Mayuri:ಅಂದು 'ಅಶ್ವಿನಿ ನಕ್ಷತ್ರ' ತೋರಿಸಿ ಹೋದವರು ಈಗ 'ನನ್ನ ದೇವ್ರು' ಎಂದು ವಾಪಸ್ ಆದ ನಟಿ ಮಯೂರಿ!

ಸೂಪರ್ ಹಿಟ್ ಧಾರಾವಾಹಿ ಅಶ್ವಿನಿ ನಕ್ಷತ್ರದಿಂದ 'ಅಶ್ವಿನಿ' ಎಂದು ಖ್ಯಾತಿ ಪಡೆದ ನಟಿ ಮಯೂರಿ ಕ್ಯಾತರಿ ಬಳಿಕ ಸಿನಿಮಾಗಳಲ್ಲಿ ಅವಕಾಶ ಪಡೆದವರು. ನಾಯಕಿಯಾಗಿ ಹಲವು ಸಿನಿಮಾಗಳನ್ನು ಮಾಡಿದ ಅವರು, ಮದುವೆ, ಮಗು ಎಂದು ಆರಾಮಾಗಿದ್ದರು. ಬಿಗ್ ಬಾಸ್ ಮೂಲಕ ಕಿರುತೆರೆಯಲ್ಲಿ ಕೆಲ ಕಾಲ ಕಾಣಿಸಿಕೊಂಡ ಅವರು ಮತ್ತೆ ನಾಯಕಿಯಾಗಿ ಕಿರುತೆರೆಗೆ ರಿಎಂಟ್ರಿ ನೀಡುತ್ತಿದ್ದಾರೆ.

ಅಶ್ವಿನಿ ಎಂದರೆ ಇಂದಿಗೂ ಜನ ನೆನಪಿಸಿಕೊಳ್ಳುವುದು ಅಶ್ವಿನಿ ನಕ್ಷತ್ರ ಧಾರಾವಾಹಿಯನ್ನು. ನಟ ಜಯರಾಮ್ ಕಾರ್ತಿಕ್ (ಜೆಕೆ) ಹಾಗೂ ನಟಿ ಮಯೂರಿ ಅಭಿನಯದ ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬಂದಿತ್ತು. ಸುದೀರ್ಘ ವಿರಾಮದ ನಂತರ ಈಗ ಮತ್ತೊಂದು ಹೊಸ ಕಥೆ ಹೇಳಲು ಬರುತ್ತಿದ್ದಾರೆ ನಟಿ ಮಯೂರಿ ಕ್ಯಾತರಿ.

Kannada Actress Mayuri Kyatari makes a comeback to television with Nanna Devru

ನಕ್ಷತ್ರವನ್ನು ಧರೆಗಿಳಿಸಿದ್ದ ಅಶ್ವಿನಿಯ ಜೀವನ

ಅಶ್ವಿನಿ ನಕ್ರತ ಧಾರಾವಾಹಿ ಬಳಿಕ ಬೆಳ್ಳಿ ತರೆಗೆ ಕಾಲಿಟ್ಟ ಮಯೂರಿ, ಕೃಷ್ಣ ಲೀಲಾ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲು ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಬಳಿಕ ಇಷ್ಟಕಾಮ್ಯ, ಮೌನಂ, ರುಸ್ತುಂ, ನನ್ನ ಪ್ರಕಾರ, ನಟರಾಜ ಸರ್ವಿಸ್, ಪೊಗರು ಸಿನಿಮಾಗಳಲ್ಲಿ ನಟಿಸಿದ್ದಾರೆ. 2022 ರಲ್ಲಿ ವೀಲ್ ಚೇರ್ ರೋಮಿಯೋ ಎಂಬ ಸಿನಿಮಾದಲ್ಲಿ ನಟಿಸಿದ್ದರು.

2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಗುವಿಗೆ ತಾಯಿಯಾಗಿರುವ ಅವರು, ಕುಟುಂಬದತ್ತ ಗಮನಹರಿಸಲು ವಿರಾಮ ತೆಗೆದುಕೊಂಡಿದ್ದರು. ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. 2022 ರಲ್ಲಿ ಅಂಧೆಯಾಗಿ ವೀಲ್ ಚೇರ್ ರೋಮಿಯೋ ಎಂಬ ಸಿನಿಮಾದಲ್ಲಿ ನಟಿಸಿದರು. ಇದಾದ ಮೇಲೆ ಉಧೋ ಉಧೋ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ.

ನನ್ನ ದೇವ್ರು ಎಂದು ಆರಾಧಿಸುತ್ತಾ ಬಂದ ಮಯೂರಿ

ಮಯೂರಿ 'ನನ್ನ ದೇವ್ರು' ಧಾರಾವಾಹಿ ಮೂಲಕ ತಮ್ಮ ನಟನೆಯ ಎರಡನೇ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಧಾರಾವಾಹಿಯ ಪ್ರೋಮೋ ಆಕೆಯ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಪ್ರೋಮೋದಲ್ಲಿ ಮಯೂರಿಯ ಸೌಂದರ್ಯ ಮತ್ತು ವರ್ಚಸ್ಸು ಎದ್ದು ಕಾಣಿಸುತ್ತಿದೆ. ಅನೇಕ ಅಭಿಮಾನಿಗಳು ಅವರ ಸೌಂದರ್ಯವನ್ನು ಹೊಗಳುತ್ತಿದ್ದು, ಕಿರುತೆರೆಗೆ ವಾಪಸ್ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ನನ್ನ ದೇವ್ರು ಧಾರಾವಾಹಿಯಲ್ಲಿ ಮಯೂರಿ ಹಳ್ಳಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದರೆ, ನಾಯಕ ಅವಿನಾಶ್, ಊರಿನ ರಾಜಕೀಯ ನಾಯಕ ಮತ್ತು ರಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಊರೇ ದೇವರು ಎಂದು ಕೊಂಡಾಡುವ ನಾಯಕನ ಕಥೆ ಇದು. ವೀಕ್ಷಕರು ಈಗಾಗಲೇ ಕಥೆಯನ್ನು ತೆಗೆದುಕೊಳ್ಳಬಹುದಾದ ತಿರುವುಗಳ ಬಗ್ಗೆ ತಮ್ಮದೆ ಅಭಿಪ್ರಾಯ ಹೊರಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+