Oscars 2025: ಕಮಲ್‌ ಹಾಸನ್‌ಗೆ ಆಸ್ಕರ್‌ನಿಂದ ವಿಶೇಷ ಆಹ್ವಾನ, ಇದು ನಮ್‌ ಗತ್ತು ಎಂದ ತಮಿಳಿಗರು

ಭಾಷಾ ವಿಚಾರವಾಗಿ ತಮಿಳು ನಟ ಕಮಲ್‌ ಹಾಸನ್‌ ಇತ್ತೀಚೆಗೆ ಕರ್ನಾಟಕದಲ್ಲಿ ಕಿಡಿ ಹೊತ್ತಿಸಿದ್ದರು. ಕನ್ನಡ ತಮಿಳಿನಿಂದ ಹುಟ್ಟಿದ್ದು ಎನ್ನುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಈವರೆಗೂ ಕ್ಷಮೆ ಕೇಳಲಿಲ್ಲ. ಕೊನೆಗೆ ಕರ್ನಾಟಕದಲ್ಲಿ ಅವರ ಥಗ್‌ಲೈಫ್‌ ಸಿನಿಮಾ ರಿಲೀಸ್‌ ಆಗಲಿಲ್ಲ. ಬಿಡುಗಡೆ ಆದ ಕಡೆ ಸಕ್ಸಸ್‌ ಕೂಡ ಕಾಣಲಿಲ್ಲ. ಈ ಹೀನಾಯ ಸೋಲಿನ ಚಿಂತೆಯಲ್ಲಿದ್ದ ನಟ ಕಮಲ್‌ ಹಾಸನ್‌ಗೆ ಇದೀಗ ಅದೃಷ್ಟವೊಂದು ಒಲಿದುಬಂದಿದೆ. ಇದರಿಂದ ನಮ್ಮ ಕಮಲ್‌ ಹಾಸನ್‌ ಗತ್ತು ಇಡೀ ಜಗತ್ತಿಗೇ ಗೊತ್ತು ಅಂತಿದ್ದಾರೆ ತಮಿಳು ಮಂದಿ.

ಆಸ್ಕರ್ ಪ್ರಶಸ್ತಿಗಳನ್ನು (Oscar Awards) ನಡೆಸುವ ಲಾಸ್ ಏಂಜಲೀಸ್ ಮೂಲದ ಅಕಾಡೆಮಿಯು 2025ರ ಆಸ್ಕರ್ ಪ್ರಶಸ್ತಿಗಳಿಗೆ ಹೊಸ ಸದಸ್ಯರನ್ನು ಘೋಷಿಸಿದೆ. 2025ರ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಅಕಾಡೆಮಿ ಸದಸ್ಯತ್ವಕ್ಕೆ ಸೇರಲು ತಮಿಳು ನಟ ಕಮಲ್‌ ಹಾಸನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಅಕಾಡೆಮಿಯ ಅಧಿಕೃತ ವೆಬ್‌ಸೈಟ್ ಪ್ರಕಾರ ಅದರ 19 ಶಾಖೆಗಳು ಮತ್ತು ಒಂದು ಸದಸ್ಯತ್ವ ವರ್ಗೀಕರಣದ ಸದಸ್ಯತ್ವ ಪ್ರಕ್ರಿಯೆಯನ್ನು ಅರ್ಜಿಯ ಮೂಲಕವಲ್ಲ, ಪ್ರಾಯೋಜಕತ್ವದ ಮೂಲಕ ನಡೆಸಲಾಗುತ್ತದೆ ಎಂದು ಹೇಳಿದೆ.

kamal-haasan-invited-to-join-oscar-academy-panel-indian-cinema-honored

ಅಕಾಡೆಮಿಯ ಸದಸ್ಯತ್ವ ಪಡೆದವರು ಆಸ್ಕರ್‌ ಪ್ರಶಸ್ತಿಗಳ ವಿಜೇತರನ್ನು ನಿರ್ಧರಿಸಲು ಸಹಾಯ ಮಾಡುತ್ತಾರೆ. ಆದ್ದರಿಂದ ಇದು ಕೇವಲ ಗೌರವವಲ್ಲ. ಇದು ಆಸ್ಕರ್ ಪ್ರಕ್ರಿಯೆಯಲ್ಲಿ ಔಪಚಾರಿಕ ಪಾತ್ರ ಎನ್ನಲಾಗಿದೆ. ಈ ಆಹ್ವಾನವು ಆಸ್ಕರ್‌ನಲ್ಲಿ ಕಮಲ್‌ ಹಾಸನ್‌ ಅವರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತದೆ. ಇದು ತಮಿಳು ಪ್ರೇಕ್ಷಕರಿಗೆ ಮತ್ತು ಭಾರತೀಯ ಚಲನಚಿತ್ರ ಸಮುದಾಯಕ್ಕೆ ಹೆಮ್ಮೆಯ ಕ್ಷಣ ಎಂದು ಅವರ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಅಸೋಸಿಯೇಟ್‌ಗಳನ್ನು ಹೊರತುಪಡಿಸಿ, ಅಭ್ಯರ್ಥಿಗಳು ಪ್ರವೇಶ ಪಡೆಯಲು ಬಯಸುವ ಶಾಖೆ ಅಥವಾ ವರ್ಗದಿಂದ ಇಬ್ಬರು ಅಕಾಡೆಮಿ ಸದಸ್ಯರು ಅಭ್ಯರ್ಥಿಗಳನ್ನು ಪ್ರಾಯೋಜಿಸಬೇಕು. ಇದರ ಜೊತೆಗೆ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶಿತರಾದವರನ್ನು ಅವರು ನಾಮನಿರ್ದೇಶನಗೊಂಡ ವರ್ಷದಲ್ಲಿ ಸದಸ್ಯತ್ವಕ್ಕಾಗಿ ಪರಿಗಣಿಸಲಾಗುತ್ತದೆ ಮತ್ತು ಪ್ರಾಯೋಜಕರ ಅಗತ್ಯವಿಲ್ಲ ಎಂದು ಅಕಾಡೆಮಿ ತಿಳಿಸಿದೆ.

ಯಾರಿಗೆಲ್ಲ ಆಹ್ವಾನ?

ಈ ವರ್ಷ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನಿಂದ ಆಹ್ವಾನಿಸಲ್ಪಟ್ಟ 534 ಕಲಾವಿದರು ಮತ್ತು ಕಾರ್ಯನಿರ್ವಾಹಕರಲ್ಲಿ ನಟರಾದ ಕಮಲ್ ಹಾಸನ್, ಆಯುಷ್ಮಾನ್ ಖುರಾನಾ ಮತ್ತು ಕೇನ್ಸ್ ಗ್ರ್ಯಾಂಡ್ ಪ್ರಿಕ್ಸ್ ವಿಜೇತ-ಚಲನಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ ಕೂಡ ಸೇರಿದ್ದಾರೆ. ಇವರು ಈ ಬಾರಿ ಆಸ್ಕರ್‌ ಪ್ರಶಸ್ತಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಮಲ್ ಹಾಸನ್ ಮತ್ತು ಆಯುಷ್ಮಾನ್ ಖುರಾನಾ ನಟರ ಶಾಖೆಗೆ ಸೇರಲು ಆಹ್ವಾನ ಪಡೆದಿದ್ದರೆ, ಪಾಯಲ್ ಕಪಾಡಿಯಾ ಬರಹಗಾರರ ಶಾಖೆಯಿಂದ ಆಹ್ವಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಪ್ರಮುಖ ಭಾರತೀಯ ಪ್ರತಿಭೆಗಳಾದ ಕರಣ್ ಮಲ್ಲಿ (ಗಲ್ಲಿ ಬಾಯ್), ಛಾಯಾಗ್ರಾಹಕ ರಣಬೀರ್ ದಾಸ್, ಕಾಸ್ಟ್ಯೂಮ್‌ ಡಿಸೈನರ್‌ ಮ್ಯಾಕ್ಸಿಮಾ ಬಸು (ಬಾಜಿರಾವ್ ಮಸ್ತಾನಿ), ಸಾಕ್ಷ್ಯಚಿತ್ರ ನಿರ್ಮಾಪಕಿ ಸ್ಮೃತಿ ಮುಂಧ್ರಾ (ಐ ಆಮ್ ರೆಡಿ, ವಾರ್ಡನ್) ಕೂಡ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+