ಬಿಗ್‌ಬಾಸ್ ಬಳಿಕ ಪಾಲಿಟಿಕ್ಸ್‌ನತ್ತ ಜಗದೀಶ್, ಯಾವ ಪಕ್ಷ-ಯಾವ ಕ್ಷೇತ್ರದಿಂದ ಗೊತ್ತಾ?
ಸೋಶಿಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿಸಿ, ಬಿಗ್ ಬಾಸ್ ಮನೆಗೂ ಹೋಗಿದ್ದರು ಜಗದೀಶ್. ಇನ್ನು ಈ ಬಿಗ್‌ಬಾಸ್ ಸೀಸನ್ ಶುರುವಾದಾಗಲೂ ಒಳ್ಳೇ ಹೈಪ್ ಕ್ರಿಯೇಟ್ ಮಾಡಿದ್ದರು. ಒಳಗೆ ಹೋದ ನಂತರವೂ ಜಗದೀಶ್ ಅವರದ್ದೇ ಎಲ್ಲೆಡೆ ಸದ್ದು ಕೇಳಿಬಂದಿತ್ತು. ಇದು ಮಿತಿ ಮೀರಿದ ಕಾರಣ ಅವರನ್ನು ಸದ್ಯ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಇದರ ಬೆನ್ನಲ್ಲೇ ಜಗದೀಶ್ ಅವರು ಮತ್ತೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಇಲ್ಲಿವರೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಜಗದೀಶ್ ಅವರು ಕರ್ನಾಟಕದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸೆಲೆಬ್ರಿಟಿಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದರು. ಈ ಕೃಪೆಯಿಂದಲೇ ಅವರನ್ನು ಬಿಗ್‌ಬಾಸ್ ತನ್ನ ಮನೆವರೆಗೆ ಕರೆಸಿಕೊಂಡಿತ್ತು.

ಇನ್ನು ಮನೆಯಿಂದ ಹೊರಬಂದಿದ್ದೇ ತಡ ಜಗದೀಶ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ನೀಡಿದ್ದಾರೆ. ಖಾಸಗಿ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಜಗದೀಶ್ ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆಯೂ ಜಗದೀಶ್ ಅವರಂತಹ ದಿಟ್ಟ ಜನರು ರಾಜಕೀಯಕ್ಕೆ ಬರಬೇಕು ಎಂದು ಹಲವರು ಕಾಮೆಂಟ್ ಮಾಡುತ್ತಿದ್ದರು.
ಈಗ ಖುದ್ದು ಅವರೇ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆಗೆ ನಿಲ್ಲಬೇಕು ಎಂದು ಆಸೆ ಕೂಡ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದವರು ನನ್ನ ಕರೆದು ಟಿಕೆಟ್ ಕೊಡುವುದಾದರೆ ಈ ಚುನಾವಣೆಗೆ ನಿಲ್ಲುತ್ತೇನೆ ಎಂದು ಜಗದೀಶ್ ಹೇಳಿದ್ದಾರೆ.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟು, ಎಲೆಕ್ಷನ್‌ಗೆ ನಿಲ್ಲು ಎಂದರೆ ನಾನು ಕಂಡಿತವಾಗಿಯೂ ನಿಲ್ಲುತ್ತೇನೆ. ನನಗೆ ಈ ಹೈಕಮಾಂಡ್ ಬಗ್ಗೆ ಅಷ್ಟೆಲ್ಲ ಗೊತ್ತಿಲ್ಲ, ನಾನು ಅಷ್ಟು ದೊಡ್ಡ ವ್ಯಕ್ತಿನೂ ಅಲ್ಲ. ಕಾಂಗ್ರೆಸ್ ಪಕ್ಷವೇನಾದ್ರೂ ನನಗೆ ಚಾನ್ಸ್ ಕೊಡೋದಾದ್ರೆ, ಹಾಕ್ಕೊಂಡು ರುಬ್ಬೋದೆ ಎಂದಿದ್ದಾರೆ.
ನಮ್ಮ ದೇಶದಲ್ಲಿ ಟೀ ಮಾರೋ ವ್ಯಕ್ತಿನಾ ಪ್ರಧಾನಿ ಮಾಡೋದಾದ್ರೆ, ನಾನು ಯಾಕೆ ಆಗಬಾರದು? ನಾನು ಸಿಎಂ ಆಗುತ್ತೇನೆ ಅಂದ್ರೂ ಅದು ಕಡಿಮೇನೆ ಎಂದಿದ್ದಾರೆ ಜಗದೀಶ್. ನಾನು ಪ್ರಧಾನ ಮಂತ್ರಿ ಆಗಬೇಕಾದ ವ್ಯಕ್ತಿ. ಮುಂದೆ ಆದರೂ ಆಶ್ಚರ್ಯವೇನಿಲ್ಲ. ನಾನು ಅದೇ ಮಾರ್ಗದಲ್ಲಿದ್ದೇನೆ. ನನ್ನು ಗುರಿ ತುಂಬಾ ದೊಡ್ಡದು ಎಂದೆಲ್ಲ ಜಗದೀಶ್ ತಮ್ಮ ಭವಿಷ್ಯದ ಬಗ್ಗೆ ಮಾತುಗಳನ್ನಾಡಿದ್ದಾರೆ.
ವಿಧಾನಸೌಧಕ್ಕೆ ಬಡವರ ಮಕ್ಕಳೂ ಹೋಗ್ಬೇಕು. ಬಡತನವನ್ನು ಕಂಡವರು ಶಾಸಕ, ಸಂಸದ, ಸಚಿವರಾಗಬೇಕು. ಆಗ ಮಾತ್ರ ನಮ್ಮ ದೇಶದ ಏನಾದ್ರೂ ಉದ್ಧಾರ ಆಗುತ್ತೆ. ಆದ್ರೆ ಚೆನ್ನಾಗಿ ಹೊಟ್ಟೆ ತುಂಬಿರುವವರು ದೇಶ ಹಾಳು ಮಾಡ್ತಾರೆ. ಬಡವ ಮಕ್ಳು ಅಧಿಕಾರಕ್ಕೆ ಬಂದ್ರೆ ದೇಶ ಬೆಳೆಯುತ್ತೆ ಎಂದು ನಂಬೋನು ನಾನು. ಏಕೆಂದರೆ ನಾನೂ ಸಹ ಒಬ್ಬ ಜನಸಾಮಾನ್ಯ ಎಂದಿದ್ದಾರೆ.
ನಾನು ಸಿಎಂ, ಪಿಎಂ ಆದ್ರೆ ತಪ್ಪೇನು? ಏನಾದ್ರೂ ಬಿಡಲ್ಲ ಮುಂದೆ ನನ್ನ ಗುರಿ ತಲುಪುತ್ತೇನೆ. ಮುಂದಿನ 11 ವರ್ಷಗಳಲ್ಲಿ ನನ್ನನ್ನ ಬಚ್ಚ ಎಂದುಕೊಂಡಿರುವವರ ಮುಂದೆ ನಾನೇನು ಎಂಬುದನ್ನು ತೋರಿಸುತ್ತೇನೆ ಎಂದು ಜಗದೀಶ್ ಶಪಥ ಕೂಡ ಮಾಡಿದ್ದಾರೆ.












Click it and Unblock the Notifications