Keerthy Suresh: ಮಹಾನಟಿ ಕೀರ್ತಿ ಸುರೇಶ್ "ಕನ್ನಡ"ದ ಮಾತಿಗೆ ಕನ್ನಡಿಗರು ಫಿದಾ!
ದಕ್ಷಿಣ ಭಾರತದ ಮಹಾನಟಿ ಕೀರ್ತಿ ಸುರೇಶ್ ಕನ್ನಡಿಗರ ಮನಸ್ಸು ಗೆದಿದ್ದಾರೆ. ಕನ್ನಡದ ಬಗ್ಗೆ ಅವರು ಮಾತನಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ನಟಿ ಕೀರ್ತಿ ಸುರೇಶ್ ಅವರು ಕನ್ನಡದ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಅವರ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಆದರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅವರು ಮಿಂಚಿದ್ದಾರೆ. ಅವರ ತಾಯಿ ಸಹ ನಟಿ ಹಾಗೂ ತಂದೆ ನಿರ್ಮಾಪಕರು. ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿದೆ. ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚಿರುವ ಕೀರ್ತಿ ಸುರೇಶ್ ಈಚೆಗೆ ಬಾಲ್ಯದ ಗೆಳಯನೊಂದಿಗೆ ವಿವಾಹವಾಗಿದ್ದಾರೆ. ಇದೀಗ ಬಾಲಿವುಡ್‌ಗೂ ಕೀರ್ತಿ ಸುರೇಶ್ ಎಂಟ್ರಿ ಕೊಟ್ಟಿದ್ದಾರೆ. ಈ ರೀತಿ ಇರುವಾಗಲೇ ಕೀರ್ತಿ ಸುರೇಶ್ ಅವರ ಕನ್ನಡದ ಬಗ್ಗೆ ಮಾತನಾಡಿರುವ ಮಾತು ಕನ್ನಡಿಗರಲ್ಲಿ ಸಂತೋಷವನ್ನು ಉಂಟು ಮಾಡಿದೆ.
ಇದೀಗ ಕೀರ್ತಿ ಸುರೇಶ್ ಅವರ ಕನ್ನಡದ ಬಗ್ಗೆ ಮಾತನಾಡಿರುವ ಒಂದೇ ಒಂದು ಪದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳಿನ ಸಿನಿಮಾ ಹಿಂದಿಯಲ್ಲಿ ರೀಮೆಕ್ ಆಗುತ್ತಿದೆ. ತಮಿಳಿನ ತೇರಿ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದ್ದು, ಬಾಲಿವುಡ್‌ನಲ್ಲಿ ಬೇಬಿ ಜಾನ್ ಎನ್ನುವ ಹೆಸರಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದರಲ್ಲಿ ಕೀರ್ತಿ ಸುರೇಶ್ ನಟಿಯಾಗಿ ಹಾಗೂ ವರುಣ್ ಧವನ್ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೀರ್ತಿ ಸುರೇಶ್ ಹಾಗೂ ವರುಣ್ ಧವನ್ ಅವರ ನಡುವಿನ ಸಂಭಾಷಣೆ ವೈರಲ್ ಆಗಿದೆ. ವರಣು ಧವನ್ ಕನ್ನಡ ಕಲಿಸಿಕೊಡುವಂತೆ ಕೀರ್ತಿ ಸುರೇಶ್ ಅವರನ್ನು ಕೇಳಿದ್ದಾರೆ. ಅದಕ್ಕೆ ಕೀರ್ತಿ ಸುರೇಶ್ ಅವರು ಕೊಟ್ಟಿರುವ ರಿಪ್ಲೈ ವೈರಲ್ ಆಗಿದ್ದು, ಈ ಮಾತಿಗೆ ಕನ್ನಡಿಗರು ಫಿದಾ ಆಗಿದ್ದಾರೆ.

ಈ ಸಿನಿಮಾದ ಶೂಟಿಂಗ್‌ನಲ್ಲಿ ಕೀರ್ತಿ ಸುರೇಶ್ ಹಾಗೂ ವರುಣ್ ಅವರು ಮಾತನಾಡುತ್ತಿದ್ದಾರೆ. ಅದರಲ್ಲಿ ಕೀರ್ತಿ ಅವರು ನಾನು ವರುಣ್‌ಗೆ ದಕ್ಷಿಣ ಭಾರತದ ಭಾಷೆಗಳನ್ನು ಹೇಳಿ ಕೊಡ್ತೀನಿ ಅಂತ ಪ್ರಾರಂಭಿಸಿದ್ದಾರೆ. ಆಗ ವರುಣ್ ಧವನ್ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಐ ಲವ್ ಯೂ ಅಂತ ಹೇಳುವುದು ಹೇಗೆ ಅಂತ ಹೇಳಿಕೊಂಡಿ ಅಂತ ಕೇಳಿದ್ದಾರೆ. ಕೀರ್ತಿ ಸುರೇಶ್ ಅವರು ಸರಿ ಎಂದಿದ್ದಾರೆ. ಐ ಲವ್ ಯೂ ಎನ್ನುವುದನ್ನು ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಹಿಂದಿ ಪ್ರೇಕ್ಷಕರಿಗೆ ಇದನ್ನು ಯಾವ ರೀತಿ ಹೇಳಬೇಕು ಎನ್ನುವುದನ್ನು ಹೇಳಿ ಕೊಟ್ಟಿದ್ದಾರೆ. ಇದಾದ ಮೇಲೆ ಕನ್ನಡದಲ್ಲಿ ಹೇಳುವುದು ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಕೀರ್ತಿ ಸುರೇಶ್ ಅವರು ನನಗೆ ಕನ್ನಡ ಬರಲ್ಲ ಅಂತ ಹಿಂದಿಯಲ್ಲಿ ಹೇಳಿದ್ದಾರೆ. ಅದಕ್ಕೆ ವರುಣ್ ಧವನ್ ಅವರು ವಿ ಬೆಟರ್ ನೋ ಕನ್ನಡ ಎಂದಿದ್ದಾರೆ. ಅಂದರೆ ನಾವು ಕನ್ನಡ ತಿಳಿದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ. ಇದಕ್ಕೆ ನಗುತ್ತಲ್ಲೇ ಉತ್ತರಿಸಿದ ಕೀರ್ತಿ ಅವರು, ನಾನು ಖಂಡಿತವಾಗಿಯೂ ಕನ್ನಡ ಕಲಿಯುತ್ತೇನೆ. ಕನ್ನಡ ಕಲಿತು ವರುಣ್‌ಗೆ ಕಲಿಸುತ್ತೇನೆ ಎಂದಿದ್ದಾರೆ.

ಜೈ ಕನ್ನಡ ಎಂದ ಕನ್ನಡಿಗರು: ಈ ವಿಡಿಯೋಗೆ ಕನ್ನಡಿಗರು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ವಿಡಿಯೋ ಕಾಮೆಂಟ್‌ನಲ್ಲಿ ಜೈ ಕನ್ನಡ ಹಾಗೂ ಜೈ ಕರ್ನಾಟಕ ಎನ್ನುವ ಕಾಮೆಂಟ್‌ಗಳ ಸುರಿ ಮಳೆಯೇ ಆಗಿದೆ.












Click it and Unblock the Notifications