Darshan Thoogudeepa: ಅಮ್ಮಾ.. ಅಮ್ಮಾ.. ಎಂದು ನರಳಾಡುತ್ತಿರುವ ದಾಸ ದರ್ಶನ್ ತೂಗುದೀಪ್..
ದರ್ಶನ್ ತೂಗುದೀಪ್ ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಳ್ಳುತ್ತಿದ್ದರು, ಜೈಲಿಂದ ಹೊರಗೆ ಇದ್ದ ಸಮಯದಲ್ಲೂ ಫೈಟಿಂಗ್ & ಕೆಟ್ಟ ಮಾತು ಮಾಮೂಲಿ ಆಗಿದ್ದವು ಎಂಬ ಆರೋಪಗಳು ಇತ್ತು. ಅದರಲ್ಲೂ ದರ್ಶನ್ ತೂಗುದೀಪ್ ತಮ್ಮ ಹೆಂಡತಿ ಕೈ ಮುರಿದು, ಆಸ್ಪತ್ರೆ ಸೇರುವ ರೀತಿ ಬಡಿದಿದ್ದರು. ಇದು ಸಾಲದು ಎನ್ನುವಂತೆ ಹೆತ್ತ ಅಮ್ಮ & ಜೊತೆಗೆ ಹುಟ್ಟಿದ ತಮ್ಮನ ಜೊತೆಗೂ ಗಲಾಟೆ ಮಾಡಿದ್ದರು ದರ್ಶನ್ ತೂಗುದೀಪ್ ಎಂಬ ಆರೋಪವು ಇದೆ. ಹೀಗಿದ್ದಾಗ ಬಳ್ಳಾರಿ ಜೈಲು ಸೇರಿರುವ ದರ್ಶನ್ ತೂಗುದೀಪ್, ಬಳ್ಳಾರಿ ಜೈಲಿನಲ್ಲಿ ಅಮ್ಮ... ಅಮ್ಮ... ಅಮ್ಮ ಬೇಕು ಅಂತಾ ನರಳುತ್ತಿದ್ದಾರಂತೆ!
ದರ್ಶನ್ ತೂಗುದೀಪ್ ತಮ್ಮ ಕುಟುಂಬದ ಜೊತೆಗೆ ಕೂಡ ಚನ್ನಾಗಿ ಇರಲಿಲ್ಲ, ಹೀಗಾಗಿಯೇ ಹಲವು ವರ್ಷದಿಂದ ದರ್ಶನ್ ತೂಗುದೀಪ್ & ದರ್ಶನ್ ಅಮ್ಮ & ತಮ್ಮ ಮಾತನಾಡುತ್ತಿರಲಿಲ್ಲ. ಹೀಗಿದ್ದಾಗ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಸೇರಿದ ನಂತರ ಸ್ವತಃ ದರ್ಶನ್ ತೂಗುದೀಪ್ ತಮ್ಮ ದಿನಕರ್ ತೂಗುದೀಪ್ ಮುಂದೆ ಬಂದರು. ತನ್ನ ಅಣ್ಣ ದರ್ಶನ್ ತೂಗುದೀಪ್ ಬೆನ್ನಿಗೆ ನಿಂತಿದ್ದ ದಿನಕರ್ ತೂಗುದೀಪ್ ಧೈರ್ಯ ಹೇಳಿದ್ದರು. ಹೀಗೆ ಇದ್ದಾಗ, ಸ್ವತಃ ದರ್ಶನ್ ತೂಗುದೀಪ್ ತಾಯಿ ಅವರಾದ ಮೀನಾ ತೂಗುದೀಪ್ ಅವರು ಕೂಡ ಕೋಪ ಬಿಟ್ಟು ಮಗನನ್ನ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಆದರೆ ಈಗ ಏನಾಗಿದೆ? ಬಳ್ಳಾರಿ ಜೈಲಿಗೆ ಶಿಫ್ಟ್ ಆದ ದರ್ಶನ್ ತೂಗುದೀಪ್ ನೋಡಲು ಅವರ ಅಮ್ಮ ಏಕೆ ಬಂದಿಲ್ಲ? ಮುಂದೆ ಓದಿ.

ಅಮ್ಮ.. ಅಮ್ಮ.. ಎನ್ನುತ್ತಿರುವ ದರ್ಶನ್!
ದರ್ಶನ್ ತೂಗುದೀಪ್‌ಗೆ ಬಳ್ಳಾರಿ ಜೈಲಿನ ಜೀವನ ಪಾಠ ಕಲಿಸಿದ ರೀತಿ ಕಾಣುತ್ತಿದೆ. ಯಾಕಂದ್ರೆ ಜೈಲಿನಿಂದ ಹೊರಗೆ ಇದ್ದಾಗ ಕೋಪ & ತಾಪದಲ್ಲೇ ಎಲ್ಲರ ಜೊತೆಗೂ ಜಗಳ ಮಾಡಿಕೊಂಡು ಓಡಾಡುತ್ತಿದ್ದ ದರ್ಶನ್ ತೂಗುದೀಪ್, ಈಗ ನೋಡಿದರೆ ಅಮ್ಮ ಬೇಕು & ತಮ್ಮ ಬೇಕು ಎಂಬ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಧರ್ಮಪತ್ನಿ ಅಂದ್ರೆ ಲೀಗಲ್ ಆಗಿ ತಾಳಿ ಕಟ್ಟಿದ ಹೆಂಡತಿಗೆ ಫೋನ್ ಕಾಲ್ ಮಾಡಿ, ನನ್ನ ನೋಡಲು ಬಳ್ಳಾರಿ ಜೈಲಿಗೆ ಬಾ ಎಂದು ಬೇಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ನಡೆದಿದ್ದರೂ ದರ್ಶನ್ ತೂಗುದೀಪ್ ಅವರ ಅಮ್ಮ, ಮೀನಾ ತೂಗುದೀಪ್ ಮಾತ್ರ ಈವರೆಗೂ ಬಳ್ಳಾರಿ ಜೈಲಿಗೆ ಬಂದಿಲ್ಲ ಯಾಕೆ? ಎಂಬ ಪ್ರಶ್ನೆ ಮೂಡಿದೆ.
ದರ್ಶನ್ ತಾಯಿ ಏಕೆ ಬಂದಿಲ್ಲ?
ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಮೊದಲ ದಿನದಿಂದಲೇ, ದರ್ಶನ್ ತೂಗುದೀಪ್ ನರಳುತ್ತಿದ್ದಾರೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಜಾ ಮಾಡಿಕೊಂಡು ಇದ್ದ ದಾಸ ದರ್ಶನ್‌ಗೆ ಈಗ ಬಳ್ಳಾರಿ ಜೈಲಲ್ಲಿ ಏನೂ ಸಿಗ್ತಿಲ್ಲ. ಹೀಗಿದ್ದಾಗ ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಪರದಾಡುತ್ತಿದ್ದು, ಜೈಲಿನ ಕಷ್ಟಕ್ಕೆ ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ತಮ್ಮ ತಾಯಿ, ಮೀನಾ ತೂಗುದೀಪ್ ಅವರನ್ನ ನೋಡಲು ಕಾಯುತ್ತಿದ್ದಾರೆ.
ಹಲವು ದಿನಗಳಿಂದ ಕೂಡ ದರ್ಶನ್ ಹೀಗೆ ಕಾಯುತ್ತಿದ್ದಾರೆ. ಆದರೂ ದರ್ಶನ್ ತೂಗುದೀಪ್ ಅವರನ್ನ ನೋಡಲು ಅವರ ಅಮ್ಮ ಮೀನಾ ತೂಗುದೀಪ್ ಬಂದಿಲ್ಲ. ಹೀಗಿದ್ದಾಗ ಜೈಲಿನಲ್ಲಿ ದರ್ಶನ್ ತೂಗುದೀಪ್ ಅಮ್ಮ ಬೇಕು ಅಂತಾ ಅಳುತ್ತಿದ್ದಾರಂತೆ, ಆದರೆ ಮೀನಾ ತೂಗುದೀಪ್ ಅವರಿಗೆ ವಯಸ್ಸು ಆಗಿರುವ ಹಿನ್ನೆಲೆ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಅವರು ಬಳ್ಳಾರಿಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಚಿಂತೆ.. ಚಿಂತೆ.. ಚಿಂತೆ!
ದರ್ಶನ್ ತೂಗುದೀಪ್‌ಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಸಿಗುತ್ತಿತ್ತು, ಇದರ ಜೊತೆ ವರ್ಷಕ್ಕೆ ಕನಿಷ್ಠ ಹತ್ತು ಸಾರಿ ವಿದೇಶಿ ಪ್ರವಾಸಗಳಿಗೂ ಹೋಗಿ ಬರುತ್ತಿದ್ದರು ನಟ ದರ್ಶನ್ ತೂಗುದೀಪ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಇದೀಗ ಚಿಂತೆ ಕಾಡ್ತಿದ್ದು, ಇಡೀ ಜಗತ್ತಿನಲ್ಲೇ ಇದನ್ನು ಅತ್ಯಂತ ಭಯಾನಕ ರೋಗ ಎನ್ನುತ್ತಾರೆ ವೈದ್ಯರು.
ಯಾಕಂದ್ರೆ ಮನುಷ್ಯನ ಮನಸ್ಸು & ದೇಹ ಎರಡನ್ನು ಒಟ್ಟಿಗೆ ಹಾಳು ಮಾಡುವ ಶಕ್ತಿ ಇರುವುದು ಚಿಂತೆ ಎಂಬ ರೋಗಕ್ಕೆ ಮಾತ್ರ. ಈಗ ದರ್ಶನ್ ತೂಗುದೀಪ್ ಕೂಡ ತಾನು ಜೈಲಿಗೆ ಬಂದಿದ್ದು ಮತ್ತು ಜೈಲಿನ ಕೋಣೆಗಳಲ್ಲಿ ವಿಲವಿಲ ಒದ್ದಾಡುತ್ತಿರುವುದು ಸೇರಿದಂತೆ ಈ ಪರಿಸ್ಥಿತಿ ನೆನಪು ಮಾಡಿಕೊಂಡು ನರಳುತ್ತಿದ್ದಾರೆ. ಹೀಗಾಗಿ ದರ್ಶನ್ ತೂಕ ಕೂಡ ಭಾರಿ ಪ್ರಮಾಣದಲ್ಲಿ ಈಗ ಕುಸಿದು ಹೋಗಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications