ಶೂಟಿಂಗ್‌ ವೇಳೆ ಅಸಭ್ಯವಾಗಿ ಮುಟ್ಟುತ್ತಿದ್ದ, ಖಾಸಗಿ ವಿಡಿಯೋ ತೆಗೆದು ಬ್ಲಾಕ್‌ಮೇಲ್‌: ನಟಿ ದೂರು

ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಟಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸಿ, ಪ್ರಚಾರಕ್ಕೆಂದು ಬೇರೆ ರಾಜ್ಯಕ್ಕೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ನಟಿಗೆ ತಿಳಿಯದಂತೆ ಮದ್ಯ ಕುಡಿಸಿ, ಆಕೆಯ ಖಾಸಗಿ ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಕೂಡ ಮಾಡಿರುವ ಆರೋಪದ ಮೇರೆಗೆ ಸ್ಯಾಂಡಲ್‌ವುಡ್‌ ನಟನನ್ನು ಬೆಂಗಳೂರು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕನ್ನಡದ "ರಿಚ್ಚಿ" ಸಿನಿಮಾದ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾದ ಹೇಮಂತ್ ಮೇಲೆ ಈ ಆರೋಪ ಕೇಳಿಬಂದಿದ್ದು, ರಾಜಾಜಿನಗರ ಪೊಲೀಸರು ನಟನನ್ನು ಬಂಧಿಸಿದ್ದಾರೆ. 2022ರಲ್ಲಿ ನಟಿಗೆ ಈತ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾಗಿದ್ದ. ರಿಚ್ಚಿ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನಾಯಕಿಯಾಗಿ ನಟಿಸುವಂತೆ ಹೇಮಂತ್ ಆ ನಟಿಗೆ ಕೇಳಿದ್ದ. ಇದಕ್ಕೆ ₹2 ಲಕ್ಷ ಸಂಭಾವನೆ ನೀಡುವುದಾಗಿ ಮಾತುಕತೆ ನಡೆದು, ಶೂಟಿಂಗ್‌ ಕೂಡ ಆರಂಭವಾಗಿತ್ತು.

Kannada Actor Hemant Arrested Actress Blackmailed with Private Video in Sandalwood Scandal

ಅಸಭ್ಯ ರೀತಿಯಲ್ಲಿ ಮುಟ್ಟುತ್ತಿದ್ದ

ಶೂಟಿಂಗ್‌ ವೇಳೆ ನಟ ಅಸಭ್ಯ ರೀತಿಯಲ್ಲಿ ಮುಟ್ಟುತ್ತಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಅರೆಬರೆ ಬಟ್ಟೆ ಧರಿಸಬೇಕು ಎಂದು ಪೀಡಿಸುತ್ತಿದ್ದ. ಶೂಟಿಂಗ್‌ ಮುಗಿದ ನಂತರ ಪ್ರಚಾರಕ್ಕಾಗಿ ಖಾಸಗಿ ಹೋಟೆಲ್‌ಗೆ ಒಬ್ಬಳೇ ಬಾ ಎಂದು ಕಿರುಕುಳ ನೀಡಿದ್ದ. ಇದಕ್ಕೆ ನಾನು ಒಪ್ಪದಿದ್ದಾಗ ರೌಡಿಗಳನ್ನು ಬಿಟ್ಟು ಹೆದರಿಸಿದ್ದ ಎಂದೂ ನಟಿ ಆರೋಪ ಮಾಡಿದ್ದಾರೆ.

2023ರ ಆಗಸ್ಟ್‌ನಲ್ಲಿ ಪ್ರಚಾರದ ಸುದ್ದಿಗೋಷ್ಠಿ ಇದೆ ಎಂದು ಮುಂಬೈಗೆ ಹೋದಾಗ ಮದ್ಯ ಕುಡಿಸಿದ್ದ. ನಟಿಗೆ ಮತ್ತು ಬರಿಸಿ ನಂತರ ಆಕೆಯ ಖಾಸಗಿ ವಿಡಿಯೋಗಳು, ಫೋಟೋಗಳನ್ನು ತೆಗೆದುಕೊಂಡಿದ್ದು, ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಅವುಗಳನ್ನು ಮುಂದಿಟ್ಟುಕೊಂಡು ಬ್ಲಾಕ್ಮೇಲ್ ಕೂಡ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಹೇಮಂತ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಸೆನ್ಸಾರ್ ಆಗದ ಪೋಟೋಗಳನ್ನು ಸೋಷಿಯಲ್ ಮೀಡಿಯದಲ್ಲಿ ವೈರಲ್‌ ಮಾಡುವುದಾಗಿ ಹೆದರಿಸಿದ್ದ. ನನ್ನ ತಾಯಿಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ.

ನಟ ಹೇಮಂತ್ ಮತ್ತು ನಟಿಯ ನಡುವೆ ಈ ಹಿಂದೆಯೋ ಒಮ್ಮೆ ಗಲಾಟೆ ನಡೆದಿತ್ತು. ನಟಿ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ, ಫೋನ್‌ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಫಿಲಂ ಚೇಂಬರ್ಗೆ ದೂರು ಸಹ ನೀಡಲಾಗಿತ್ತು. ಇದಕ್ಕೂ ಮುನ್ನ ನಟಿ ಹಾಗೂ ಆಕೆಯ ತಾಯಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಂತರ ರಾಜಿ ಸಂಧಾನ ಮಾಡಿ ಸಮಸ್ಯೆ ಇತ್ಯರ್ಥ ಮಾಡಲಾಗಿತ್ತು. ಈಗ ನಟಿ ಮತ್ತೊಮ್ಮೆ ತಮ್ಮ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಿದ್ದು, ನಟ ಹೇಮಂತ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+