ದೂದ್ ಪೇಡ ದಿಗಂತ್‌ಗೆ ಕಿಚ್ಚ ಸುದೀಪ್ ಸಾಥ್!
ಅದು 2006ರ ಡಿಸೆಂಬರ್ ತಿಂಗಳು, ಆಗ ಒಂದು ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿಯೇ ಮಿಂಚಿನ ಸಂಚಲನ ಸೃಷ್ಟಿ ಮಾಡಿತ್ತು. ಹೊಸಬರ ಸಿನಿಮಾ ಜಗತ್ತಿನಾದ್ಯಂತ ಕೆಂಪು & ಹಳದಿ ಬಣ್ಣದ ಕನ್ನಡ ಬಾವುಟ ರಾರಾಜಿಸುವಂತೆ ಮಾಡಿತ್ತು. ಆ ಸಿನಿಮಾ ಹೆಸರೇ 'ಮುಂಗಾರು ಮಳೆ' ಹೀಗೆ ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ದೂದ್ ಪೇಡ ದಿಗಂತ್ ಹತ್ತಿರವಾಗಿದ್ದರು. ಈ ನಟನ ಹೊಸ ಸಿನಿಮಾ ಈಗ ರಿಲೀಸ್‌ಗೆ ಸಿದ್ಧವಾಗಿದೆ ಹೀಗಾಗಿ ಕಿಚ್ಚ ಸುದೀಪ್ ಕೂಡ ಸಾಥ್ ನೀಡಿದ್ದಾರೆ.
ಹೌದು, ನಟ ಕಿಚ್ಚ ಸುದೀಪ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹೊಸಬರ ಬೆನ್ನಿಗೆ ನಿಲ್ಲುವ ಮೂಲಕ ಮಾದರಿ ಆಗುತ್ತಾರೆ. ಹಳಬರ ಸಿನಿಮಾಗೂ ಸುದೀಪ್ ಅವರು ಕೈಜೋಡಿಸುತ್ತಿದ್ದು, ದಿಗಂತ್ ಅವರ ಹೊಸ ಸಿನಿಮಾ ಟೀಸರ್ ರಿಲೀಸ್ ಮಾಡಿದ್ದಾರೆ. 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರದ ಟೀಸರ್ ದಿಗಂತ್ ಅವರ ಹುಟ್ಟುಹಬ್ಬದ ಹಿನ್ನೆಲೆ ಇಂದು ರಿಲೀಸ್ ಆಗಿದೆ. ಸಿಕ್ಕಾಪಟ್ಟೆ ಸರ್ಪ್ರೈಸ್ ಆಗಿರುವ ಈ ಟೀಸರ್‌ನಲ್ಲಿ ಹೊಸ ದಿಗಂತ್ ಅವರನ್ನ ಅಭಿಮಾನಿಗಳು ಕಣ್ಣು ತುಂಬಿಕೊಳ್ಳಬಹುದು.

ಡಿಫರೆಂಟ್ ಕಥೆ ಹೇಳ್ತಾರಾ ದಿಗಂತ್?
ಈ ನಡುವೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ವಿನೂತನ ಕಥಾ ಹಂದರ ಇರುವ ಸಿನಿಮಾ ನೀಡಲು ದಿಗಂತ್ ಸಜ್ಜಾದಂತೆ ಕಾಣುತ್ತಿದೆ. 'ಎಡಗೈಯೇ ಅಪಘಾತಕ್ಕೆ ಕಾರಣ'ದ ಟೀಸರ್ ಈಗ ಸೌಂಡ್ ಮಾಡಲು ಶುರು ಮಾಡಿದೆ. ಈ ಮೊದಲು, ಟೈಟಲ್ ಮೂಲಕವೂ ದಿಗಂತ್ ಅವರ ಸಿನಿಮಾ ಸದ್ದು ಮಾಡಿತ್ತು.
ದಿಗಂತ್ ತಂಡದ ಮಾಹಿತಿ ಇಲ್ಲಿದೆ!
ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ & ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆ ಸುತ್ತ ಹೆಣೆದ ಚಿತ್ರ ಇದು. ದಿಗಂತ್ ಅವರು ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಅವರಿಗೆ ಜೋಡಿಯಾಗಿ ನಟಿ ಧನು ಹರ್ಷ ನಟಿಸುತ್ತಿದ್ದು ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಹಾಗೇ ಇಂದು ರಿಲೀಸ್ ಆಗಿರುವ ಟೀಸರ್ ಕೂಡ ಗಮನ ಸೆಳೆದಿದೆ.
ತೆರೆ ಹಿಂದೆ ಯಾರೆಲ್ಲಾ ಇದ್ದಾರೆ?
ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ, ಹೈಫನ್ ಪಿಕ್ಚರ್ಸ್ ಹಾಗೂ ಗುರುದತ್ ಗಾಣಿಗ ಫಿಲ್ಮಂಸ್ ಬ್ಯಾನರ್‌ನ ಅಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್ ಇದ್ದರೆ ರಾಹುಲ್ ಪಾರ್ವತಿಕರ್ ಮತ್ತೆ ಶ್ರೀಪಾದ್ ಜೋಶಿ ಸಂಭಾಷಣೆ ಇದೆ.












Click it and Unblock the Notifications