ಈ ವರ್ಷವೇ ಮದುವೆ ಫಿಕ್ಸ್‌: ಕೊನೆಗೂ ಭಾವಿ ಪತಿಯ ಗುಟ್ಟು ಬಿಟ್ಟುಕೊಟ್ಟ ಅನುಶ್ರೀ

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಕರ್ನಾಟಕದ ಮನೆಮಗಳಾಗಿರುವ ಅನುಶ್ರೀ ಅವರ ಮದುವೆ ಮಾತುಕತೆಯಂತೂ ಸದಾ ಸುದ್ದಿಯಲ್ಲಿರುತ್ತದೆ. ರಿಯಾಲಿಟಿ ಶೋಗಳಲ್ಲಿ, ಯೂಟ್ಯೂಬ್‌ ವಿಡಿಯೋಗಳಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಅನುಶ್ರೀ ಮದುವೆ ಟಾಪಿಕ್‌ ಇದ್ದೇ ಇರುತ್ತದೆ.

'ಕೊನೆಗೂ ಆ್ಯಂಕರ್‌ ಅನುಶ್ರೀ ಮದುವೆ ಫಿಕ್ಸ್‌, ಇವರೇ ನೋಡಿ ಆ್ಯಂಕರ್‌ ಅನುಶ್ರೀ ಪತಿ, ಅನುಶ್ರೀ ಮದುವೆ ವಿಡಿಯೋ ನೋಡಿ, ಮದುಮಗಳಾದ ಅನುಶ್ರೀ ಎಂದೆಲ್ಲಾ ನೂರಾರು ವಿಡಿಯೋ ಹಾಗೂ ಸುದ್ದಿಗಳನ್ನು ಈಗಾಗಲೇ ನೀವು ನೋಡಿರಬಹುದು. ಇಂತಹ ಊಹಾಪೋಹಗಳು ಸಾಕಷ್ಟು ಹರಿದಾಡುತ್ತಲೇ ಇರುತ್ತದೆ. ಆದರೆ ಅದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿಗಳು.

Kannada Anchor Anushree Finally Talks About Her Marriage

ಆದರೆ ಇದೀಗ ಅನುಶ್ರೀ ಮದುವೆ ಬಗ್ಗೆ ಅಧೀಕೃತವಾದ ಮಾಹಿತಿಯೊಂದು ಹೊರಬಿದ್ದಿದೆ. ಬೇರೇ ಯಾರೋ ಅಲ್ಲ, ಸ್ವತಃ ನಿರೂಪಕಿ ಅನುಶ್ರೀಯೇ ತಮ್ಮ ಮದುವೆ ಹಾಗೂ ಭಾವಿ ಪತಿಯ ಬಗ್ಗೆ ಮಾತನಾಡಿದ್ದು, ಈವರೆಗೂ ರಹಸ್ಯವಾಗಿ ಇಟ್ಟುಕೊಂಡಿದ್ದ ಕೆಲವು ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ ವಿದ್ಯಾಪತಿ ಸಿನಿಮಾ ನಾಳೆ (ಏಪ್ರಿಲ್‌ 10) ಗುರುವಾರ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ನಿರೂಪಕಿ ಅನುಶ್ರೀ ಚಿತ್ರತಂಡಕ್ಕೆ ಶುಭಕೋರಲು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದು, ಈ ವೇಳೆ ವಿದ್ಯಾಪತಿ ಸಿನಿಮಾದ ನಾಯಕ ನಾಗಭೂಷಣ್ ಹಾಗೂ ನಾಯಕಿ ಮಲೈಕಾ ವಸುಪಾಲ್ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದಾರೆ.

ಇನ್ಸ್ಟಾಗ್ರಾಮ್‌ ಲೈವ್‌ನಲ್ಲೇ ನಟಿ ಮಲೈಕಾ ವಸುಪಾಲ್ ನಿಮ್ಮ ಮದುವೆ ಯಾವಾಗ ಎಂದು ನಾಗಭೂಷಣ್ ಕೇಳುತ್ತಿದ್ದಾರೆ ಎಂದು ಅನುಶ್ರೀಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನುಶ್ರೀ ಈ ವರ್ಷವೇ ಎಂದಿದ್ದಾರೆ. ವಿದ್ಯಾಪತಿ ಸಿನಿಮಾದ ಪ್ರಮೋಷನ್‌ ವೇಳೆ ನಾಗಭೂಷಣ್‌ಗಾಗಿ ಹೇಳುತ್ತಿದ್ದೇನೆ ಈ ವರ್ಷ ಮದುವೆಯಾಗುತ್ತೇನೆ ಎನ್ನುವ ಮೂಲಕ ಅನುಶ್ರೀ 2025ರ ಅಂತ್ಯದೊಳಗೆ ಹಸೆಮಣೆ ಏರುವುದಾಗಿ ತಿಳಿಸಿದ್ದಾರೆ.

Kannada Anchor Anushree Finally Talks About Her Marriage

ಇದೇ ವೇಳೆ ತಮ್ಮ ಹುಡುಗ ಹೇಗಿರಬೇಕು ಎಂದು ಮಾತನಾಡಿದ ನಿರೂಪಕಿ ಅನುಶ್ರೀ, 'ನನ್ನ ಹುಡುಗ ತುಂಬಾ ಜವಾಬ್ದಾರಿಯುತ ವ್ಯಕ್ತಿಯಾಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಜೀವನದ ಬಗ್ಗೆ ಅವನಿಗೆ ಜವಾಬ್ದಾರಿ ಇದ್ದರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕಲು ಬಿಡಬೇಕು' ಎಂದು ಹೇಳುವ ಮೂಲಕ ಈ ವರ್ಷವೇ ಮದುವೆಯಾಗುವುದಾಗಿ ಕೊನೆಗೂ ಅಧೀಕೃತವಾಗಿ ಅನುಶ್ರೀ ಹೇಳಿದ್ದಾರೆ.

Take a Poll

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+