ಪುನೀತ್ ರಾಜ್‌ಕುಮಾರ್ ಅವರ ‘ಜಾಕಿ’ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?
'ಜಾಕಿ' ಸಿನಿಮಾ ಕನ್ನಡ ಸಿನಿ ಇಂಡಸ್ಟ್ರಿಯಲ್ಲೇ ಎವರ್‌ಗ್ರೀನ್ ಸಿನಿಮಾ. 'ಜಾಕಿ' ಚಿತ್ರವನ್ನು, ಬೇರೆ ಭಾಷೆಯಲ್ಲಿ ರೀಮೇಕ್ ಮಾಡಲು ಕೂಡ ಅಂದಿನ ಸ್ಟಾರ್ ನಟರು ಮುಗಿಬಿದ್ದು ಬಂದಿದ್ದೂ ಉಂಟು. ಕನ್ನಡಿಗರ ಸಿನಿಮಾ 'ಜಾಕಿ' ಹತ್ತಾರು ಕೋಟಿ ರೂ. ಕಲೆಕ್ಷನ್ ಮಾಡಿ ಹೊಸ ದಾಖಲೆಯೆ ಬರೆದಿತ್ತು. ಈಗ ಅಪ್ಪು ಅವರು ನಮ್ಮ ಜೊತೆ ಇಲ್ಲ, ಹೀಗಾಗಿ ಅವರ ಹಳೇ ಸಿನಿಮಾ ಥಿಯೇಟರ್ ಸ್ಕ್ರೀನ್ ಮೇಲೆ ರಿಲೀಸ್ ಆಗಬೇಕು ಎಂಬುದೇ ಅಭಿಮಾನಿಗಳ ಬಯಕೆಯೂ ಆಗಿತ್ತು. ಹೀಗೆ ಅಪ್ಪು ಹುಟ್ಟುಹಬ್ಬಕ್ಕೆ ರೀ ರಿಲೀಸ್ ಆಗಿದ್ದ 'ಜಾಕಿ' ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತಾ?
'ಜಾಕಿ' ಚಿತ್ರ ರಾಜ್ಯದ ಮೂಲೆ ಮೂಲೆಯಲ್ಲೂ ರೀ ರಿಲೀಸ್ ಆಗಿತ್ತು. ಹಾಗೇ ಹೌಸ್‌ಫುಲ್ ಪ್ರದರ್ಶನ ಕಾಣುವಾಗ ಅಪ್ಪು ಅವರು ಸ್ಕ್ರೀನ್ ಮೇಲೆ ಬಂದಿದ್ದನ್ನು ನೋಡಿದ್ದ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಆ ವಿಡಿಯೋಗಳು ಫುಲ್ ವೈರಲ್ ಆಗುವ ಜೊತೆಗೆ, ಅಪ್ಪು ಅವರ ಮೇಲಿನ ಕನ್ನಡಿಗರ ಅಭಿಮಾನ ಎಂತಹದ್ದು? ಅನ್ನೋದು ಕೂಡ ಮತ್ತೊಮ್ಮೆ, ಇಡೀ ಜಗತ್ತಿಗೆ ಗೊತ್ತಾಗಿತ್ತು. ಹೀಗೆ ರೀ ರಿಲೀಸ್ ಆಗಿದ್ದರೂ ಪುನೀತ್ ರಾಜ್‌ಕುಮಾರ್ ಅವರ ಈ ಸಿನಿಮಾ 'ಜಾಕಿ' ಎಷ್ಟು ಕೋಟಿ ಗಳಿಸಿದೆ ಗೊತ್ತಾ? ಕನ್ನಡಿಗರನ್ನು ಬಿಟ್ಟು ಹೋಗಿ ದೇವರಾದ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಗ್ಗೆ ಕ್ರೇಜ್ ಹೇಗಿದೆ ಹೇಳಿ? ಬನ್ನಿ ತಿಳಿಯೋಣ.

'ಜಾಕಿ' ಸಿನಿಮಾ ಗಳಿಸಿದ್ದು ಇಷ್ಟು ಕೋಟಿ!
