Gold Suresh: ಗೋಲ್ಡ್ ಸುರೇಶ್ ಹೊರಬಂದಿದ್ದೇಕೆ, ಅವರ ಕುಟುಂಬಕ್ಕೆ ಏನಾಯ್ತು ಎಂಬುದು ರಿವೀಲ್
ಕನ್ನಡ ಬಿಗ್‌ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ತುರ್ತು ಕಾರಣದಿಂದಾಗಿ ಆಟ ನಿಲ್ಲಿಸಿ ಹೊರಬಂದಿದ್ದಾರೆ ಎನ್ನಲಾಗಿದೆ. ಈ ವಾರ ಅವರಿಗೆ ಉತ್ತಮ ಎನ್ನುವ ಪಟ್ಟ ಕೂಡ ಸಿಕ್ಕಿತ್ತು. ಇದರ ನಡುವೆಯೇ ಅವರನ್ನು ಬಿಗ್‌ಬಾಸ್ ಮನೆಯಿಂದ ದಿಢೀರನೆ ಹೊರಗೆ ಕರೆಸಿಕೊಳ್ಳಲಾಗಿದೆ. ಕ್ಯಾಪ್ಟನ್ ಸ್ಥಾನ ಸಿಕ್ಕಿ, ಚೆನ್ನಾಗಿ ಆಟ ಆಡುತ್ತಿರುವಾಗಲೇ ಅವರು ಹೊರಬಂದಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ.
ಇನ್ನು ಗೋಲ್ಡ್ ಸುರೇಶ್ ಅವರ ಕುಟುಂಬದಲ್ಲಿ ಎಮರ್ಜೆನ್ಸಿ ಇರುವುದರಿಂದ ಅವರನ್ನು ತುರ್ತಾಗಿ ತೆರಳುವಂತೆ ಬಿಗ್ ಬಾಸ್ ಸೂಚಿಸಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಕೇಳಿದ ಕೂಡಲೇ ಬಿಗ್‌ಬಾಸ್ ಮನೆಮಂದಿಯೆಲ್ಲ ಆಘಾತಗೊಂಡು ಕೆಲವರು ಕಣ್ಣೀರು ಕೂಡ ಹಾಕಿದ್ದಾರೆ. ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಕುಟುಂಬದವರಿಗೆ ಜಾಸ್ತಿಯಿದೆ. ತಡ ಮಾಡದೆ ಕೂಡಲೇ ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಬಿಗ್‌ಬಾಸ್ ಮನೆಯಿಂದ ಹೊರ ಬನ್ನಿ ಎಂದು ಶೋ ವೇಳೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಗೋಲ್ಡ್ ಸುರೇಶ್ ಆತಂಕಕ್ಕೊಳಗಾಗಿ ಬೇಸರದಿಂದ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳು ಗೋಲ್ಡ್ ಸುರೇಶ್ ಅವರಿಗೆ ಧೈರ್ಯ ತುಂಬಿದ್ದಾರೆ. ನಿಮ್ಮ ಫ್ಯಾಮಿಲಿಗೆ ಏನೂ ಆಗಲ್ಲ, ಧೈರ್ಯವಾಗಿ ಹೋಗಿ ಬನ್ನಿ ಎಂದು ಬೆನ್ನುತಟ್ಟಿದ್ದಾರೆ. ಆದರೂ ಗೋಲ್ಡ್ ಸುರೇಶ್ ಅವರು ತೀವ್ರ ಬೇಸರ ಹಾಗೂ ಕುಟುಂಬಕ್ಕೆ ಏನಾಗಿದೆಯೋ ಎನ್ನುವ ಚಿಂತೆಯಲ್ಲಿ ಭಾವುಕರಾಗಿ ಅಲ್ಲಿಂದ ಹೊರಟಿದ್ದಾರೆ.
ಈ ವೇಳೆ ಬಿಗ್‌ಬಾಸ್ ಮನೆಗೆ ಹೇಗೆ ಬಂದಿದ್ದೆನೋ, ಹಾಗೆಯೇ ಗೋಗ್ತೀನಿ ಎಂದು ತಮ್ಮ ಗೋಲ್ಡ್ ಅನ್ನು ಮೈಮೇಲೆ ಧರಿಸಿಕೊಂಡು ನೋವಿನಿಂದ ಹೊರಬಂದಿರುವ ದೃಶ್ಯ ಪ್ರೋಮೋದಲ್ಲಿದೆ. ಆದರೆ, ನಿಜಕ್ಕೂ ಗೋಲ್ಡ್ ಸುರೇಶ್ ಅವರ ಕುಟುಂಬಕ್ಕೆ ಏನಾಗಿದೆ ಎಂದು ಎಲ್ಲರಿಗೂ ಆತಂಕವಿತ್ತು.

ಅಲ್ಲದೆ ಗೋಲ್ಡ್ ಸುರೇಶ್ ಅವರು ಹೊರಬಂದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸುರೇಶ್ ಅವರ ತಂದೆಗೆ ಅನಾರೋಗ್ಯವಾಗಿದೆ ಎಂಬ ವದಂತಿ ಕೂಡ ಹರಿದಾಡಿತ್ತು. ತಂದೆ ಅನಾರೋಗ್ಯದ ಹಿನ್ನೆಲೆ ಸುರೇಶ್ ಬಿಗ್‌ಬಾಸ್‌ನಿಂದ ಹೊರಬಂದಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು. ಇದರ ಬೆನ್ನಲ್ಲೇ ಕೆಲವರು ಗೋಲ್ಡ್ ಸುರೇಶ್ ಅವರ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ. ಅಸಲಿಗೆ ಗೋಲ್ಡ್ ಸುರೇಶ್ ಅವರ ತಂದೆ ಕ್ಷೇಮವಾಗಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.
ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ವಿಡಿಯೋ ಮೂಲಕ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸುರೇಶ ಮೊಣಕಾಲು ನೋವಿನ ಕಾರಣಕ್ಕೆ ಬಿಗ್‌ಬಾಸ್ ಬಿಟ್ಟು ಬಂದಿರಬೇಕು. ಆದರೆ ನಮ್ಮ ಮನೆ ಹಾಗೂ ಊರಿನಲ್ಲೂ ಯಾವುದೇ ತೊಂದರೆ ಇಲ್ಲ, ಎಲ್ಲರೂ ಕ್ಷೇಮವಾಗಿದ್ದೇವೆ. ಸುರೇಶ್ ಅವರ ಬೆಂಗಳೂರಿನ ನಿವಾಸದಲ್ಲೂ ಯಾವುದೇ ತೊಂದರೆ ಇಲ್ಲ ಎಂದು ಅವರ ತಂದೆಯೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ಬಿಗ್‌ಬಾಸ್ ಕುಟುಂಬದ ಕಾರಣ ನೀಡಿ ಹೊರಗೆ ಕರೆಸಿಕೊಂಡಿರುವ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿವೆ.












Click it and Unblock the Notifications