Thug Life: ಕನ್ನಡ ಕಡೆಗಣಿಸಿದ ಕಮಲ್ ಹಾಸನ್ ಸಿನಿಮಾ: ಶಿವಣ್ಣ ಹೇಳಿ ಯಾವ ಭಾಷೇಲಿ ನೋಡ್ಬೇಕು?
ಬೆಂಗಳೂರು, ಮೇ 31: ಕನ್ನಡ ಭಾಷೆ ವಿಚಾರದಲ್ಲಿ ಅನ್ಯ ಭಾಷೆ ಸಿನಿಮಾಗಳು ಮೇಲಿಂದ ಮೇಲೆ ಕನ್ನಡವನ್ನು ಕಡೆಗಣಿಸುತ್ತಿವೆ. ತಮಿಳು ನಟ ಕಮಲ್ ಹಾಸನ್ ಮಾತ್ರವಲ್ಲದೇ, ಅವರ ನಟನೆಯ 'ಥಗ್ ಲೈಫ್' (Thug Life) ಸಿನಿಮಾ ಮತ್ತು ಚಿತ್ರತಂಡ ಸಹ ಕನ್ನಡವನ್ನು ಕಡೆಗಣಿಸಿವೆ. ಈ ಮೂಲಕ ಬೇರೆ ಭಾಷೆಯ ಸಿನಿಮಾಗಳು ಕನ್ನಡ ನಿರ್ಲಕ್ಷ್ಯಿಸುವ ಪರಂಪರೆ ಮುಂದುವರಿಸಿವೆ. ಕನ್ನಡ ಕುರಿತು ವಿವಾದಾತ್ಮಕವಾಗಿ ಮಾತನಾಡಿದ ನಟ ಕಮಲ್ ಹಾಸನ್ ವಿರುದ್ಧ ಕಿಡಿ ತೀವ್ರಗೊಂಡ ಬೆನ್ನಲ್ಲೆ ಅವರ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ ಎಂಬುದು ಗೊತ್ತಾಗಿದೆ. ಹಾಗಾದರೆ ನಟ ಶಿವರಾಜ್ ಕುಮಾರ್ ಪ್ರಮೋಟ್ ಮಾಡಿದ್ದೇಕೆ? ನಾವು ಯಾವ ಭಾಷೆಯಲ್ಲಿ ಸಿನಿಮಾ ನೋಡಬೇಕು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಪರಭಾಷೆಯ ಸಿನಿಮಾಗಳು ಐದು ಭಾಷೆಯಲ್ಲಿ ತಮ್ಮ ಸಿನಿಮಾ ಬಿಡುಗಡೆ ಎನ್ನುತ್ತವೆ. ಕನ್ನಡ ಭಾಷೆಯಲ್ಲೂ ರಿಲೀಸ್ ಎಂದು ಹೇಳುತ್ತವೆ. ಇಲ್ಲಿಗೆ ಬಂದು ಪ್ರಮೋಷನ್ ಮಾಡುತ್ತಾರೆ. ಆದರೆ ಕನ್ನಡ ಭಾಷೆಯಲ್ಲಿ ನಾಮಕಾವಸ್ತೆಗೆ ಒಂದೆರಡು ಥಿಯೇಟರ್ ನೀಡುವ ಸಂಪ್ರದಾಯವಿದೆ. ಕನ್ನಡ ಸ್ಟಾರ್ ನಟರು ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಯಲ್ಲಿ ಮಾತನಾಡುತ್ತಾರೆ. ಆ ಭಾಷೆಗೆ ಗೌರವ ನೀಡುತ್ತಾರೆ. ಆದರೆ ಬೇರೆ ಭಾಷೆಯ ಕೆಲ ನಟರಿಗೆ ಕನ್ನಡ ಮಾತನಾಡಲು ಅಸಡ್ಡೆ.

ಬೆಂಗಳೂರಲ್ಲಿ ನಡೆಯಬೇಕಿದ್ದ 'ಪುಷ್ಪ-2' ಸಿನಿಮಾ ಪ್ರಮೋಷನ್ ಕಾರ್ಯಕ್ರಮ ರದ್ದಾಯಿತು. ಕನ್ನಡ ನೆಲದಲ್ಲಿ ಕನ್ನಡಕ್ಕಿಂತ ಆ ಸಿನಿಮಾ ಮೂಲ ಭಾಷೆಯಲ್ಲಿ (ತೆಲುಗು) ಪ್ರದರ್ಶನ ಕಂಡಿದ್ದೇ ಹೆಚ್ಚು. ನಟ ಅಲ್ಲು ಅರ್ಜುನ್ ಅವರು ಸಹ ಕನ್ನಡ ಮಾತನಾಡಲು ಬರದೇ ಇವೆಂಟ್ ಕ್ಯಾನ್ಸಲ್ ಮಾಡಿದ್ದರು ಅಂತಲೂ ಆರೋಪ ಕೇಳಿ ಬಂದಿತ್ತು. ಇಂತಹ ಹಲವು ಘಟನೆಗಳು ನಡೆಯುತ್ತಲೇ ಬಂದಿವೆ. ಕನ್ನಡಿಗರನ್ನು, ಭಾಷೆಯನ್ನು ಕಡೆಗಣಿಸಲಾಗುತ್ತಲೇ ಬರಲಾಗುತ್ತಿದೆ. ಇದು ನಿಲ್ಲೋದು ಯಾವಾಗ?
ವಿವಾದಿತ ಹೇಳಿಕೆ ಬೆನ್ನಲ್ಲೆ ಕನ್ನಡ ಕಡಗಣನೆ..
ಇತ್ತೀಚೆಗೆ 'ಥಗ್ ಲೈಫ್' ಇವೆಂಟ್‌ನಲ್ಲಿ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತೆ ಇದೆ. ನಟ ಕಮಲ್ ಹಾಸನ್ ಶಿವಣ್ಣ ಎದುರುಗಡೆಯೇ 'ತಮಿಳಿನಿಂದ ಕನ್ನಡ ಹುಟ್ಟಿದೆ' ಎಂದು ವಿವಾದಿತ ಹೇಳಿಕೆ ನೀಡಿದ್ದರು. ಸಿನಿಮಾ ಇದೇ ಜೂನ್ 05ರಂದು ಬಿಡುಗಡೆ ಆಗುತ್ತಿದೆ. ಚೆನ್ನೈನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅವರು ಭಾಗಿಯಾಗಿದ್ದರು. ಕಮಲ್ ಹಾಸನ ಹೇಳಿಕೆಯಿಂದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕ್ಷಮೆ ಕೇಳುವವರೆಗೆ 'ಥಗ್ ಲೈಫ್' ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಮಾಡಲ್ಲ ಎಂದಿದೆ. ಕಮಲ್ ಹಾಸನ್ ತಾವು ಕ್ಷಮೆ ಕೇಳಲ್ಲ ಎಂದಿದ್ದಾರೆ. ಈ ಮಧ್ಯೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ತೆರೆಮರೆಯ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ.

ನಟ ಶಿವಣ್ಣಗೆ ನೆಟ್ಟಿಗರ ಪ್ರಶ್ನೆ
ಒಂದು ವೇಳೆ ಕರ್ನಾಟಕದಲ್ಲಿ 'ಥಗ್ ಲೈಫ್' ಬಿಡುಗಡೆ ಆಗಿದ್ದೇ ಆದರೆ ಯಾವ ಭಾಷೆಯಲ್ಲಿ ಸಿನಿಮಾ ನೋಡಬೇಕು ಎಂದು ಕೆಲವು ನೆಟ್ಟಿಗರು ಶಿವಣ್ಣನನ್ನು ನೆಟ್ಟಿಗರು (@AaladaMara) ಪ್ರಶ್ನಿಸಿದ್ದಾರೆ. ನೀವು ಸಿನಿಮಾ ಪ್ರಚಾರಕ್ಕೆ ಚೆನ್ನೈಗೆ ಹೋಗಿ ಬಂದಿರುವಿರಿ. ಕಮಲ್ ಹಾಸನ್ ಸಿನಿಮಾ ThugLife ತಮಿಳು, ತೆಲುಗು ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಆದರೆ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಹೀಗಿದ್ದರೂ ನಮ್ಮ ಕನ್ನಡದ ಕಂದ ಶಿವರಾಜ್ ಕುಮಾರ್ ಹೋಗಿ ಇದನ್ನು ಪ್ರಮೋಟ್ ಮಾಡಿದ್ದಾರೆ.