2010 ರಲ್ಲಿ ರಿಲೀಸ್ ಆಗಿದ್ದ 'ಜಾಕಿ' ಸಿನಿಮಾ ಆಗಿನ ಕಾಲಕ್ಕೆ ಸುಮಾರು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎನ್ನಲಾಗುತ್ತಿದೆ. ಇದೀಗ ರೀ ರಿಲೀಸ್ ಆಗಿದ್ದ ಜಾಕಿ, ಮತ್ತೆ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಹೌದು, ಮಾರ್ಚ್ 17 ಅಂದ್ರೆ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನ ರೀ ರಿಲೀಸ್ ಆಗಿದ್ದ 'ಜಾಕಿ' ಸಿನಿಮಾ ಸುಮಾರು 5 ಕೋಟಿ ರೂಪಾಯಿ ಗಳಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕೆಆರ್‌ಜಿ ಸಂಸ್ಥೆ ಆಗಲಿ, ಅಥವಾ ಸಿನಿಮಾ ತಂಡದವರೇ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಿದ್ದರೂ 'ಜಾಕಿ' ಸಿನಿಮಾ ಈಗ ರೀ ರಿಲೀಸ್ ಆದ ನಂತರವೂ ಕೋಟಿ ಕೋಟಿ ಕಲೆಕ್ಷನ್ ಮಾಡಿರುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿಗಳು ಓಡಾಡಿವೆ. ಆದ್ರೆ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಎಲ್ಲರಿಗೂ ಇಷ್ಟ ಪವರ್ ಸ್ಟಾರ್!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅಪ್ಪು ಅಂದ್ರೆ ಈಗಿನ್ನು ಹುಟ್ಟಿರುವ ಮಗುವಿನಿಂದ ಹಿಡಿದು, ದೊಡ್ಡವರಾಗಿ ಬೆಳೆದ ನಮ್ಮ ತನಕ ಎಲ್ಲರಿಗೂ ಇಷ್ಟ ಇಷ್ಟ. ಯಾಕಂದ್ರೆ ಬೆಟ್ಟದ ಹೂವು ಸಿನಿಮಾದಿಂದ ಹಿಡ್ದು ಗಂಧದ ಗುಡಿ ತನಕ ಅಪ್ಪು ಸಾಧನೆಗೆ ಈ ಭೂಮಿ ಮೇಲೆ ಯಾರು ಸಾಟಿ ಇಲ್ಲ. ಹೀಗಿದ್ದಾಗ ಅಪ್ಪು ಅಭಿನಯಿಸಿದ್ದ 2010ರಲ್ಲಿ ರಿಲೀಸ್ ಆಗಿದ್ದ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿತ್ತು. ಅಲ್ಲದೆ ಹಲವಾರು ದಾಖಲೆಗಳನ್ನ ಕೂಡ ಅಪ್ಪು ಅವರ ಹಳೆಯ ಸಿನಿಮಾ ಈಗ ನಿರ್ಮಾಣ ಮಾಡಿದೆ. ಅಭಿಮಾನಿಗಳು ಇದನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಹಾಗೇ ಅಪ್ಪು ಅವರ ಮುಂದಿನ ಹುಟ್ಟುಹಬ್ಬಕ್ಕೆ 'ಅಪ್ಪು' ಅಥವಾ 'ಅರಸು' ಸಿನಿಮಾ ರಿಲೀಸ್ ಆಗಲಿ ಅಂತಾ ಡಿಮ್ಯಾಂಡ್ ಇಡುತ್ತಿದ್ದಾರೆ.
