Niveditha Gowda 2nd Marriage: 2ನೇ ಮದುವೆ ಬಗ್ಗೆ ನಿವೇದಿತಾ ಗೌಡ ಫಸ್ಟ್ ರಿಯಾಕ್ಷನ್: ಮದುವೆ ಯಾವಾಗ ಗೊತ್ತಾ?
ನಾನು ಈಗ ಸಿನಿಮಾ ಕಡೆಗೆ ಮಾತ್ರ ನನ್ನ ಗಮನ ಹರಿಸುತ್ತೇನೆ. ಚಂದನ್ ಶೆಟ್ಟಿ ಜೊತೆ ಸಂಪರ್ಕ ಇಲ್ಲ. ಯಾವುದು ಮಾತುಕತೆಗಳು ಕೂಡ ಇಲ್ಲ, ನನ್ನ ಮಾಜಿ ಗಂಡನಿಂದ ನಾನು ಯಾವುದೇ ಖರ್ಚು ಮಾಡಿಲ್ಲ ಎಂದು ನಿವೇದಿತಾ ಗೌಡ ಅವರು ಹೇಳಿದರು. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪ್ರೀತಿಸಿ ಮದುವೆಯಾದವರು. ಆದರೆ, ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕಾಲ ಕಳೆದಂತೆ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಸದ್ಯ ಚಂದನ್ ಶೆಟ್ಟಿ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರೆ, ನಿವೇದಿತಾ ಗೌಡ ಅವರು ರೀಲ್ಸ್ ಮಾಡುತ್ತಾ ಬಿಂದಾಸ್ ಆಗಿದ್ದಾರೆ. ಇತ್ತ ಚಂದನ್ ಶೆಟ್ಟಿ ಅವರು ಎರಡನೇ ಮದುವೆಗೆ ರೆಡಿಯಾಗಿದ್ರೆ, ಇತ್ತ ನಿವೇದಿತಾ ಗೌಡ ಅವರು ಸಹ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್ನೂ ವೇದಿತಾ ಗೌಡ ಅವರು ಈಚೆಗೆ 'ಐ ಆಮ್ ಗಾಡ್' ಸಿನಿಮಾದ ಸಾಂಗ್‌ವೊಂದರಲ್ಲಿ ದಿಗಂತ್ ಜೊತೆ ಹೆಜ್ಜೆ ಹಾಕಿದ್ದಾರೆ. ಸದ್ಯ ಆ ಹಾಡು ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ನಡುವೆ ನಿವೇದಿತಾ ಗೌಡ ಅವರು ಎರಡನೇ ಮದುವೆ, ವಿಚ್ಛೇದನ ಹಾಗೂ ಕೆಟ್ಟ ಕಾಮೆಂಟ್‌ಗಳ ಕುರಿತು ಮುಕ್ತವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.

ನಿವೇದಿತಾ ಗೌಡ ಅವರು ತಮ್ಮ ಎರಡನೇ ಮದುವೆ ಮತ್ತು ವಿಚ್ಛೇದನದ ಕುರಿತ ವದಂತಿಗಳಿಗೆ ಉತ್ತರ ನೀಡಿದ್ದಾರೆ. 'ವೈವಾಹಿಕ ಜೀವನದ ಬಗ್ಗೆ ಭಯವಿದ್ದರೂ, ಉತ್ತಮ ವ್ಯಕ್ತಿ ಸಿಕ್ಕರೆ ಕುಟುಂಬ ಆರಂಭಿಸುವ ಬಯಕೆ ಇದೆ' ಎಂದು ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಅವರು ಹೇಳಿದ್ದಾರೆ. ಇನ್ನೂ ವಿಚ್ಛೇದನದ ಬಗ್ಗೆ ಯಾವುದೇ ವಿಷಾದವಿಲ್ಲವಂತೆ ಮಾತನಾಡಿದ್ದಾರೆ.
ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ಮದುವೆ ಟಾಪಿಕ್ ಬಂದ್ರೆ ನನಗೆ ಸದ್ಯಕ್ಕೆ ಭಯ ಇದೆ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ನಿವೇದಿತಾ ಗೌಡ ಅವರು ಹೇಳಿದ್ದಾರೆ. ಯಾರಾದರೂ ನನ್ನನ್ನು ಇಷ್ಟಪಟ್ಟು, ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಬಂದರೆ, ನನಗೂ ನನ್ನ ಕುಟುಂಬವನ್ನು ಮಾಡಿಕೊಳ್ಳುವ ಬಯಕೆ ಇದೆ. ಆ ಹುಡುಗ ತುಂಬಾ ಚೆನ್ನಾಗಿರಬೇಕು, ಗೌರವಯುತವಾಗಿರಬೇಕು, ಒಳ್ಳೆಯವರಾಗಿರಬೇಕು, ನನ್ನನ್ನು ತುಂಬಾ ಇಷ್ಟಪಡಬೇಕು, ಪ್ರೀತಿ ಮಾಡಬೇಕು. ಸದ್ಯಕ್ಕಂತೂ ಎರಡನೇ ಮದುವೆ ಬಗ್ಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೋ ತಿಳಿದಿಲ್ಲ ಎಂದು ನಿವೇದಿತಾ ಗೌಡ ತಿಳಿಸಿದ್ದಾರೆ. ನಾನು ಈಗ ಸಿನಿಮಾ ಕಡೆಗೆ ಮಾತ್ರ ನನ್ನ ಗಮನ ಹರಿಸುತ್ತೇನೆ. ಚಂದನ್ ಶೆಟ್ಟಿ ಜೊತೆ ಸಂಪರ್ಕ ಇಲ್ಲ. ಯಾವುದು ಮಾತುಕತೆಗಳು ಕೂಡ ಇಲ್ಲ, ನನ್ನ ಮಾಜಿ ಗಂಡನಿಂದ ನಾನು ಯಾವುದೇ ಖರ್ಚು ಮಾಡಿಲ್ಲ ಎಂದು ನಿವೇದಿತಾ ಗೌಡ ಅವರು ಹೇಳಿದರು.












Click it and Unblock the Notifications