನಿವೇದಿತಾ ಅವರ ಸಂಬಂಧ ಮುರಿದುಬಿದ್ದಿತ್ತು. ಬಳಿಕ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಡಿವೋರ್ಸ್‌ ವಿಚಾರವಾಗಿ ಹಲವು ವದಂತಿ ಕೂಡ ಹಬ್ಬಿತ್ತು. ಇದೀಗ ಚಂದನ್‌ ಶೆಟ್ಟಿ ಅವರು ಹೊಸ ಜೀವನ ಶುರು ಮಾಡಿದ್ದೇನೆ ಎನ್ನುವ ಮೂಲಕ ಮತ್ತೊಂದು ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಿವೇದಿತಾ-ಚಂದನ್‌ ಶೆಟ್ಟಿ ಅವರು ಮುದ್ದಾದ ಜೋಡಿ ಎಂದು ಕರೆಸಿಕೊಂಡಿದ್ದರು. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಕರ್ನಾಟಕದ ಮನೆಮಾತಾಗಿದ್ದರು. ಆದರೆ ದಿಢೀರ್‌ ಇಬ್ಬರೂ ಡಿವೋರ್ಸ್‌ ನಿರ್ಧಾರ ಮಾಡಿದ್ದು ಎಲ್ಲರಿಗೂ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲವೂ ಚೆನ್ನಾಗೇ ಇತ್ತು, ಡಿವೋರ್ಸ್‌ ಯಾಕೆ? ಎಂಬ ಪ್ರಶ್ನೆ ಮುಂದಿಟ್ಟಿದ್ದರು. ಆದರೆ ಹೊಂದಾಣಿಕೆ ಸಮಸ್ಯೆಯಿಂದ ಹಾಗೂ ಇಬ್ಬರ ಕೆರಿಯರ್‌ ದೃಷ್ಟಿಯಿಂದ ಪರಸ್ಪರ ಡಿವೋರ್ಸ್‌ ಪಡೆಯುತ್ತಿರುವುದಾಗಿ ಇಬ್ಬರೂ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದರು.

Kannada rapper Chandan Shetty Begins New Chapter With Suthradaari Kannada Movie

ಡಿವೋರ್ಸ್‌ ಬಗ್ಗೆ ಕ್ಲಾರಿಟಿ ಕೊಟ್ಟ ಬಳಿಕವೂ ಚಂದನ್-ನಿವೇದಿತಾ ಬಗ್ಗೆ ವದಂತಿ ಜೋರಾಗಿ ಹಬ್ಬಿತ್ತು. ಚಂದನ್‌ ಬೇರೆ ನಟಿಯೊಂದಿಗೆ ಆತ್ಮೀಯವಾಗಿದ್ದಾರೆ ಎಂಬ ಗಾಸಿಪ್‌ ಇತ್ತು. ನಿವೇದಿತಾ ಅವರ ಬಗ್ಗೆಯೂ ಕೆಲ ವದಂತಿಗಳು ಜೋರಾಗಿ ಸದ್ದು ಮಾಡಿದ್ದವು. ಈ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದರು. ಆದರೂ ನಿವೇದಿತಾ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳು ಹೆಚ್ಚಾಗಿದ್ದವು.

ಬಳಿಕ ಚಂದನ್‌ ಶೆಟ್ಟಿ ಮತ್ತೆ ಮಾತನಾಡಿ, ನಾವು ಡಿವೋರ್ಸ್ ಪಡೆದಿರುವ ವಿಚಾರ ನಮ್ಮ ವೈಯಕ್ತಿಕ. ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೇನೆ. ಏಕೆಂದರೆ ಇದು ಮಕ್ಕಳ ಆಟ ಅಲ್ಲ, ಇಬ್ಬರೂ ಯೋಚಿಸಿಯೇ ಡಿವೋರ್ಸ್ ತಗೊಂಡಿದ್ದೇವೆ. ನಾನು ಮತ್ತೆ ನಿವೇದಿತಾ ಮತ್ತೆ ಒಂದಾಗಲ್ಲ. ನಮ್ಮ ನಿರ್ಧಾರ ಸರಿಯಿದೆ. ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಕೆಟ್ಟ ಕಾಮೆಂಟ್ ಮಾಡಬೇಡಿ, ನಿಂದಿಸಬೇಡಿ ಎಂದು ಚಂದನ್ ಕೇಳಿಕೊಂಡಿದ್ದರು.

Kannada rapper Chandan Shetty Begins New Chapter With Suthradaari Kannada Movie

ಕನಸು ಈಡೇರುತ್ತಿದೆ, ಹೊಸ ಜೀವನ ಶುರು!

ಸೂತ್ರಧಾರಿ ಸಿನಿಮಾ ಮೂಲಕ ಚಂದನ್‌ ಶೆಟ್ಟಿ ಅವರು ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ನೀನು ಸಿನಿಮಾ ಹೀರೋ ಆಗಬೇಕು ಅಂತಿದ್ರು. ಆದರೆ ನಾನು ಕನ್ನಡಿ ಮುಂದೆ ನಿಂತು ನೋಡಿದ್ರೆ ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರುತ್ತೆ. ಆದರೆ ನನ್ನ ತಂದೆ ಆವತ್ತು ಹೇಳಿದ್ದ ಒಂದು ಮಾತು ಇದೇ ಮೇ 9ರಂದು ನಿಜ ಆಗುತ್ತಿದೆ. ನನ್ನ ತಂದೆಯ ಕನಸು ಈಡೇರುತ್ತಿದೆ ಎಂದು ಚಂದನ್‌ ಸಂತಸ ಹಂಚಿಕೊಂಡಿದ್ದಾರೆ.

Take a Poll

ಇನ್ನು ಈ ಸಿನಿಮಾದಲ್ಲಿ ನಾನು ಅಂಡರ್‌ಕವರ್‌ ಪೊಲೀಸ್‌ ಪಾತ್ರ ಮಾಡಿದ್ದೀನಿ. ಈ ಸಿನಿಮಾ ಮೂಲಕ ನಾನು ಹೊಸ ಜೀವನ ಶುರು ಮಾಡಿದ್ದೇನೆ. ಈ ಸಿನಿಮಾ ಒಪ್ಪಿಕೊಳ್ಳಲು ನಿರ್ಮಾಪಕ ನವರಸನ್ ಅವರೇ ಕಾರಣ. ದಯವಿಟ್ಟು ಎಲ್ಲರೂ ಈ ಸಿನಿಮಾಗೆ ಸಪೋರ್ಟ್‌ ಮಾಡಿ ಎಂದು ಚಂದನ್‌ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+