20ನೇ ವಯಸ್ಸಿಗೆ ಕನ್ನಡ ಸಿನಿಮಾ ಮಾಡಿದ್ದ ಖ್ಯಾತ ನಟಿ ದಿಢೀರ್... Kannada Actress
ಕನ್ನಡ ಸಿನಿಮಾ ಇಂಡಸ್ಟ್ರಿ ಶತಮಾನ ಅಂದ್ರೆ 100 ವರ್ಷಗಳ ಇತಿಹಾಸ ಹೊಂದಿರುವ ಸಿನಿಮಾ ರಂಗ. ಅದರಲ್ಲೂ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನ ಅತಿದೊಡ್ಡ ಸಿನಿಮಾ ಇಂಡಸ್ಟ್ರಿಗಳ ಪೈಕಿ ಒಂದು ಎಂಬುದು ಹೆಮ್ಮೆಯ ವಿಚಾರ. ಆದರೆ, ಕಳೆದ ಕೆಲವು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯ ಸಾಲು ಸಾಲು ನಟ & ನಟಿಯರ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತವನ್ನೇ ತಂದಿದೆ. ತಮ್ಮ ತಮ್ಮ ನೆಚ್ಚಿನ ನಟಿ & ನಟರ ಸಾವಿನ ಸುದ್ದಿ ಕೇಳಿ ಕನ್ನಡ ಸಿನಿಮಾ ಅಭಿಮಾನಿಗಳು ಕೂಡ ಆಘಾತದಲ್ಲೇ ಮುಳುಗಿ ಹೋಗಿದ್ದಾರೆ. ಹೀಗಿದ್ದಾಗಲೇ, 20ನೇ ವಯಸ್ಸಿಗೆ ಕನ್ನಡ ಸಿನಿಮಾ ಮಾಡಿದ್ದ ಖ್ಯಾತ ನಟಿ ದಿಢೀರ್...
ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ಹೆಸರು ಇದೆ, ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಎಂದಿಗೂ ಮರೆಯಲು ಆಗದ ಸಿನಿಮಾಗಳು ಬಂದು ಹೋಗಿವೆ. ಹೀಗಿದ್ದಾಗ ಕೆಲವು ಕಾರಣಗಳಿಗೆ ಪದೇ ಪದೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟ & ನಟಿಯರು ಸುದ್ದಿಯಲ್ಲಿ ಇರುತ್ತಾರೆ. ಈಗಲೂ ಅಷ್ಟೇ ಹಳೆಯ ಕನ್ನಡ ಸಿನಿಮಾದಲ್ಲಿ ಮಿಂಚಿದ್ದ ನಟಿ ಸುದ್ದಿಯಲ್ಲಿದ್ದಾರೆ. ಹಾಗದ್ರೆ ಯಾವ ಕಾರಣಕ್ಕೆ? ಮುಂದೆ ಓದಿ.

ಖಿನ್ನತೆಯಿಂದ ನರಳಿದ್ದ ಖ್ಯಾತ ನಟಿ...
ಹೌದು, 1992 ರಲ್ಲಿ ತೆರೆಕಂಡ ವಿ. ರವಿಚಂದ್ರನ್ ಅಭಿನಯದ ಶ್ರೀರಾಮಚಂದ್ರ ಸಿನಿಮಾದ ನಾಯಕಿ ಮೋಹಿನಿ ಅವರು ಇದೀಗ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಮಹಾಲಕ್ಷ್ಮಿ ಶ್ರೀನಿವಾಸನ್ ಅವರು ತಮಗೆ ಖಿನ್ನತೆ ಕಾಡಿದ್ದವರ ಬಗ್ಗೆ, ಜೀವನದಲ್ಲಿ ಪರದಾಡಿದ್ದರ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದಾರೆ. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿಯೂ ಈ ನಟಿ ಹೇಳಿಕೊಂಡಿದ್ದರು. ಈ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟಿ ಹಲವು ಸಮಸ್ಯೆಗಳನ್ನು ಎದುರಿಸಿದ್ದರ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.












Click it and Unblock the Notifications