Darshan Thoogudeepa: ದರ್ಶನ್ ತೂಗುದೀಪ್ ‘ಕ್ರಾಂತಿ’ ವಾಂತಿ ಆಗಿದ್ದಕ್ಕೆ ಆಗ ಮೀಡಿಯಾ ಮುಂದೆ ಬಂದು ಕೈಮುಗಿದರಾ?

ದರ್ಶನ್ ತೂಗುದೀಪ್ ಈಗ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಅಂದರ್ ಆಗಿದ್ದು, ಈ ಪರಿಸ್ಥಿತಿಯಲ್ಲಿ ಬಳ್ಳಾರಿ ಜೈಲಿನ ಊಟ ತಿನ್ನಲು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಈ ಸಮಯದಲ್ಲೇ ದರ್ಶನ್ ತೂಗುದೀಪ್ ಅಭಿಮಾನಿಗಳು, ಪ್ರಜಾಪ್ರಭುತ್ವದ 4ನೇ ಅಂಗ ಅಂತಾ ಕರೆಸಿಕೊಳ್ಳುವ ಮೀಡಿಯಾಗಳ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಹೀಗಾಗಿ ನ್ಯೂಸ್ ಚಾನೆಲ್‌ಗಳು ಕೂಡ ದರ್ಶನ್ ತೂಗುದೀಪ್ ಅಭಿಮಾನಿಗಳ ಆರೋಪಕ್ಕೆ ಉತ್ತರವನ್ನ ನೀಡುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ, ದರ್ಶನ್ ತೂಗುದೀಪ್ 'ಕ್ರಾಂತಿ' ವಾಂತಿ ಆಗಿದ್ದಕ್ಕೆ ಆಗ ಮೀಡಿಯಾ ಮುಂದೆ ಬಂದು ಕೈಮುಗಿ...

ಏನ್ರೀ ಮೀಡಿಯಾ.. ಏನ್ರೀ ಮೀಡಿಯಾ.. ಅಂತಾ ದರ್ಶನ್ ತೂಗುದೀಪ್ ಅಭಿಮಾನಿಗಳು, ಅಂತಾ ಕರೆಸಿಕೊಳ್ಳುವ ಕೆಲವು ವಿಕೃತರು ಗಣೇಶ ಹಬ್ಬದ ಸಮಯದಲ್ಲೂ ದೇವರ ಎದುರು ಶಾ.. ಲೌ.. ಅಂತಾ ದರ್ಶನ್ ತೂಗುದೀಪ್ ಮೀಡಿಯಾಗಳನ್ನ ಬೈಯಲು ಬಳಸಿದ್ದ ಕೆಟ್ಟ ಕೆಟ್ಟ ಪದಗಳು ಇರುವ ಆಡಿಯೋ ಹಾಕಿ ಡಾನ್ಸ್ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, ಗಣೇಶ ದೇವರಿಗೂ ಅವಮಾನ ಮಾಡಿದ ದರ್ಶನ್ ತೂಗುದೀಪ್‌ರ ಕೆಲ ವಿಕೃತ ಅಭಿಮಾನಿಗಳಿಗೆ ಬುದ್ಧಿ ಹೇಳಲು ಹಿಂದೂಗಳು & ಕನ್ನಡಿಗರು ಮುಂದಾಗಿದ್ದಾರೆ. ಈ ಪೈಕಿ ದರ್ಶನ್ ತೂಗುದೀಪ್ ಮೀಡಿಯಾ ಮುಂದೆ ಕೈಮುಗಿದು ನಿಂತು ಕ್ಷಮೆ ಕೇಳಿದ್ದು ಏಕೆ? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, 'ಕ್ರಾಂತಿ' ವಾಂತಿ ಆಗಿದ್ದಕ್ಕೆ ಆಗ ಮೀಡಿಯಾ ಮುಂದೆ ಬಂದು...

Kannada Actor Darshan Thoogudeepa Movie Kranti History And Box Office Collection

'ಕ್ರಾಂತಿ' ವಾಂತಿ ಆಗಿ ಹೋಗಿತ್ತಾ?

ನಿಮಗೆಲ್ಲಾ ಗೊತ್ತಿರುವ ದರ್ಶನ್ ತೂಗುದೀಪ್ ಅವರು ಅಭಿನಯಿಸಿದ್ದ 'ಕ್ರಾಂತಿ', ದರ್ಶನ್ ಸಿನಿಮಾ ಕರಿಯರ್‌ನಲ್ಲೇ ಅತ್ಯಂತ ಹೀನಾಯ ಸೋಲು ಕಂಡಿತ್ತು. ಇದಕ್ಕೆ ಪ್ರಮುಖ ಕಾರಣ, ಮೀಡಿಯಾಗಳ ಬಗ್ಗೆ ಕೆಟ್ಟ ಕೆಟ್ಟ ಮಾತು ಆಡಿದ್ದ ದರ್ಶನ್ ತೂಗುದೀಪ್ ಅ.. ಅ.. ಶಾ.. ಲೌ.. ಅನ್ನೋ ಪದ ಸುಲಭವಾಗಿ ಬಳಸಿ ಪ್ರಜಾಪ್ರಭುತ್ವ ವಿರೋಧಿ ರೀತಿ ನಡೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ದರ್ಶನ್ ತೂಗುದೀಪ್ ಕನ್ನಡದ ನ್ಯೂಸ್ ಚಾನೆಲ್‌ಗಳ ಬಗ್ಗೆ ಮಾತನಾಡಿ, ಕೆಟ್ಟದಾಗಿ ಬೈದಿದ್ದ ಆಡಿಯೋ ವೈರಲ್ ಆಗಿತ್ತು. ಆ ನಂತರ ಕನ್ನಡ ನ್ಯೂಸ್ ಚಾನೆಲ್ ಮುಖ್ಯಸ್ಥರು ನಟ ದರ್ಶನ್ ತೂಗುದೀಪ್ ಬ್ಯಾನ್ ಮಾಡಿ ಸುದ್ದಿ ಹಾಕುತ್ತಿರಲಿಲ್ಲ. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅಭಿನಯದ 'ಕ್ರಾಂತಿ' ಸಿನಿಮಾ ಸುದ್ದಿ ಕೂಡ ನ್ಯೂಸ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿರಲಿಲ್ಲ. ಹೀಗಿದ್ದಾಗಲೇ 'ಕ್ರಾಂತಿ' ಸಿನಿಮಾ ಅತಿ ಹೀನಾಯ ಸೋಲು ಕಂಡಿತ್ತು.

'ಡಿ' ಫ್ಯಾನ್ಸ್ ಇದ್ದರೂ 'ಕ್ರಾಂತಿ' ಸೋಲು?

'ಕ್ರಾಂತಿ' ಬಿಡುಗಡೆ ಆಗುವಾಗ ದರ್ಶನ್ ತೂಗುದೀಪ್ ದುಡ್ಡು ಖರ್ಚು ಮಾಡಿ, ಒಂದಷ್ಟು ಜನರ ತಂಡ ರಚಿಸಿ ಪ್ರಚಾರಕ್ಕೆ ದುಡ್ಡು ಖರ್ಚು ಮಾಡಿ ಮುಂದೆ ಬಿಟ್ಟಿದ್ದರು ಎಂಬ ಆರೋಪ ಕೇಳಿಬಂತು. ಹೀಗಿದ್ದಾಗ ದರ್ಶನ್ ತೂಗುದೀಪ್ ಬೆನ್ನಿಗೆ ಅಭಿಮಾನಿಗಳು ಇದ್ದಾರೆ, ದರ್ಶನ್ ತೂಗುದೀಪ್ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡಲಿದ್ದಾರೆ ಎಂಬ ಭರವಸೆಯ ಮಾತುಗಳೂ ಕೇಳಿಬಂದವು. ಹೀಗೆ ಕ್ರಾಂತಿ ಸಿನಿಮಾ ನಾವೇ ಗೆಲ್ಲಿಸುತ್ತೇವೆ ಅಂತಾ ಕೊಲೆ ಆರೋಪಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತನಾಡಿದ್ದರು. ಹೀಗಿದ್ದರೂ 'ಕ್ರಾಂತಿ' ಸಿನಿಮಾ ಅತಿ ಹೀನಾಯ ಸೋಲು ಕಂಡಿತ್ತು.

ಮೀಡಿಯಾ ಕಾಲಿಗೆ ಬಿದ್ದಿದ್ದ ದರ್ಶನ್?

ದರ್ಶನ್‌ನ 'ಕ್ರಾಂತಿ' ಸೋಲಿನ ನಂತರ 'ಕಾಟೇರ' ಸಿನಿಮಾ ರಿಲೀಸ್ ಮಾಡುವ ಮೊದಲು ಕನ್ನಡ ನ್ಯೂಸ್ ಚಾನೆಲ್‌ಗಳ ಮುಖ್ಯಸ್ಥರನ್ನ ಕರೆಸಿ, ಪಾರ್ಟಿ ಅರೆಂಜ್ ಮಾಡಿಸಿದ್ದ ದರ್ಶನ್ ತೂಗುದೀಪ್ & 'ಕಾಟೇರ' ನಿರ್ಮಾಪಕ, ರಾಜಿ & ಪಂಚಾಯಿತಿ ಮಾಡಿಸಿದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್ ಜೈಲಿಗೆ ಹೋದ ಸುದ್ದಿ ತೋರಿಸಿದ್ದಕ್ಕೆ ಈಗ ಮತ್ತೆ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದು, ಕೆಟ್ಟ ಕೆಟ್ಟದಾಗಿ ಬೈಯುತ್ತಿದ್ದಾರೆ. ಆದರೆ ದರ್ಶನ್ ತಾನಾಗೇ ಬಂದು ಮೀಡಿಯಾಗಳ ಕಾಲಿಗೆ ಬಿದ್ದಿದ್ದು ಏಕೆ? ಅಂತಾ ದರ್ಶನ್ ವಿರೋಧಿಗಳೂ ಪ್ರಶ್ನೆಯ ಮಾಡುತ್ತಿದ್ದಾರೆ.

ಚಿಂತೆ.. ಚಿಂತೆ.. ಚಿಂತೆ!

ದರ್ಶನ್ ತೂಗುದೀಪ್‌ಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಸಿಗುತ್ತಿತ್ತು, ಇದರ ಜೊತೆ ವರ್ಷಕ್ಕೆ ಕನಿಷ್ಠ ಹತ್ತು ಸಾರಿ ವಿದೇಶಿ ಪ್ರವಾಸಗಳಿಗೂ ಹೋಗಿ ಬರುತ್ತಿದ್ದರು ನಟ ದರ್ಶನ್ ತೂಗುದೀಪ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಚಿಂತೆ ಕಾಡ್ತಿದ್ದು, ಇಡೀ ಜಗತ್ತಿನಲ್ಲೇ ಇದನ್ನು ಅತ್ಯಂತ ಭಯಾನಕ ರೋಗ ಎನ್ನುತ್ತಾರೆ ವೈದ್ಯರು.

ಯಾಕಂದ್ರೆ ಮನುಷ್ಯನ ಮನಸ್ಸು & ದೇಹ ಎರಡನ್ನು ಒಟ್ಟಿಗೆ ಹಾಳು ಮಾಡುವ ಶಕ್ತಿ ಇರುವುದು ಚಿಂತೆ ಎಂಬ ರೋಗಕ್ಕೆ ಮಾತ್ರ. ಈಗ ದರ್ಶನ್ ತೂಗುದೀಪ್ ಕೂಡ ತಾನು ಜೈಲಿಗೆ ಬಂದಿದ್ದು ಮತ್ತು ಜೈಲಿನ ಕೋಣೆಗಳಲ್ಲಿ ವಿಲವಿಲ ಒದ್ದಾಡುತ್ತಿರುವುದು ಸೇರಿದಂತೆ ಈ ಪರಿಸ್ಥಿತಿ ನೆನಪು ಮಾಡಿಕೊಂಡು ನರಳುತ್ತಿದ್ದಾರೆ. ಹೀಗಾಗಿ ದರ್ಶನ್ ತೂಕ ಕೂಡ ಭಾರಿ ಪ್ರಮಾಣದಲ್ಲಿ ಈಗ ಕುಸಿದು ಹೋಗಿದೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+