ಪುನೀತ್‌ ಮತ್ತೆ ಬಂದ್ರು: ಮೊದಲ ಸಿನಿಮಾದಲ್ಲೇ 'ಜ್ಯೂನಿಯರ್‌ ಅಪ್ಪು' ಎನಿಸಿಕೊಂಡ ನಟ

ಸ್ಯಾಂಡಲ್‌ವುಡ್‌ನ ಅಪ್ಪು, ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕರ್ನಾಟಕದಲ್ಲಿ ಭಾರಿ ಸಂಖ್ಯೆಯ ಅಭಿಮಾನಿಗಳಿರುವುದು ಗೊತ್ತೇ ಇದೆ. ಅವರ ನಟನೆ ಮಾತ್ರವಲ್ಲದೆ, ಅಪ್ಪು ಅವರ ಡ್ಯಾನ್ಸ್‌ಗೆ ಕೂಡ ಸಪರೇಟ್‌ ಫ್ಯಾನ್‌ ಬೇಸ್‌ ಇದೆ. ಅಷ್ಟು ಸಲೀಸಾಗಿ ಸ್ಟೆಪ್‌ ಹಾಕುತ್ತಾ ಒಳ್ಳೆಯ ಡ್ಯಾನ್ಸರ್ ಎಂದು ಕರೆಸಿಕೊಂಡಿದ್ದರು. ಅವರ ಡ್ಯಾನ್ಸ್ ನೋಡಲೆಂದೇ ಹಲವರು ಥಿಯೇಟರ್‌ಗಳಿಗೆ ಬರುತ್ತಿದ್ದು ಕೂಡ ಉಂಟು. ಆದರೆ ಅವರ ಅಕಾಲಿಕ ನಿಧನವು ಇಡೀ ಕನ್ನಡ ಚಿತ್ರರಂಗಕ್ಕೆ ಶಾಕ್‌ ನೀಡಿತ್ತು. ಮತ್ತೆ ಅಪ್ಪು ಅವರನ್ನು ತೆರೆ ಮೇಲೆ ನೋಡುವ ಭಾಗ್ಯ ಹೋಯ್ತಲ್ಲ ಎಂದು ಕಣ್ಣೀರಿಟ್ಟಿದ್ದರು. ಆದರೆ ಈಗ ಅಪ್ಪು ಮತ್ತೆ ಬಂದ್ರು ಅಂತಿದ್ದಾರೆ ಅವರ ಅಭಿಮಾನಿಗಳು. ಇದಕ್ಕೆ ಕಾರಣ ಕೂಡ ಇದೆ.

ಅಪ್ಪು ಅವರ ಜಾಗವನ್ನು ತುಂಬಲು ಬೇರೆಯವರಿಗೆ ಸಾಧ್ಯವಿಲ್ಲ ಅನ್ನೋ ಮಾತು ಸತ್ಯವೂ ಹೌದು. ಆ ರೀತಿ ಅವರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಪುನೀತ್‌ ಸಿನಿಮಾ ಬಂತು ಅಂದ್ರೆ, ಮೊದಲಿಗೆ ಎಲ್ಲರ ಕಣ್ಣು ಅದರಲ್ಲಿ ಅಪ್ಪು ಹಾಕುವ ಸ್ಟೆಪ್‌ ಮೇಲೆ ಇರುತ್ತಿತ್ತು. ಇದನ್ನು ಬೇರೆಯವರು ಮಾಡೋಕೆ ಚಾನ್ಸೇ ಇಲ್ಲ ಅಂತಿದ್ರು. ಆದರೆ ಈಗ ಅಪ್ಪು ಅವರ ಸ್ಥಾನ ತುಂಬ ನಟ ಬಂದಾಯ್ತು ಅಂತಿದ್ದಾರೆ ಅಭಿಮಾನಿಗಳು. ಅದು ಬೇರೆ ಯಾರೂ ಅಲ್ಲ, ತಮ್ಮ ಮೊದಲ ಸಿನಿಮಾದಿಂದಲೇ ತೆರೆ ಮೇಲೆ ಮೋಡಿ ಮಾಡಿರುವ ಕಿರೀಟಿ ರೆಡ್ಡಿ.

