Darshan Thoogudeepa: ದರ್ಶನ್ ತೂಗುದೀಪ್ ಹೆಸರು ‘ಸುಬ್ಬ’ ಎಂದು ಬದಲಾವಣೆ?
ದರ್ಶನ್ ತೂಗುದೀಪ್ ರಾಜನ ರೀತಿ ಮೆರೆಯುತ್ತಿದ್ದ ಕಾಲ ಇತ್ತು, ಕೇವಲ 3 ತಿಂಗಳ ಹಿಂದೆ ಇದೇ ದರ್ಶನ್ ತೂಗುದೀಪ್ ಫ್ಯಾನ್ಸ್ ಬಾಯಿಂದ 'ಡಿ-ಬಾಸ್.. ಡಿ-ಬಾಸ್..' ಅಂತಾ ಜೈಕಾರ ಹಾಕಿಸಿಕೊಳ್ಳುತ್ತಿದ್ದರು. ಆದರೆ ಗ್ರಹಚಾರ ನೆಟ್ಟಗೆ ಇರಲಿಲ್ಲ ಅಂತಾ ಕಾಣುತ್ತೆ, ಹೀಗಾಗಿಯೇ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಮರ್ಡರ್ ಅಂದ್ರೆ ಭೀಕರ ಕೊಲೆ ಕೇಸ್‌ನಲ್ಲಿ ಇದೀಗ ಕೈದಿ ಆಗಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ಪವಿತ್ರಾ ಗೌಡ & ದರ್ಶನ್ ನಡುವೆ ಇರುವ, ಗುಟ್ಟು ಗುಟ್ಟಾದ ಸಂಬಂಧ ಜಗತ್ತಿಗೇ ಗೊತ್ತಾಗಿದೆ. ಹೀಗಿದ್ದಾಗಲೆ ದರ್ಶನ್ ತೂಗುದೀಪ್ ಹೆಸರು 'ಸುಬ್ಬ' ಎಂದು ಬದಲಾವಣೆ...
ಪವಿತ್ರಾ ಗೌಡ ಮದುವೆ ಆದ ನಂತರ ಒಂದು ಮಗು ಕೂಡ ಇತ್ತು, ಆದರೆ ಮೊದಲ ಗಂಡನ ದೂರ ಮಾಡ್ಕೊಂಡು ಒಂಟಿ ಆಗಿದ್ದರಂತೆ ಇದೇ ಪವಿತ್ರಾ ಗೌಡ. ಇದೇ ಸಮಯದಲ್ಲಿ, ಕೆಲ ವರ್ಷಗಳ ಗ್ಯಾಪ್ ನಂತರ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಂದಾಗಿದ್ದರು. ಇಬ್ಬರು ಈ ರೀತಿ ಸಂಬಂಧದಲ್ಲಿ ಮುಳುಗಿ 10 ವರ್ಷ ಕಳೆದಿದೆ ಎಂದು ಸ್ವತಃ ಪವಿತ್ರಾ ಗೌಡ ನೀಡಿದ್ದ ಮಾಹಿತಿ ಕೂಡ ವೈರಲ್ ಆಗುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರು ಪ್ರೀತಿಯ ಗೆಳತಿ ಪವಿತ್ರಾ ಗೌಡಳಿಗೆ ಅಂತಾನೇ ತಮ್ಮ ಹೆಸರನ್ನೇ ಬದಲಾವಣೆ ಮಾಡಿಕೊಂಡು ಇದ್ದರು ಎಂಬ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ!

ದರ್ಶನ್ ತೂಗುದೀಪ್ ಅಲ್ಲ, 'ಸುಬ್ಬ'..!
ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ಒಟ್ಟೊಟ್ಟಿಗೆ ಇರುತ್ತಿದ್ದರು, ಎಲ್ಲೆಂದರಲ್ಲಿ ಅಲ್ಲಿ ಓಡಾಡುತ್ತಿದ್ದರು. ಅಲ್ಲದೆ ಐಷಾರಾಮಿ ಅಂದ್ರೆ ಒಂದು ದಿನಕ್ಕೆ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಇರುವ ಹೋಟೆಲ್ ರೂಂಗಳನ್ನ ಬುಕ್ ಮಾಡುತ್ತಿದ್ದರು ಎಂಬ ಆರೋಪ ಇದೆ. ಈ ನಡುವೆ ರಾಜರಾಜೇಶ್ವರಿ ನಗರ ಎಂಬ ಪ್ರಖ್ಯಾತ ಏರಿಯಾದಲ್ಲೇ ಪವಿತ್ರಾ ಗೌಡಗೆ ಇದೇ ನಟ ದರ್ಶನ್ ತೂಗುದೀಪ್ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆ ಉಡುಗೊರೆಯಾಗಿ ನೀಡಿದ್ದ, ಎಂಬ ಆರೋಪವು ಕೂಡ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್‌ನ ಈ ಪವಿತ್ರಾ ಗೌಡ 'ಸುಬ್ಬ' ಅಂತಾ ಕರೆಯುತ್ತಿದ್ದಳಂತೆ!