ಒಟ್ನಲ್ಲಿ ಪುನೀತ್ ರಾಜ್‌ಕುಮಾರ್ ಅವರು ನಮ್ಮ ಜೊತೆಗೆ ಇರಲಿ, ಇಲ್ಲದೇ ಇರಲಿ. ಪುನೀತ್‌ರ ನೆನಪು ಮಾತ್ರ ಅಜರಾಮರ ಹಾಗೇ ಅವರು ಮಾಡಿದ ಸಿನಿಮಾಗಳು ಕೂಡ ಕನ್ನಡಿಗರ ಮನಸ್ಸು ಗೆದ್ದುಬಿಟ್ಟಿವೆ. ಹೀಗಾಗಿ ಆ ಸಿನಿಮಾಗಳು ಸಾವಿರ ಬಾರಿ ರೀ ರಿಲೀಸ್ ಆದರೂ ಸೂಪರ್ ಹಿಟ್, ಸೂಪರ್ ಹಿಟ್ ಆಗೇ ಆಗಲಿವೆ ಅಂತಿದ್ದಾರೆ ಅಭಿಮಾನಿಗಳು. ಈ ಮಾತು ಸತ್ಯ ಕೂಡ!
ಕರ್ನಾಟಕ ರತ್ನ ಇಲ್ಲದ 2ನೇ ಹುಟ್ಟುಹಬ್ಬ
ಅಷ್ಟಕ್ಕೂ ಅಪ್ಪು ಅಂದ್ರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಾವನ್ನು ಇಡೀ ಭಾರತ ತೀವ್ರ ಆಘಾತದಿಂದ ಸ್ವೀಕಾರ ಮಾಡಿತ್ತು. ಅದರಲ್ಲೂ ಅಪ್ಪು ಸರ್ ಮೃತಪಟ್ಟ ದಿನ ಇಡೀ ಕನ್ನಡ ನಾಡು ನೋವಿನಲ್ಲಿ ನರಳಾಡಿತ್ತು. ಮಹಾತ್ಮ ಗಾಂಧಿಜೀ ನಂತರ ಪವರ್ ಸ್ಟಾರ್ ಪುನೀತ್ ಅವರ ಅಂತಿಮ ದರ್ಶನಕ್ಕೆ ಅತಿಹೆಚ್ಚು ಜನ ಬಂದಿದ್ದರು ಎಂಬ ದಾಖಲೆ ಸಂಚಲನ ಸೃಷ್ಟಿಸಿತ್ತು. ಈ ನಡುವೆ ಅಪ್ಪು ಅವರು ಇಲ್ಲದೆ 2ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದು, ಪುನೀತ್ ಅವರ ನೆನಪಿನಲ್ಲಿ 'ಜಾಕಿ' ಸಿನಿಮಾ ರೀ ರಿಲೀಸ್ ಮಾಡಿ, ಬೆಳ್ಳಿಪರದೆಯ ಮೇಲೆ ಮತ್ತೊಮ್ಮೆ ಫ್ಯಾನ್ಸ್ ಎಂಜಾಯ್ ಮಾಡಿದ್ದಾರೆ. ಹಾಗೇ, ಪ್ರತಿವರ್ಷ ಒಂದೊಂದು ಸಿನಿಮಾ ರೀ ರಿಲೀಸ್ ಆಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಯುವ ಸಿನಿಮಾ ಮೇಲೆ ಭಾರಿ ನಿರೀಕ್ಷೆ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಇದೀಗ ಯುವ ಅವರನ್ನು ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಯುವರಾಜ್ ಅವರ ಮೊದಲ ಸಿನಿಮಾ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲೂ ದೊಡ್ಮನೆ ಮೊಮ್ಮಗನ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಲು ಸಜ್ಜಾಗಿದೆ. ಹೀಗಾಗಿ ಫ್ಯಾನ್ಸ್ ಕೂಡ ಅದ್ಧೂರಿ ಸಂಭ್ರಮಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಉತ್ತರವನ್ನು, ಸಿನಿಮಾ ನೋಡಿದ ಅಭಿಮಾನಿ ಬಳಗ ನೀಡಲಿದೆ. ಈಗಾಗಲೇ ಯುವ ಸಿನಿಮಾ ತನ್ನ ಟ್ರೇಲರ್ & ಹಾಡುಗಳ ಮೂಲಕವೇ ಸಖತ್ ಗಮನ ಸೆಳೆದಿದೆ.












Click it and Unblock the Notifications