Darshan Thoogudeepa: ಬಳ್ಳಾರಿ ಜೈಲಿನಲ್ಲಿ ಹುಚ್ಚು ಹಿಡಿದವರಂತೆ ನಗುತ್ತಾ & ಕೂಗಾಡುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್?
ದರ್ಶನ್ ತೂಗುದೀಪ್ ಬಳ್ಳಾರಿ ಜೈಲು ಸೇರಿದ ನಂತರ ನರಳಿ ಹೋಗಿದ್ದಾರೆ. ಯಾಕೆ ಅಂದ್ರೆ ದರ್ಶನ್ ತೂಗುದೀಪ್‌ಗೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕ ರೀತಿ ಎಣ್ಣೆ & ಸಿಗರೇಟ್ ಹಾಗೂ ಬಿರಿಯಾನಿ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗ ಬಳ್ಳಾರಿ ಜೈಲಿನ ಊಟ ತಿನ್ನಲು ನಟ ದರ್ಶನ್ ತೂಗುದೀಪ್ ಪರದಾಡುವ ಸಮಯದಲ್ಲೇ, ಸಿಗರೇಟು ಬೇಕು ಎಂಬ ಹಠ ಕೂಡ ಮಾಡುತ್ತಿದ್ದಾನೆ ಕೊಲೆ ಆರೋಪಿ ಎಂಬ ಆರೋಪ ಕೇಳಿಬಂದಿದೆ. ಇಷ್ಟು ಮಾತ್ರವಲ್ಲ ಈಗ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ರಾತ್ರಿ ಇದ್ದಕ್ಕಿದ್ದಂತೆ ಜೋರಾಗಿ, ನಗುತ್ತಾ & ಕಿರುಚಾಡುತ್ತಾ ಹುಚ್ಚು ಹಿಡಿದವರ...
ದರ್ಶನ್ ತೂಗುದೀಪ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ತುಂಬಾ ಖುಷಿ ಖುಷಿಯಾಗಿ, ಸಿಗರೇಟು ಸೇದಿಕೊಂಡು ರಾತ್ರಿ ಆದ ತಕ್ಷಣ ಎಣ್ಣೆ ಹಾಕ್ಕೊಂಡು ಬಿಸಿ, ಬಿಸಿ ಬಿರಿಯಾನಿ ತಿಂದುಕೊಂಡು ಹ್ಯಾಪಿ ಆಗಿದ್ದರು. ಅಲ್ಲದೆ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ತನ್ನದೇ ಗ್ಯಾಂಗ್ ಜೊತೆಯಲ್ಲಿ ಮೋಜು ಮಸ್ತಿಯ ಲೈಫ್ ನಡೆಸುತ್ತಿದ್ರು. ಪರಿಸ್ಥಿತಿ ಹೀಗೆ ಇದ್ದಾಗ ದಿಢೀರ್ ಪರಪ್ಪನ ಅಗ್ರಹಾರದ ಜೈಲಿನ ಕೋಣೆಗಳಲ್ಲಿ ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ನಡೆಸುತ್ತಿರುವ ಅನಾಚಾರದ ಫೋಟೋ ಹಾಗೂ ವಿಡಿಯೋಸ್ ರಿಲೀಸ್ ಆಗಿಬಿಟ್ಟವು! ಹೀಗಿದ್ದಾಗ ಬಳ್ಳಾರಿ ಜೈಲಿಗೆ ಬಂದು ಬಿದ್ದಿರುವ ಡಿ-ಬಾಸ್ ದರ್ಶನ್‌ಗೆ ದಿಢೀರ್ ಹುಚ್ಚು ಹಿಡಿದಿದೆಯಾ? ಮುಂದೆ ಓದಿ.

ಜೈಲಿನಲ್ಲಿ ದರ್ಶನ್ ತೂಗುದೀಪ್‌ಗೆ ಹುಚ್ಚು?
ದರ್ಶನ್ ತೂಗುದೀಪ್ ಒಬ್ಬ ಸಿನಿಮಾ ಸ್ಟಾರ್ ಎಂಬ ಕಾರಣಕ್ಕೆ ಇದೀಗ ಬಳ್ಳಾರಿ ಜೈಲಿನಲ್ಲಿ, ವಿವಿಐಪಿ ಕೋಣೆಯನ್ನ ನೀಡಲಾಗಿದೆ. ವಿವಿಐಪಿ ಜೈಲಿನ ಕೋಣೆಯಲ್ಲಿ, ಸಿಸಿ ಕ್ಯಾಮೆರಾದ ಕಣ್ಗಾವಲಿನ ನಡುವೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ತೂಗುದೀಪ ನರಳುತ್ತಿದ್ದಾನೆ, ಅನ್ನೋದು ದರ್ಶನ್ ವಿರೋಧಿಗಳ ಮಾತು. ಆದರೆ ಅಸಲಿ ಮ್ಯಾಟರ್ ಇದಲ್ಲ. ಡಿ-ಬಾಸ್ ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ತೂಗುದೀಪ್‌ಗೆ ಇದೀಗ ಬಳ್ಳಾರಿ ಜೈಲಿನ, ವಿಶೇಷ ಭದ್ರತಾ ಕೊಠಡಿಯಲ್ಲಿ ಆಗುತ್ತಿರುವುದು ಏನಂತೆ ಗೊತ್ತಾ? ದರ್ಶನ್‌ಗೆ ಈಗ ಹುಚ್ಚು ಹಿಡಿದಿದೆಯಾ? ಮುಂದೆ ಓದಿ.
ದರ್ಶನ್ ತೂಗುದೀಪ್ ಜೋರಾಗಿ ನಗುತ್ತಿದ್ದಾರಾ?
ಬಳ್ಳಾರಿ ಜೈಲಿನ ವಿಶೇಷ ಕೋಣೆಯಲ್ಲಿ ಒಬ್ಬರೇ ಇರುವ ನಟ ದರ್ಶನ್ ತೂಗುದೀಪ್ ಬಲು ಜೋರಾಗಿ, ಒಬ್ಬರೇ ಕೂತು ನಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಚ್ಚು ಹಿಡಿದವರ ರೀತಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನ ಕೋಣೆಯಲ್ಲಿ ನಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಅದರಲ್ಲೂ ರಾತ್ರಿ ಆದರೆ ಸಾಕು, ಬಳ್ಳಾರಿ ಜೈಲಿನ ವಿಶೇಷ ಕೋಣೆ ಒಳಗಿಂದ ದರ್ಶನ್ ತೂಗುದೀಪ್ ಒಬ್ಬರೇ ಜೋರಾಗಿ ನಗುವ & ಅಳುವ ಸದ್ದು ಬರುತ್ತಿದೆ.
ಹೀಗಾಗಿ ನಮಗೆ ಬೇರೆ ಕೋಣೆ ಕೊಡಿ ಅಂತಾ ಸಹ ಖೈದಿಗಳು ಭಯದಲ್ಲಿ ಕೇಳುತ್ತಿದ್ದಾರೆ ಎಂಬ ಸುದ್ದಿಯನ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಲಾಗುತ್ತಿದೆ. ಈ ಸುದ್ದಿ ಸತ್ಯಾ? ಅಥವಾ ಸುಳ್ಳಾ? ಅನ್ನೋದನ್ನ ಪತ್ತೆ ಮಾಡಲು ದರ್ಶನ್ ಜೈಲು ಕೋಣೆ ಬಳಿ ಹಾಕಿರುವ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಬೇಕಿದೆ. ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದರೆ ದರ್ಶನ್ ತೂಗುದೀಪ್ ಎದುರಿಸುತ್ತಿರುವ ಸಮಸ್ಯೆ ಏನು? ಅನ್ನೋದು ಗೊತ್ತಾಗಲಿದೆ ಅನ್ನೋದು ನಟ & ಈಗ ಕೊಲೆ ಆರೋಪಿ ಆಗಿರುವ ದರ್ಶನ್ ತೂಗುದೀಪ್ ಅಭಿಮಾನಿಗಳ ಆಗ್ರಹವಾಗಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications