Chikkanna Marriage: ಮಂಡ್ಯದ ಬೆಡಗಿ ಪಾವನ ಜೊತೆ ನಟ ಚಿಕ್ಕಣ್ಣ ಅದ್ದೂರಿ ವಿವಾಹ

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ನಾಯಕ ನಟ ಚಿಕ್ಕಣ್ಣ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಆಗಸ್ಟ್ 30) ಮೈಸೂರಿನಲ್ಲಿ ನಡೆದ ಅದ್ದೂರಿಯಾಗಿ ವಿವಾಹ ಸಮಾರಂಭದಲ್ಲಿ ಅವರು ಮಂಡ್ಯ ಮೂಲದ ಪಾವನ ಕೆ.ಸಿ. ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ನವಜೋಡಿಗೆ ಶುಭಕೋರುತ್ತಿದ್ದು, ನಟ ಚಿಕ್ಕಣ್ಣ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಗುರು-ಹಿರಿಯರು ಸೇರಿ ನಿಶ್ಚಯಿಸಿದ ಈ ಅರೇಂಜ್ಡ್ ಮ್ಯಾರೇಜ್‌ಗೆ ಕುಟುಂಬಸ್ಥರು ಹಾಗೂ ಆಪ್ತರು ಸಾಕ್ಷಿಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ ಮನೆಮಾಡಿದೆ.

Kannada Actor Chikkanna Marries Pavana in a Grand Wedding Ceremony at Mysuru Check Full Details

ಭಾವುಕರಾಗಿ ಕಣ್ಣೀರಿಟ್ಟ ವಧು

ಮೈಸೂರಿನ ಪ್ರಸಿದ್ಧ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ (ಆಗಸ್ಟ್ 29) ರಾತ್ರಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿತ್ತು. ಭಾನುವಾರ ಬೆಳಗ್ಗೆ ನಡೆದ ಶುಭ ಮುಹೂರ್ತದಲ್ಲಿ ಹಸೆಮಣೆ ಏರಿದ ಈ ನವಜೋಡಿ, ಸಾಂಪ್ರದಾಯಿಕ ರೇಷ್ಮೆ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಚಿಕ್ಕಣ್ಣ ಅವರು ಪಾವನ ಅವರ ಕೊರಳಿಗೆ ತಾಳಿ ಕಟ್ಟುವಾಗ ಇಬ್ಬರ ಮುಖದಲ್ಲೂ ಹೊಸ ಬಾಳಿಗೆ ಕಾಲಿಡುತ್ತಿರುವ ಖುಷಿ ಎದ್ದು ಕಾಣುತ್ತಿತ್ತು.

ಆದರೆ, ಮಾಂಗಲ್ಯ ಧಾರಣೆಯ ನಂತರದ ಶಾಸ್ತ್ರಗಳ ಸಮಯದಲ್ಲಿ ವಧು ಪಾವನ ಅವರು ಭಾವುಕರಾಗಿ ಆನಂದಭಾಷ್ಪ ಸುರಿಸಿದ ಪ್ರಸಂಗವೂ ನಡೆಯಿತು. ಸ್ಯಾಂಡಲ್‌ವುಡ್‌ನ ಹಲವು ಗಣ್ಯರು, ಆಪ್ತ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನವ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಹಾಸ್ಯ ನಟ ಚಿಕ್ಕಣ್ಣನ ಹಿನ್ನೆಲೆ

ಮೈಸೂರು ಜಿಲ್ಲೆಯ ಬಲ್ಲಹಳ್ಳಿ ಗ್ರಾಮದವರಾದ ಚಿಕ್ಕಣ್ಣ ಅವರ ಜೀವನ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ. ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಅವರು, ಜೀವನ ಸಾಗಿಸುವ ಸಲುವಾಗಿ ಗಾರೆ ಕೆಲಸ ಹಾಗೂ ಕುರಿ ಕಾಯುವ ಕೆಲಸವನ್ನ ಸಹ ಮಾಡಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರಿಗೆ ಮನೆಯಲ್ಲಿ ತಂದೆಯ ವಿರೋಧವಿತ್ತು. ಆದರೂ ಕದ್ದುಮುಚ್ಚಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರು, ಕಷ್ಟಪಟ್ಟು ಕಾಮಿಡಿ ಶೋಗಳ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಚಿಕ್ಕಣ್ಣ, ನಂತರ ರಾಜಾಹುಲಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ಪಡೆದರು. ಐರಾವತ, ರನ್ನ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ತಮ್ಮ ಅದ್ಭುತ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅವರು, ಇತ್ತೀಚೆಗೆ ಬಿಡುಗಡೆಯಾದ ಉಪಾಧ್ಯಕ್ಷ ಹಾಗೂ ಇನ್ನೇನು ತೆರೆ ಕಾಣಲಿರುವ ಲಕ್ಷ್ಮೀಪುತ್ರ ಸಿನಿಮಾಗಳ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿಯೂ ಯಶಸ್ವಿಯಾಗಿದ್ದಾರೆ.

ಚಿಕ್ಕಣ್ಣನ ಅರ್ಧಾಂಗಿ ಪಾವನ ಪರಿಚಯ

ಚಿಕ್ಕಣ್ಣ ಅವರ ಕೈಹಿಡಿದಿರುವ ವಧು ಪಾವನ ಕೆ.ಸಿ. ಗೌಡ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಪಾವನ, ಚಿಕ್ಕಣ್ಣ ಅವರಿಗಿಂತ 7 ವರ್ಷ ಚಿಕ್ಕವರು. ಎರಡು ಕುಟುಂಬಗಳ ಹಿರಿಯರು ಕುಳಿತು ಮಾತುಕತೆ ನಡೆಸಿ ನಿಶ್ಚಯಿಸಿದ ಈ ವಿವಾಹವು, ಹಿಂದೂ ಸಂಪ್ರದಾಯದಂತೆ ಭರ್ಜರಿಯಾಗಿ ನೆರವೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+