Kichcha Sudeep: ನಟ ದರ್ಶನ್‌ರನ್ನ ಕೆಣಕಿದ್ರಾ ಸುದೀಪ್? ಕಿಚ್ಚ ಹೀಗಂದಿದ್ದು ಯಾಕೆ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 25ರಂದು ಅಂದರೆ ಕ್ರಿಸ್ಮಸ್ ಹಬ್ಬದ ದಿನ ಸಿನಿಮಾ ತೆರೆ ಕಾಣಲಿದೆ ಎಂದು ಚಿತ್ರ ತಂಡ ದಿನಾಂಕ ಘೋಷಿಸಿದೆ. ಸಿನಿಮಾದಲ್ಲಿ ಕಿಚ್ಚ ಸುದೀಪ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಿಚ್ಚ ಸುದೀಪ್ ಸಿನಿಮಾ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್‌ನಲ್ಲಿ ಸುದೀಪ್ ರಕ್ತಸಿಕ್ತರಾಗಿ ಕಾಣಿಸಿಕೊಂಡಿದ್ದು ಸಿನಿಮಾ ಬಗ್ಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೆಲ್ಲದಕ್ಕೂ ಸುದೀಪ್ ಉತ್ತರಿಸಿದ್ದಾರೆ.
ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಅವರು, ಜಗತ್ತಿಯಲ್ಲಿರುವ ಪ್ರತಿಯೊಬ್ಬರೂ ಕೂಡ ಬುದ್ಧಿವಂತರು. ನಾವು ಪ್ರಪಂಚದಲ್ಲಿ ಏನೇ ನೋಡಲಿ ಅದರಲ್ಲಿ ನಾವೇನನ್ನ ತೆಗೆದುಕೊಳ್ಳಬೇಕು ಅನ್ನೋದು ನಮಗೆಲ್ಲಾ ಗೊತ್ತಿದೆ. ಏನ್ ಕಲಿಯಬೇಕು ಅಂತನೂ ಗೊತ್ತಿದೆ. ನಾವೆಲ್ಲಾ ಅದನ್ನು ಮಾಡ್ಕೊಂಡು ಬಂದಿದ್ದೇವೆ. ಆದರೆ ಸಿನಿಮಾ ನಿಜ ಜೀವನ ಆಗುವುದಿಲ್ಲ. ಸಿನಿಮಾದಲ್ಲಿ ಕಥೆಗೆ ಏನ್ ಬೇಕು ಅದನ್ನು ಮಾಡಿಕೊಂಡು ಹೋಗುತ್ತೇವೆ ಎಂದು ವಿವರಿಸಿದ್ದಾರೆ.

ಮ್ಯಾಕ್ಸ್ ಸಿನಿಮಾನದಲ್ಲಿ ರಕ್ತಪಾತ ಇದಿಯಾ?
ಮ್ಯಾಕ್ಸ್ ಸಿನಿಮಾನದಲ್ಲಿ ರಕ್ತಪಾತ ಇಲ್ಲ. ಪೋಸ್ಟರ್ ನೋಡಿ ನಿಮಗೆ ಹಾಗೆ ಅನಿಸಿರಬಹುದು. ರಕ್ತಪಾತ ಅಂದರೆ ಸಿನಿಮಾನೇ ರಕ್ತಪಾತ ಅಲ್ಲ. ಸಿನಿಮಾದಲ್ಲಿ ಅದೊಂದು ಭಾಗ ಅಷ್ಟೇ. ಒಂದು ಸಿನಿಮಾ ಅಂದರೆ ಸಾಕಷ್ಟು ವಿಚಾರ ಇರುತ್ತದೆ. ಆ ಸಿನಿಮಾದಲ್ಲಿ ನನಗೆ ತಾಯಿ ಇದ್ದಾರೆ. ಆ ತಾಯಿ ನನಗೆ ಬುದ್ಧಿ ಹೇಳ್ತಾರೆ, ನನ್ನ ಕಾಪಾಡ್ತಾರೆ. ಇನ್ನೂ ಯಾರ್ಯಾರೋ ಇದಾರೆ ಅವರನ್ನ ನಾನು ಕಾಪಾಡುತ್ತಿರುತ್ತೇನೆ. ಇನ್ಯಾರೋ ಇರ್ತಾರೆ ಅವರಿಗೆ ಹೊಟ್ಟೆ ಹಸಿವಾಗಿರುತ್ತೆ, ಅವರಿಗೆ ನಾವು ಊಟ ಹಾಕುತ್ತೇವೆ. ಇದೆಲ್ಲವೂ ಸೇರಿದಾಗ ಒಂದು ಸಿನಿಮಾ ಆಗುತ್ತದೆ ಎಂದು ಕಿಚ್ಚ ಸುದೀಪ್ ಸಿನಿಮಾದ ಒಳನೋಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಿನಿಮಾದಲ್ಲಿ ಲಾಂಗ್ ಹಿಡ್ಕೊಂಡರೆ ವೇದಿಗೆಗೂ ಹಾಗೇ ಬರಲು ಸಾಧ್ಯವಿಲ್ಲ...
