ದೈವದ ಆಶೀರ್ವಾದ ಪಡೆದ ‘ಕಾಂತಾರ’ ಹೀರೋ: ತೆಲುಗು ರಾಜ್ಯದ ಸೂಪರ್ ಸ್ಟಾರ್ ಕನ್ನಡ ನಾಡಲ್ಲಿ ರೌಂಡಿಂಗ್ಸ್!
'ಕಾಂತಾರ' ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿರುವ & ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿರುವ, ನಟ ರಿಷಭ್ ಶೆಟ್ಟಿ ಈಗ ದೈವದ ಮೊರೆ ಹೋಗಿದ್ದಾರೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ತೆಲುಗು ಸೂಪರ್ ಸ್ಟಾರ್ & ಪ್ಯಾನ್ ಇಂಡಿಯಾ ಹೀರೋ ಜೊತೆಗೆ ದೇವಾಲಯಗಳಿಗೆ ಭೇಟಿ ನೀಡಿ, ದೈವದ ಆಶೀರ್ವಾದ ಪಡೆಯುತ್ತಿದ್ದಾರೆ. ಹೀಗಿದ್ದಾಗ, ಕರ್ನಾಟಕದಲ್ಲೇ ಅತ್ಯಂತ ವಿಶೇಷತೆ ಮತ್ತು ದೊಡ್ಡ ಇತಿಹಾಸ ಹೊಂದಿರುವ ದೇವಸ್ಥಾನಕ್ಕೆ ಪ್ರಶಾಂತ್ ನೀಲ್ & ಜೂನಿಯರ್ ಎನ್‌ಟಿಆರ್ ಜೊತೆಗೆ ನಟ ರಿಷಭ್ ಭೇಟಿ ನೀಡಿದ್ದಾರೆ!
ರಿಷಬ್ ಶೆಟ್ಟಿ ಅವರು ದೈವ ಭಕ್ತರು ಹಾಗೂ ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದವರು. ಈ ಹಿನ್ನೆಲೆ ಅವರು ನಿರ್ದೇಶನ ಮಾಡಿ ನಟಿಸಿದ್ದ 'ಕಾಂತಾರ' ಸಿನಿಮಾ ಜಾಗತಿಕವಾಗಿ ಕೂಡ ಸದ್ದು ಮಾಡಿದೆ. ಹಾಗೇ 'ಕಾಂತಾರ' ಸಿನಿಮಾ ನಟನೆಗಾಗಿ ನಟ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಈ ಖುಷಿ ಸಮಯದಲ್ಲೇ ರಿಷಬ್ ಶೆಟ್ಟಿ ಅವರನ್ನು ಭೇಟಿ ಮಾಡಲು ಇದೀಗ ದೂರದ ಹೈದರಾಬಾದ್ ನಗರದಿಂದ ಜೂನಿಯರ್ ಎನ್‌ಟಿಆರ್ ಬಂದಿದ್ದಾರೆ. ಹೀಗಿದ್ದಾಗಲೇ ನಟ ರಿಷಬ್ ಒಂದು ಅದ್ಭುತವಾದ ವಿಡಿಯೋ ಶೇರ್ ಮಾಡಿಕೊಂಡಿದ್ದು, ಆ ವಿಡಿಯೋನ ನೋಡಲು ಮುಂದೆ ಓದಿ.

ಹರ ಹರ ಮಹದೇವನ ದರ್ಶನ!
ಅಷ್ಟಕ್ಕೂ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನ ಜಗತ್ತಿನಾದ್ಯಂತ ಭಾರಿ ಫೇಮಸ್, ಯಾಕಂದ್ರೆ ಈ ದೇಗುಲಕ್ಕೆ ದೊಡ್ಡ ಇತಿಹಾಸ ಇದೆ. ಕೆರಾಡಿ ಗ್ರಾಮದ ಮೂಡುಗಲ್ಲಿನ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಇದೀಗ ತೆಲುಗು ಚಿತ್ರರಂಗದ ಲೆಜೆಂಡ್ & ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಜೊತೆ ಕನ್ನಡದ ಸ್ಟಾರ್ ನಟ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ.
ಹಾಗೇ ಇವರ ಜೊತೆಗೆ ಪ್ರಶಾಂತ್ ನೀಲ್ ಅವರು ಕೂಡ ಭೇಟಿ ನೀಡಿದ್ದು, ಮೂವರು ಕೂಡ ತಮ್ಮ ತಮ್ಮ ಕುಟುಂಬಸ್ಥರ ಜೊತೆಗೆ ಭೇಟಿ ನೀಡಿದ್ದಾರೆ. ಕೊಲ್ಲೂರು ದೇಗುಲಕ್ಕೆ ಭೇಟಿ ನಿಡಿ ಆಶೀರ್ವಾದ ಪಡೆದ ನಂತರ ಇಲ್ಲಿಗೆ ಆಗಮಿಸಿದ ಅವರು, ಇಲ್ಲಿನ ದೇವಸ್ಥಾನ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ ಜೂನಿಯರ್ ಎನ್‌ಟಿಆರ್. ಹಾಗಾದರೆ ಈ ದೇವಸ್ಥಾನದ ವಿಶೇಷತೆ ಏನು? ಮುಂದೆ ಓದಿ.
ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದಾಗ.. ✨🙏🏼
— Rishab Shetty (@shetty_rishab) September 2, 2024
A blessed journey to Keshavanatheshwara Temple Moodagallu ✨🙏🏼@tarak9999 #PrashanthNeel pic.twitter.com/SWfP2TAWrk
ಶಿವನ ದೇಗುಲದಲ್ಲಿ ಪ್ರಕೃತಿ ವಿಸ್ಮಯಗಳು
ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನದ ವಿಶೇಷತೆ ಏನು ಅಂದ್ರೆ, ಈ ದೇವಾಲಯ ಗುಹೆಯ ಮೂಲದಂತೆ ರೂಪುಗೊಂಡಿದೆ. ಇಲ್ಲಿನ ಮತ್ತೊಂದು ವಿಶೇಷತೆ ಏನು ಎಂದರೆ, ಇಡೀ ದೇಗುಲ ನೀರಿನಿಂದ ಆವೃತವಾಗಿದೆ. ಹಾಗೇ ಸುಮಾರು 20 ರಿಂದ 30 ಅಡಿ ವಿಶಾಲ ಜಾಗದಲ್ಲಿ ಹರಡಿಕೊಂಡಿದೆ. ದೇಗುಲದ ಒಳಗೆ ನೀರಿನ ಮೇಲೆ ನಿಂತು ಪರಮಾತ್ಮ ಶಿವನಿಗೆ ಕೈಮುಗಿದು ಬೇಡಿಕೊಳ್ಳುವ ಕ್ಷಣಗಳು ಜೀವನದಲ್ಲಿ ಮರೆಯಾಗದೆ ಉಳಿದು ಬಿಡುತ್ತವೆ. ಹಾಗೇ ಈ ದೇಗುಲ ಸುತ್ತಲು ಇರುವ ಪರಿಸರ ಎಲ್ಲರ ಮನಸ್ಸಿನಲ್ಲಿ ಎಂದೆಂದಿಗೂ ಮರೆಯಾಗದೆ ಉಳಿದು ಬಿಡುತ್ತದೆ. ಇದರ ಜೊತೆಗೆ ಗುಡಿಯ ಒಳಗೆ ಕತ್ತಲಿನಲ್ಲಿ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಏನೂ ನಿಮ್ಮ ಕಣ್ಣಿಗೆ ಕಾಣುವುದಿಲ್ಲ.












Click it and Unblock the Notifications