Janardhana Reddy Son Kireeti Reddy Gets Junior Appu Title From Fans

ಹೌದು, ರಾಜ್ಯದ ಜನಪ್ರಿಯ ರಾಜಕಾರಣಿ, ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅವರು ತಮ್ಮ ಮೊದಲ ಸಿನಿಮಾ ಜ್ಯೂನಿಯರ್‌ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕನ್ನಡ, ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಈ ಸಿನಿಮಾ ರಿಲೀಸ್‌ ಆಗಿದ್ದು, ಎರಡೂ ಕಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಾಮಾನ್ಯವಾಗಿ ಹೊಸಬರ ಸಿನಿಮಾ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಹೊಸ ಹೀರೋ ಅಂದ್ರೂ ಅಷ್ಟು ಜನಪ್ರಿಯತೆ ಸಿಗೋದಿಲ್ಲ. ಆದರೆ, ಕಿರೀಟಿ ಈ ಎಲ್ಲವನ್ನೂ ಸುಳ್ಳು ಮಾಡಿದ್ದಾರೆ. ಇದು ಕಾರಣವಾಗಿದ್ದು, ಆ ಒಂದು ಡ್ಯಾನ್ಸ್‌.

ಜ್ಯೂನಿಯರ್‌ ಸಿನಿಮಾದಲ್ಲಿ ಕಿರೀಟಿ ಕುಣಿತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಅಪ್ಪು ಅಭಿಮಾನಿಗಳಂತೂ ನಿಜವಾಗಿ ಅಪ್ಪು ಅವರನ್ನೇ ತೆರೆ ಮೇಲೆ ನೋಡಿದಂತಾಗುತ್ತಿದೆ ಎನ್ನುತ್ತಿದ್ದಾರೆ. ಕನ್ನಡಕ್ಕೆ ಅಪ್ಪು ಮತ್ತೆ ಬಂದ್ರು, ಅಪ್ಪು ಸರ್‌ನ ನೆನಪಿಸಿದ್ರು ಎಂದು ಹೇಳುತ್ತಿದ್ದಾರೆ. ಮುಂದೆ ಅಪ್ಪು ಜಾಗ ತುಂಬೋದು ಕಿರೀಟೀನೇ ಎಂದು ಕರೆಸಿಕೊಂಡಿದ್ದು, ಮೊದಲ ಸಿನಿಮಾದಲ್ಲೇ ಕಿರೀಟಿ ಜ್ಯೂನಿಯರ್‌ ಅಪ್ಪು ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಕಿರೀಟಿ ಅವರ ಅಭಿನಯ ಕೂಡ ಮೊದಲ ಸಿನಿಮಾದಂತಿಲ್ಲ, ಈಗಾಗಲೇ ಇರುವ ಸ್ಟಾರ್‌ ನಟರಂತೆಯೇ ನಟನೆಯಲ್ಲಿ ಗೆದ್ದಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Janardhana Reddy Son Kireeti Reddy Gets Junior Appu Title From Fans

ಜ್ಯೂನಿಯರ್‌ ಎನ್‌ಟಿಆರ್‌ಗೆ ಹೋಲಿಸಿದ ತೆಲುಗು ಮಂದಿ

ಜ್ಯೂನಿಯರ್‌ ಸಿನಿಮಾ ತೆಲುಗು ಭಾಷೆಯಲ್ಲೂ ರಿಲೀಸ್‌ ಆಗಿದ್ದು, ಟಾಲಿವುಡ್‌ ಮಂದಿ ಕೂಡ ಕಿರೀಟಿ ಡ್ಯಾನ್ಸ್‌ ಮೆಚ್ಚಿದ್ದಾರೆ. ಇಲ್ಲಿವರೆಗೆ ಟಾಲಿವುಡ್‌ನಲ್ಲಿ ನಟ ಜ್ಯೂನಿಯರ್‌ ಎನ್‌ಟಿಆರ್‌ (ತಾರಕ್‌) ಮಾತ್ರ ಇಂತಹ ಸ್ಟೆಪ್‌ಗಳನ್ನ ಹಾಕುತ್ತಿದ್ದರು. ಕಿರೀಟಿ ಕೂಡ ತಾರಕ್‌ ಅವರಂತೆಯೇ ಹವಾ ಕ್ರಿಯೇಟ್‌ ಮಾಡಿದ್ದಾರೆ ಎಂದು ರಿವ್ಯೂ ಕೊಡುತ್ತಿದ್ದಾರೆ. ಕನ್ನಡದ ಮಂದಿಗೆ ಅಪ್ಪು ಆಗಿ, ತೆಲುಗು ಮಂದಿಗೆ ಜ್ಯೂನಿಯರ್‌ ಎನ್‌ಟಿಆರ್‌ ಆಗಿ ಕಿರೀಟಿ ಮೋಡಿ ಮಾಡಿರುವುದಂತೂ ಸತ್ಯ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+