ಈಗ ಕನ್ನಡಿಗರು ಕರ್ನಾಟಕದಲ್ಲಿ ಈ ಸಿನಿಮಾವನ್ನು ಯಾವ ಬಾಷೆಯಲ್ಲಿ ನೋಡಬೇಕು ಎಂದು ನಟ ಶಿವರಾಜ್ ಕುಮಾರ್ ಅವರೇ ಹೇಳಬೇಕು. ಶಿವರಾಜ್ ಕುಮಾರ್ ಅವರಿಗೆ ಕನ್ನಡದ ಮೇಲೆ ಅಭಿಮಾನ ಇರುವುದು ಎಲ್ಲರಿಗೂ ಗೊತ್ತು. ಆದರೆ ಅವರಿಂದ ಪ್ರಚಾರ ಗಿಟ್ಟಿಸಿಕೊಂಡು ಬೇರೆ ಚಿತ್ರರಂಗದವರು ತಿಪ್ಪೆ ಸಾರಿಸೋ ರೀತಿಯಲ್ಲಿ ಇಲ್ಲಿ ಬಂದು ದುಡ್ಡು ಮಾಡಿಕೊಳ್ಳುತ್ತಾರೆ. ಕನ್ನಡ ನಿರ್ಲಕ್ಷ್ಯಿಸುತ್ತಾರೆ. ಅಂತವರಿಗೆ ಏನು ಹೇಳೋಣ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗುತ್ತಿದೆ. ಇನ್ನೂ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇದಿಕೆಗಳಲ್ಲಿ ಸಿನಿಮಾ ಯಾವೆಲ್ಲ ಭಾಷೆಯಲ್ಲಿ ತೆರೆಗೆ ಬರುತ್ತಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.
04 ಭಾಷೆಯಲ್ಲಿ 'ಥಗ್ ಲೈಫ್' ಬಿಡುಗಡೆ
ಈಗಾಗಲೇ ಕನ್ನಡದ ಮೇಲೆ ಪ್ರಹಾರ ಮಾಡಲಾಗಿದೆ. ಅಗೌರವ ತೋರಲಾಗಿದೆ. 'ಥಗ್ ಲೈಫ್' ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಸೇರಿ 04 ಭಾಷೆಯಲ್ಲಿ ಬಿಡುಗಡೆ ಆಗಲಿದ್ದು, ಕನ್ನಡ ಕಡೆಗಣಿಸಿದೆ. ಕರ್ನಾಟಕದಲ್ಲೂ ತಮಿಳು, ತೆಲುಗು ಸೇರಿದಂತೆ ಅನ್ಯಭಾಷೆಯ ಸಿನಿಮಾಗಳನ್ನು ತಲೆ ಮೇಲಿಟ್ಟುಕೊಂಡು ಹೊತ್ತು ಮೆರೆಸುವವರಿದ್ದಾರೆ. ಇಲ್ಲೂ ಆ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡುತ್ತವೆ. ಆದರೆ ಕನ್ನಡ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಎಂದರೆ ಮೂಗು ಮುರಿಯುತ್ತಾರೆ. ಒಂದು ವೇಳೆ ಕನ್ನಡದಲ್ಲಿ ರಿಲೀಸ್ ಆದರೂ ನಾಲ್ಕೈದು ಥಿಯೇಟರ್‌ಗಳಲ್ಲಿ ರಿಲೀಸ್ ಆದರೆ ಹೆಚ್ಚು. ಪ್ರತಿ ಭಾರಿ ದೊಡ್ಡ ದೊಡ್ಡ ನಟರ ಅನ್ಯಭಾಷೆ ಸಿನಿಮಾ ಬಂದಾಗಲೂ ಇಂತದ್ದೇ ಸಮಸ್ಯೆ ಆಗುತ್ತಿದೆ.
ಕನ್ನಡಿಗರ ಸಹನೆ..ಸಿನಿಮಾ ಬಾಯ್ಕಾಟ್..?
ಸದ್ಯ ಕಮಲ್ ಹಾಸನ್ ಅವರು ಕ್ಷಮೆ ಕೇಳದಿದ್ದರೆ ರಾಜ್ಯದಲ್ಲಿ ಆ ಸಿನಿಮಾ ರಿಲೀಸ್ ಮಾಡಬಾರದು. ಕನ್ನಡಿಗರು ಬಾಯ್ಕಾಟ್ ಮಾಡಬೇಕು. ಸಿನಿಮಾ ವಿತರಕರು ಫಿಲ್ಮ್ ಚೇಂಬರ್ ನಿರ್ದೇಶನ ಪಾಲಿಸಬೇಕು ಎಂಬ ಆಗ್ರಹ ಜೋರಾಗಿದೆ. ಒಂದು ವೇಳೆ ನಟ ಕಮಲ್ ಹಾಸನ್ ಕ್ಷಮೆ ಕೇಳಿದರೂ ಸಹಿತ, ಕನ್ನಡ ನೆಲದಲ್ಲಿ ತಮಿಳು, ತೆಲುಗು ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಆಗುವುದ ಪಕ್ಕಾ ಆಗಿದೆ. ಆಗ ಕನ್ನಡಿಗರ ಮತ್ತೆ ಎಲ್ಲವನ್ನು ಸಹಿಸಿಕೊಂಡು ಹೋಗುತ್ತಾರಾ? ಇಲ್ಲವೇ ಸಿನಿಮಾ ಬಹಿಷ್ಕರಿಸುತ್ತಾರಾ ಕಾದು ನೋಡಬೇಕಿದೆ..
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications