"ಅವರು ಥರ್ಡ್‌ ರೇಟೆಡ್‌ ಕೆಟಗರಿ.." ಎಂದ ಧ್ರುವ ಸರ್ಜಾ; ಯಾರನ್ನ ಗೊತ್ತಾ?

ಸ್ಯಾಂಡಲ್‌ವುಡ್‌ನ ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಕೂಡ ಸಖತ್‌ ಕ್ರೇಜ್‌ ಹುಟ್ಟಿಸಿರುವ ನಟ. ಜೊತೆಗೆ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ ಧ್ರುವ. ಇತ್ತೀಚೆಗೆ "ನಟ ಧ್ರುವ ಸರ್ಜಾ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪಗಳಾಗಿವೆ. ಇಬ್ಬರೂ ಮಾತು ಬಿಟ್ಟಿದ್ದಾರೆ" ಎಂದೆಲ್ಲ ಚಿತ್ರರಂಗದಲ್ಲಿ ಗುಸುಗುಸು ಇದೆ.

ಇದು ಕ್ರಮೇಣ ಇಬ್ಬರೂ ನಾಯಕರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಬಳ್ಳಾರಿ ಜೈಲಿನಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಧ್ರುವ ಸರ್ಜಾ, "ಯಾರೋ ಒಬ್ಬರು ನೋವಲ್ಲಿದ್ದಾರೆ, ಯಾರೋ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡಲು ಆಗುವುದಿಲ್ಲ. ಗುಂಪಲ್ಲಿ ಗೋವಿಂದ, ನಂದು ಒಂದಿರಲಿ ಎಂದು ನಾನೇನನ್ನೋ ಮಾತನಾಡುವುದಿಲ್ಲ" ಎಂದಿದ್ದರು.

Kannada Actor Dhruva Sarja Spoke About Actor Darshan In An Interview

"ದರ್ಶನ್ ಅವರಿಗೂ ಒಬ್ಬ ಮಗ ಇದ್ದಾನೆ, ಒಂದು ಫ್ಯಾಮಿಲಿ ಕೂಡ ಇದೆ. ರೇಣುಕಾಸ್ವಾಮಿ ಅವರಿಗೂ ಒಂದು ಕುಟುಂಬ ಇದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಬಗ್ಗೆ ಅಲ್ಲೇ ಮೊದಲು ನಿರ್ಧಾರವಾಗಲಿ. ನಾವು ಏನೇನೋ ಮಾತನಾಡುವುದು ಬೇಡ. ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು" ಎಂದೂ ಧ್ರುವ ಹೇಳಿದ್ದರು.

ಬಳಿಕ ಈ ವಿಚಾರವಾಗಿ ದರ್ಶನ್ ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಧ್ರುವ ಸರ್ಜಾ ವಿರುದ್ಧ ಕೆರಳಿದ್ದರು. ಬಳಿಕ ಧ್ರುವ ಸರ್ಜಾ ಫ್ಯಾನ್ಸ್‌ ಕೂಡ ಕೌಂಟರ್‌ ಕೊಡಲು ಮುಂದಾಗಿ, ಒಂದು ರೀತಿಯಲ್ಲಿ ಫ್ಯಾನ್ಸ್‌ ವಾರ್‌ ಕೂಡ ಶುರುವಾಗಿತ್ತು. ಸದ್ಯ ʼಮಾರ್ಟಿನ್‌ʼ ಚಿತ್ರದ ಪ್ರಮೋಷನ್‌ನಲ್ಲಿರುವ ಧ್ರುವ ಸರ್ಜಾ ಅವರನ್ನು ಸುವರ್ಣ ನ್ಯೂಸ್‌ ಸಂದರ್ಶನ ಮಾಡಿದ್ದು, ಸದ್ಯ ಈ ಪ್ರೋಮೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Kannada Actor Dhruva Sarja Spoke About Actor Darshan In An Interview

ಈ ಹಿಂದೆ ಸುವರ್ಣ ನ್ಯೂಸ್‌ನಲ್ಲಿ ದರ್ಶನ್‌ ಬಗ್ಗೆ ಬಿತ್ತರವಾಗಿದ್ದ ಕೆಲ ವರದಿಗಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಸಂದರ್ಶನದ ವೇಳೆಯೂ ಸುವರ್ಣ ಚಾನಲ್‌ ಸಿಬ್ಬಂದಿ ಹಾಗೂ ಧ್ರುವ ಅವರು ನಟ ದರ್ಶನ್‌ ಬಗ್ಗೆ ಕೆಲ ವಿಷಯಗಳನ್ನು ಪ್ರಸ್ತಾಪಿಸಿ, ಅಭಿಪ್ರಾಯ ಹಂಚಿಕೊಂಡಿರುವುದು ಪ್ರೋಮೋದಲ್ಲಿದೆ.

