ನಿಮ್ಮ ಮತ್ತು ಬೆಂಕಿ ತನಿಷಾ ನಡುವೆ ಪ್ರೀತಿ ಇದೆಯಾ..? ಪ್ರಶ್ನೆಗೆ ವರ್ತೂರ್ ಸಂತೋಷ್ ಉತ್ತರಿಸಿದ್ದು ಹೀಗೆ!
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಜನ್ 10 ಮುಗಿದು ಅನೇಕ ತಿಂಗಳು ಕಳೆದರೂ ಸಹ ಈ ಸೀಜನ್‌ನ ಸ್ಪರ್ಧಿಗಳು ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಪೈಕಿ ವರ್ತೂರ್ ಸಂತೋಷ್ ಹಾಗೂ ಬೆಂಕಿ ಖ್ಯಾತಿಯ ತನಿಷಾ ಕುಪ್ಪಂಡ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ.
ವರ್ತೂರ್ ಸಂತೋಷ್ ಹಾಗೂ ತನಿಷಾ ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವ ಗುಸು ಗುಸು ಮಾತುಗಳು ಆಗಾಗ ಕೇಳಿ ಬರುತ್ತಿರುತ್ತದೆ. ಹೀಗಾಗಿ ಬಗ್ಗೆ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಹಳ್ಳಿಕಾರ್ ವರ್ತೂರ್ ಸಂತೋಷ್ ನೇರವಾಗಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ನಿಮಗೂ ಬೆಂಕಿಗೂ ಲವ್ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ವರ್ತೂರ್ ಸಂತೋಷ್, ನಮ್ಮ ನಡುವೆ ಒಳ್ಳೆ ಗೆಳೆತನ ಇದೆ. ನನಗೆ ಬೆಂಕಿ ಒಳ್ಳೆ ಫ್ರೆಂಡ್. ಹೇಗೆ ಅಂದರೆ ಅವರ ಶೋ ಮುಗಿದಿದ್ದರೂ ನಾನು ಬರುವವರೆಗೂ ಕಾದಿದ್ದರು. ಅದರಲ್ಲೇ ಗೊತ್ತಾಗುತ್ತದೆ ಅವರು ನನಗೆ ಕೊಡುವ ಗೌರವ. ಹಾಗೂ ನಾನು ಅವರಿಗೆ ಕೊಡುವ ಗೌರವ ಗೊತ್ತಾಗುತ್ತದೆ ಎಂದರು.
ನಮ್ಮ ಇಬ್ಬರ ನಡುವೆ ಒಂದು ಒಳ್ಳೆ ಗೆಳೆತನ ಇದೆ. 100% ಒಳ್ಳೆ ಫ್ರೆಂಡ್‌ಶಿಪ್ ಇದೆ. ಒಳಗಡೆನೂ ಇತ್ತು. ಹೊರಗಡೆ ಬಂದ ಮೇಲೂ ಇದೆ. ಒಳಗಡೆ ನಾನು ಬೆಂಕಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಡಿದ್ದೇವೆ. ಆದರೆ ಯಾವುದೂ ಮೇಜರ್ ಆಗಿ ಏನು ಆಗುತ್ತಿರಲಿಲ್ಲ. ಹೊರಗಡೆನೂ ಅಷ್ಟೇ, ಎಷ್ಟೋ ಕಾರ್ಯಕ್ರಮಗಳಿಗೆ ನಾನೇ ಬೆಂಕಿಯನ್ನು ಕರೆಸಿದ್ದೇನೆ. ಅವರು ಕೂಡ ಖುಷಿಯಲ್ಲಿ ಬರುತ್ತಾರೆ. ತುಂಬಾ ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗುತ್ತೇವೆ ಎಂದರು.

ಕಾರ್ಯಕ್ರಮಗಳಿಗೆ ನಮ್ಮ ಜೊತೆ ನೀತು ಕೂಡ ಬರುತ್ತಾರೆ. ಹೀಗಾಗಿ ನಮ್ಮ ಮಧ್ಯೆ ಒಳ್ಳೆ ಗೆಳೆತನ ಇದೆ ಎಂದು ನಿಮಗೂ ಬೆಂಕಿಗೂ ಲವ್ ಇದೆಯಾ ಎನ್ನುವ ಪ್ರಶ್ನೆಗೆ ವರ್ತೂರ್ ಸಂತೋಷ್ ಸ್ಪಷ್ಟವಾಗಿ ಉತ್ತರಿಸಿದರು.
ಇನ್ನು ವರ್ತೂರ್ ಸಂತೋಷ್ ತಾಯಿ ಕೂಡ ಮಾತನಾಡಿದ್ದು, ಅವನು ಯಾರನ್ನೂ ಇಷ್ಟ ಪಟ್ಟು ಮದುವೆಯಾದರೂ ನನಗೆ ಖುಷಿ. ಅವನ ಇಷ್ಟನೇ ನನ್ನ ಇಷ್ಟ ಎಂದಿದ್ದಾರೆ. ಈ ವೇಳೆ ಮಾತನಾಡಿದ ವರ್ತೂರ್ ಸಂತೋಷ್, ಒಂದು ಹೇಳುತ್ತೇನೆ. ಪೆಟ್ಟು ತಿಂದಿರುವ ಹಾವು ಮೊದಲಿನಿಂದ ನೇರವಾಗಿ ಹೋಗುವುದಿಲ್ಲ. ಬದಲಿಗೆ ತಲೆ ಎತ್ತಿ ನೋಡಿಕೊಂಡು ಹೋಗುತ್ತದೆ. ಯಾಕೆಂದರೆ ಅದು ಆಗಲೇ ಒಂದು ಬಾರಿ ಪೆಟ್ಟು ತಿಂದಿರುತ್ತದೆ. ಹೀಗಾಗಿ ಮುಂದೆ ನೋಡಿಕೊಂಡು ಹೋಗುತ್ತದೆ ಎಂದು ತಮ್ಮ ಜೀವನದಲ್ಲಿಯೂ ಹಾಗೇ ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ ಎಂದು ಪರೋಕ್ಷವಾಗಿ ಹೇಳಿದರು.












Click it and Unblock the Notifications