ತಾಯಿಯಂತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿಕೊಟ್ಟ ಜಾಹ್ನವಿ ಕಪೂರ್
ತಿರುಪತಿ, ಜನವರಿ 05: ಶುಕ್ರವಾರ ಬೆಳಗ್ಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ತಾಯಿ ದಿವಂಗತ ಶ್ರೀದೇವಿ ಅವರಂತೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಎಎನ್‌ಐ ವರದಿ ಪ್ರಕಾರ, ಟಾಲಿವುಡ್ ನಟಿ ಮಹೇಶ್ವರಿಯೊಂದಿಗೆ ತಿರುಪತಿ ತಿಮ್ಮಪ್ಪನ ಆಶೀರ್ವಾದವನ್ನು ಪಡೆಯಲು ನಟಿ ಜಾಹ್ನವಿ ಕಪೂರ್ ದೇವಸ್ಥಾನದ ಕಡೆಗೆ ನಡೆದುಕೊಂಡು ಹೋದರು ಎಂದು ತಿಳಿಸಿದೆ.

ಆಕೆಯ ಗೆಳೆಯ ಎನ್ನಲಾದ ಶಿಖರ್ ಪಹಾರಿಯಾ ಕೂಡ ತಿರುಪತಿ ದೇವಾಲಯಕ್ಕೆ ಜೊತೆಗೆ ಬಂದಿದ್ದರು. ದೇವಸ್ಥಾನ ಭೇಟಿ ವೇಳೆ ಅವರು ಚಿನ್ನದ ಬಣ್ಣದ ಸೀರೆಯನ್ನು ಧರಿಸಿದ್ದರು ಮತ್ತು ಶಿಖರ್ ಅವರು ಬಿಳಿ ಧೋತಿ-ಕುರ್ತಾವನ್ನು ಧರಿಸಿದ್ದರು. ಮಹೇಶ್ವರಿ ಹಸಿರು ಬಣ್ಣದ ಸೀರೆ ಧರಿಸಿದ್ದರು. ಜಾನ್ವಿ ಕೂಡ ಇನ್‌ಸ್ಟಾಗ್ರಾಂನಲ್ಲಿರುವ ಸೀರೆಯಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈಗ 2024 ಪ್ರಾರಂಭವಾದಂತೆ ಭಾಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಜಾಹ್ನವಿ ಅಥವಾ ಶಿಖರ್ ಅವರ ನಡುವಿನ ಸಂಬಂಧವನ್ನು ಖಚಿತಪಡಿಸಿಲ್ಲ, ಇಲ್ಲವೇ ನಿರಾಕರಿಸಿಲ್ಲ. ಆದಾಗ್ಯೂ, ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶಿಖರ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಅವರು ವಾಣಿಜ್ಯೋದ್ಯಮಿ, ಪೋಲೋ ಆಟಗಾರ ಆಗಿದ್ದಾರೆ.
ಜಾಹ್ನವಿ ಅವರು ಮುಂದಿನ ಬಾರಿ ನಟ ರಾಜ್‌ಕುಮಾರ್ ರಾವ್ ಅವರೊಂದಿಗೆ 'ಮಿಸ್ಟರ್ ಅಂಡ್ ಮಿಸಸ್ ಮಾಹಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಧರ್ಮ ಪ್ರೊಡಕ್ಷನ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹೊಸ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿತು. ಪೋಸ್ಟ್ ನಲ್ಲಿ "ಎರಡು ಹೃದಯಗಳು ಒಂದು ಕನಸನ್ನು ಬೆನ್ನಟ್ಟುತ್ತಿವೆ ಮತ್ತು ಇದು 19ನೇ ಏಪ್ರಿಲ್ 2024 ರಂದು ಚಿತ್ರಮಂದಿರಗಳಿಗೆ ಬರಲಿದೆ" ಎಂದು ತಿಳಿಸಿದೆ.
'ಮಿಸ್ಟರ್ ಅಂಡ್ ಮಿಸಸ್ ಮಹಿ' ಒಂದು ಕ್ರೀಡಾ ನಾಟಕ ಚಿತ್ರವಾಗಿದೆ. ಈ ಚಿತ್ರವು 'ರೂಹಿ' ನಂತರ ಜಾನ್ವಿ ಮತ್ತು ರಾಜ್‌ಕುಮಾರ್ ಅವರ ಎರಡನೇ ಸಹಯೋಗದ ಚಿತ್ರವಾಗಿರುತ್ತದೆ. 'ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್' ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಶರಣ್ ಶರ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.












Click it and Unblock the Notifications