ಪ್ರೋಮೋದಲ್ಲಿ ʼಸುವರ್ಣʼ ಸಿಬ್ಬಂದಿ ಹೇಳಿದ್ದೇನು?: ʼದರ್ಶನ್‌ ಅವರ ವಿಚಾರ ಹೀಗೇ ಆಗುತ್ತೆ ಎಂದು ನನಗೆ ನಿರೀಕ್ಷೆ ಇತ್ತುʼ...ʼಇದಕ್ಕೆಲ್ಲ ಅವರು ಕೌಟುಂಬಿಕವಾಗಿ ನೊಂದಿದ್ದ ವಿಚಾರ ಕಾರಣವಾ? ಅಥವಾ ಸಕ್ಸಸ್‌ ತಲೆಗತ್ತಿದ್ದು ಕಾರಣನಾ?ʼ, ʼನಾನು ಈ ರೀತಿ ಮಾಡಿದ್ರೆ ಅಭಿಮಾನಿಗಳಿಗೆ ಯಾವ ಸಂದೇಶ ಹೋಗುತ್ತೆ?ʼ, ʼಮನೆಯಲ್ಲಿ ಹೆಂಡತಿಯನ್ನು ಹೊಡೆದು ಶ್ರೀರಾಮ ಚಂದ್ರನ ಕ್ಯಾರೆಕ್ಟರ್‌ ಮಾಡೋದು ಜನರಿಗೆ ಅರ್ಥವಾಗುತ್ತೆʼ, ʼನಮ್ಮನೆ ಹೆಣ್ಣುಮಕ್ಕಳ ಬಗ್ಗೆ ಗೌರವದಿಂದ ಮಾತನಾಡಿ, ಕಂಡವರ ಹೆಣ್ಣುಮಕ್ಕಳ ಬಗ್ಗೆ ʼಇವರುʼ ಮಾತನಾಡೋದು ನನಗೆ ವಿಚಿತ್ರ ಎನಿಸುತ್ತೆʼ ಎಂದು ನಟ ದರ್ಶನ್‌ ಹಾಗೂ ಫ್ಯಾನ್ಸ್‌ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಧ್ರುವ ಹೇಳಿರುವುದೇನು?: ʼತಪ್ಪು ನಡೆಯುತ್ತಿದ್ದಾಗ, ಏಯ್‌, ಇದು ತಪ್ಪು ಗುರು ಎಂದು ಬುದ್ಧಿ ಹೇಳಬೇಕುʼ, ಅದನ್ನು ಬಿಟ್ಟು ಅದಕ್ಕೊಂದು ಫ್ಯಾನ್‌ ವಾರ್‌ ಅನ್ನೋ ಟ್ಯಾಗ್‌ ಕೊಡ್ತಾರೆ.. ʼನಾನು ನನ್ನ ಹೆಂಡತಿ, ನನ್ನ ತಂದೆ ಜೊತೆ ಪಾರ್ಟಿ ಮಾಡ್ತೀನಿ ಅಷ್ಟೇʼ, ಒಂದು ಕೆಟಗರಿ ಹೇಳುತ್ತೆ ʼನಾವು ಸಿನಿಮಾ ನೋಡಲ್ಲʼ ಅಂತ. ಸಿನಿಮಾಗಳು ಚೆನ್ನಾಗಿಯೇ ಓಡ್ತಲ್ಲ ಸರ್‌?.. ಇನ್ನು ಧ್ರುವ ಸರ್ಜಾ ಯಾರನ್ನೋ, ʼಥರ್ಡ್‌ ರೇಟೆಡ್‌ ಕೆಟಗರಿʼ ಎಂದೂ ಕರೆದಿದ್ದಾರೆ.

ಸುವರ್ಣ ನ್ಯೂಸ್‌ ಹಂಚಿಕೊಂಡಿರುವ ಈ ಪ್ರೋಮೋದಲ್ಲಿರುವ ವಿಚಾರಗಳು ದರ್ಶನ್‌ ಅವರ ಕುರಿತಾಗಿಯೇ ಹೇಳಲಾಗಿದೆ ಎನ್ನಲಾಗಿದ್ದು, ಇಂದು ಸಂಜೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಮತ್ತೊಂದೆಡೆ, ಇಲ್ಲಿ ಆಡಿರುವ ಮಾತುಗಳಿಗೆ ದರ್ಶನ್‌ ಅಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+