'ಪವಿತ್ರಾ ಗೌಡ ಶನಿಯಂತೆ ಬಂದಿದ್ದಾಳೆ'
ದರ್ಶನ್ ತೂಗುದೀಪ್ ಬಾಳಿಗೆ ಪವಿತ್ರಾ ಗೌಡ ಶನಿಯಂತೆ ಬಂದಿದ್ದಾಳೆ, ಪವಿತ್ರಾ ಗೌಡಳಿಗೆ ಹಿಂಗೆಲ್ಲಾ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ದರ್ಶನ್ ತೂಗುದೀಪ್ ಅಭಿಮಾನಿಗಳು. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಹೊರಗೆ ಬಂದ ತಕ್ಷಣ, ಈಗ ಪವಿತ್ರಾ ಗೌಡ ಕುರಿತು ಮಾತನಾಡುತ್ತಿರುವ ತನ್ನ ಅಭಿಮಾನಿಗಳನ್ನೇ ಶೆಡ್‌ಗೆ ಕರೆದುಕೊಂಡು ಹೋಗುತ್ತಾರಾ? ಎಂಬ ಪ್ರಶ್ನೆ ಕೂಡ ಕೇಳುತ್ತಿದ್ದಾರೆ ನೆಟ್ಟಿಗರು. ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿದ್ದು, ಇಷ್ಟೆಲ್ಲಾ ನಡೆದರೂ ದರ್ಶನ್ ತೂಗುದೀಪ್ ಅಭಿಮಾನಿಗಳು ಮಾತ್ರ ನಮ್ಮ ಬಾಸ್ ಗ್ರೇಟ್.. ಗ್ರೇಟ್.. ಅಂತಿದ್ದಾರೆ!
ಚಿಂತೆ.. ಚಿಂತೆ.. ಚಿಂತೆ!
ದರ್ಶನ್ ತೂಗುದೀಪ್‌ಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಸಿಗುತ್ತಿತ್ತು, ಇದರ ಜೊತೆ ವರ್ಷಕ್ಕೆ ಕನಿಷ್ಠ ಹತ್ತು ಸಾರಿ ವಿದೇಶಿ ಪ್ರವಾಸಗಳಿಗೂ ಹೋಗಿ ಬರುತ್ತಿದ್ದರು ನಟ ದರ್ಶನ್ ತೂಗುದೀಪ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಚಿಂತೆ ಕಾಡ್ತಿದ್ದು, ಇಡೀ ಜಗತ್ತಿನಲ್ಲೇ ಇದನ್ನು ಅತ್ಯಂತ ಭಯಾನಕ ರೋಗ ಎನ್ನುತ್ತಾರೆ ವೈದ್ಯರು.
ಯಾಕಂದ್ರೆ ಮನುಷ್ಯನ ಮನಸ್ಸು & ದೇಹ ಎರಡನ್ನು ಒಟ್ಟಿಗೆ ಹಾಳು ಮಾಡುವ ಶಕ್ತಿ ಇರುವುದು ಚಿಂತೆ ಎಂಬ ರೋಗಕ್ಕೆ ಮಾತ್ರ. ಈಗ ದರ್ಶನ್ ತೂಗುದೀಪ್ ಕೂಡ ತಾನು ಜೈಲಿಗೆ ಬಂದಿದ್ದು ಮತ್ತು ಜೈಲಿನ ಕೋಣೆಗಳಲ್ಲಿ ವಿಲವಿಲ ಒದ್ದಾಡುತ್ತಿರುವುದು ಸೇರಿದಂತೆ ಈ ಪರಿಸ್ಥಿತಿ ನೆನಪು ಮಾಡಿಕೊಂಡು ನರಳುತ್ತಿದ್ದಾರೆ. ಹೀಗಾಗಿ ದರ್ಶನ್ ತೂಕ ಕೂಡ ಭಾರಿ ಪ್ರಮಾಣದಲ್ಲಿ ಈಗ ಕುಸಿದು ಹೋಗಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications