ಕಂಗೆಟ್ಟಿರುವ ಕನ್ನಡ ಚಿತ್ರರಂಗಕ್ಕೆ ಕೊನೆಯ ಮೊಳೆ? ವ್ಯಾಪಕ ಲೈಂಗಿಕ ದೌರ್ಜನ್ಯದ ಆರೋಪಕ್ಕೆ...

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದ್ದರೆ, ಕನ್ನಡ ಭಾಷೆ 2000ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಹೀಗೆ, ಕನ್ನಡಿಗರು & ಕನ್ನಡ ಸಿನಿಮಾ ಪ್ರಪಂಚ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಇಂತಿಪ್ಪ ಕನ್ನಡ ಸಿನಿಮಾ ಜಗತ್ತಿನಲ್ಲಿ ಇದೀಗ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ, ಕನ್ನಡ ಸಿನಿಮಾಗಳು ಸಾಲು ಸಾಲಾಗಿ ತೋಪೆದ್ದು ಹೋಗುತ್ತಿರುವ ಸಮಯದಲ್ಲೇ ಇಂತಹ ಮಾತು ಕೇಳಿಬಂದಿದ್ದು, ಕನ್ನಡಿಗರಿಗೆ ಆಘಾತವನ್ನೇ ನೀಡಿದೆ. ಹಾಗಾದ್ರೆ ಕಂಗೆಟ್ಟಿರುವ ಕನ್ನಡ ಚಿತ್ರರಂಗಕ್ಕೆ ಕೊನೆಯ ಮೊಳೆ ಬಿತ್ತಾ?

ಕನ್ನಡ ಸಿನಿಮಾ ರಂಗದಲ್ಲಿ ಚಿತ್ರಗಳು ಓಡುತ್ತಿಲ್ಲ, ಅದು ಬಿಡಿ ಒಳ್ಳೆಯ ಸಿನಿಮಾಗಳೇ ಇಲ್ಲ ಎಂಬ ಕಾರಣಕ್ಕೆ ಪ್ರೇಕ್ಷಕರು ಕೂಡ ಬೇರೆ ಬೇರೆ ಭಾಷೆಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಈ ಸಮಯದಲ್ಲೇ ಲೈಂಗಿಕ ಹಗರಣಗಳು ಕೂಡ ಪವಿತ್ರವಾಗಿದ್ದ ನಮ್ಮ ಕನ್ನಡ ಸಿನಿಮಾ ರಂಗಕ್ಕೆ ಕೆಟ್ಟ ಹೆಸರು ತರುತ್ತಿವೆ ಎಂಬ ಆರೋಪ ಇದೆ. ಹೀಗೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರುತ್ತಿದೆ. ಮತ್ತೊಂದು ಕಡೆ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧಾರ ಮಾಡ್ತಿದೆ. ಅದಕ್ಕೂ ಮೊದಲು ಕಮಿಟಿ ಒಂದನ್ನ ರಚನೆ ಮಾಡಿ, ಕೇರಳ ಮಾದರಿಯಲ್ಲಿ ತನಿಖೆ ನಡೆಸಲು ಮುಂದಾಗಿದೆ ಎಂಬ ಮಾಹಿತಿ ಸಂಚಲನ ಸೃಷ್ಟಿ ಮಾಡಿದೆ.

Kannada Cinema Industry Should Come Out Of This Situation

ಕಂಗೆಟ್ಟಿರುವ ಕನ್ನಡ ಚಿತ್ರರಂಗಕ್ಕೆ...

ಕರ್ನಾಟಕದ ಸಿನಿಮಾ ರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ದೊಡ್ಡ ಸದ್ದು ಮಾಡಿರುವ ಸಿನಿಮಾಗಳು ಬಂದೇ ಇಲ್ಲ. ಕೆಜಿಎಫ್ & ಕಾಂತಾರ ಸಿನಿಮಾಗಳು ಅಬ್ಬರಿಸಿದ್ದು ಬಿಟ್ಟರೆ ಈ ನಮ್ಮ ಕನ್ನಡ ಚಿತ್ರರಂಗ ನಿಂತ ನೀರಾಗಿದೆ ಎಂಬ ಆರೋಪ ಇದೆ. ಅದರಲ್ಲೂ ಹೊಸದಾಗಿ ಬರುವ ಉತ್ತಮ ಚಿತ್ರಗಳಿಗೆ ಬೆಂಬಲ ಸಿಗುತ್ತಿಲ್ಲ ಎಂಬ ಕೊರಗು ಕೂಡ ಕಾಡುತ್ತಿದೆ. ಹೀಗಾಗಿ ದೊಡ್ಡ ದೊಡ್ಡ ಸ್ಟಾರ್ ನಟರು ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ಬಿಟ್ಟು ಹೊರ ಹೋಗಿ ನಟನೆ ಮಾಡುತ್ತಿದ್ದಾರೆ.

ಇಷ್ಟೆಲ್ಲದರ ನಡುವೆ ಇದೀಗ ಲೈಂಗಿಕ ದೌರ್ಜನ್ಯ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಜನ, ಕಂಗೆಟ್ಟಿರುವ ಕನ್ನಡ ಚಿತ್ರರಂಗಕ್ಕೆ ಕೊನೆಯ ಮೊಳೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದು, ಸೂಕ್ತ ತನಿಖೆ ನಡೆಸಿ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾನೇ ಕನ್ನಡ ಸಿನಿಮಾ ರಂಗದ ನಟಿಯರು & ನಟರು ಆಗ್ರಹ ಮಾಡುತ್ತಿದ್ದಾರೆ.

ಕನ್ನಡ ನಾಡಿಗೆ ದೊಡ್ಡ ಇತಿಹಾಸ

ನಮ್ಮ ಕನ್ನಡ ನಾಡು 3 ಸಾವಿರ ವರ್ಷ ಇತಿಹಾಸ ಇರುವ ನಾಡು.. ನಮ್ಮ ನಾಡು ಇಡೀ ದೇಶವನ್ನೇ ಆಳಿದ್ದ ಸಾಮ್ರಾಜ್ಯಗಳನ್ನು ಹೊಂದಿದ್ದ ನಾಡು.. ಆದರೆ ಸುಮಾರು 100 ವರ್ಷ ಇತಿಹಾಸ ಇರುವ ಸಿನಿಮಾ ಇಂಡಸ್ಟ್ರಿ ಇದೀಗ ನಮ್ಮ ಕನ್ನಡ ನಾಡಿನ ಮಾನ & ಮರ್ಯಾದಿ ಹರಾಜು ಹಾಕಬೇಕಾ? ಅಂತಾ ಇದೀಗ ಕನ್ನಡಿಗರು ಸಿನಿಮಾ ಮಂದಿಗೆ ಪ್ರಶ್ನೆ ಮಾಡ್ತಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಕೆಲವು ನಟರ ಅಂದ್ರೆ ಸೋ ಕಾಲ್ಡ್ ಹೀರೋಗಳ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+