ನಾನು ವೇದಿಕೆಗೆ ಬರುವಾಗ ನೇರವಾಗಿ ಲಾಂಗು ಮಚ್ಚು ಹಿಡಿದುಕೊಂಡು ಬದ್ನಾ? ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಹುಚ್ಚಾ ಸಿನಿಮಾ ಮಾಡಿದೆ. ಅದ್ರಲ್ಲಿ ಯಾರನ್ನೋ ಹೊಡೆದು ಆಸ್ಪತ್ರೆಗೆ ಹೋದೆ. ಇವತ್ತಿನವರೆಗೂ ಕ್ಲೈಮ್ಯಾಕ್ಸ್‌ನಲ್ಲಿ ಸಿನಿಮಾದಲ್ಲಿ ನನ್ನನ್ನು ಹೊಡೆದವರಿಗೆ ಕೊನೆಯಲ್ಲಿ ನಾನು ಹೊಡೆದೇ ಇಲ್ಲ. ಇನ್ನೂ ಓಡಾಡ್ಕೊಂಡು ಇದಾರೆ ಮಾರ್ಕೇಟ್ ಅಲ್ಲಿ ಅಂತ ಸುದೀಪ್ ಕಾಮಿಡಿ ಮಾಡಿದ್ದಾರೆ. ನಾನು ತುಂಬಾ ಒಳ್ಳೆಯ ಹುಡುಗ ಅಂತಹ ಕೆಲಸ ಮಾಡಲ್ಲ. ಏನಾದರೂ ಆಗಲಿ ಮುಂದೆ ಸಾಗು ನೀ ಅಂತ ಹೇಳಿ ಹೇಳಿ ಇಲ್ಲಿವರೆಗೂ ಬಂದು ನಿಂತಿದಿವಿ ಎಂದು ಸುದೀಪ್ ಹೇಳಿದ್ದಾರೆ.
ಸುದೀಪ್ ಮಾತಿನಿಂದ ತಿಳಿದಿದ್ದೇನು?
ಸಿನಿಮಾದಲ್ಲಿ ಎಲ್ಲವೂ ಇರುತ್ತದೆ ಅದನ್ನೆಲ್ಲಾ ಪೋಸ್ಟರ್‌ನಲ್ಲಿ ತೋರಿಸಲು ಆಗುವುದಿಲ್ಲ ಅನ್ನೋದನ್ನು ಸುದೀಪ್ ವಿವರಿಸಿದ್ದಾರೆ. ಮತ್ತೊಂದು ವಿಚಾರ ಅಂದರೆ ಸಿನಿಮಾದಲ್ಲಿ ಎಲ್ಲವೂ ಇರುತ್ತದೆ ಅದರಲ್ಲಿ ನಾವು ಯಾವುದು ಬೇಕು ಅದನ್ನು ಮಾತ್ರ ತೆಗೆದುಕೊಳ್ಳಬೇಕು ಅನ್ನೋದು ನಮ್ಮೆಲ್ಲರಿಗೂ ಗೊತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತೊಂದು ಇಂಟ್ರಸ್ಟಿಂಗ್ ಅಂದರೆ ಸಿನಿಮಾದಲ್ಲಿ ಲಾಂಗ್ ಮಚ್ಚು ಹಿಡಿದ ತಕ್ಷಣ ನಾನು ವೇದಿಕೆಗೆ ಲಾಂಗು ಮಚ್ಚು ಹಿಡಿದುಕೊಂಡು ಬಂದಿಲ್ಲ. ನಿಜ ಜೀವನ ಬೇರೆ ಸಿನಿಮಾ ಬೇರೆ ಎನ್ನುವುದನ್ನು ಸುದೀಪ್ ಅದ್ಬುತವಾಗಿ ವಿವರಿಸಿದ್ದಾರೆ.
ಹಾಗಂತ ಸಿನಿಮಾ ಕೆಟ್ಟದ್ದು ಅದರಿಂದ ಏನನ್ನೂ ನಾವು ಕಲಿಯಲ್ಲ ಅಂತ ಹೇಳಲೂ ಆಗಲ್ಲ. ಕಲಿಯುವುದು ತುಂಬಾ ಇರುತ್ತೆ. ಬಿಟ್ಟುಬಿಡುವುದು ತುಂಬಾ ಇರುತ್ತದೆ. ಹೀಗಾಗಿ ಸಿನಿಮಾದಲ್ಲಿ ಲಾಂಗು ಹಿಡಿದು ಹೀರೋ ಆದಂತೆ ನಿಜ ಜೀವನದಲ್ಲಿ ಲಾಂಗ್ ಹಿಡಿದು ಹೀರೋ ಆಗಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಸುದೀಪ್ ವಿವರಣೆ ನೀಡಿದ್ದಾರೆ. ಈ ಮಾತು ನೇರವಾಗಿ ಸಿನಿಮಾ ಮಾಡಿ ಹೀರೋ ಆಗಿ ನಿಜ ಜೀವನದಲ್ಲೂ ಅದೇ ರೀತಿ ತಪ್ಪು ಮಾಡುವ ನಟರಿಗೆ ಸೂಚನೆ ನೀಡಿದಂತೆ ಇತ್ತು.
ಒಟ್ಟಿನಲ್ಲಿ ಎರಡುವರೆ ವರ್ಷಗಳ ಬಳಿಕ ಸುದೀಪ್ ಮ್ಯಾಕ್ಸ್ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಡಿಸೆಂಬರ್ 25ರಂದು ಸಿನಿಮಾಕ್ಕೆ ಜನ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications