Darshan Thoogudeepa: ನಟ ದರ್ಶನ್ ಮೇಲೆ ನನ್ನ ಋಣ ಇದೆ: ಲಾಯರ್ ಜಗದೀಶ್ ಹೀಗೆ ಹೇಳಿದ್ಯಾಕೆ.?
Lawyer Jagadesh: ಅವಾಚ್ಯ ಪದ ಬಳಕೆ ಹಿನ್ನೆಲೆ ಲಾಯರ್ ಕೆ.ಎನ್.ಜಗದೀಶ್ ಕುಮಾರ್ ಅವರನ್ನು ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಹೊರಹಕಾಲಾಯಿತು. ಬಳಿಕ ಹೊರಬಂದ ಅವರಿಗೆ ಅಭಿಮಾನಿ ಬಳಗ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಅರು ಕೂಡ ಈ ಅಭಿಮಾನದ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಲೇ ಇದ್ದಾರೆ. ಇದೀಗ ನಟ ದರ್ಶನ್ ಹಾಗೂ ಅಭಿಮಾನಿಗಳ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
ಮೊದಲಿನಿಂದಲೂ ಕಾಟ್ರೋವರ್ಸಿಯಾಗಿ ಕಾಣಿಸಿಕೊಂಡಿದ್ದ ಜಗದೀಶ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದಾಗಿನಿಂದ ಕ್ಷಷ್ ಆಫ್ ಕರ್ನಾಟಕ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬಳಿಕ ಅವರ ಅಭಿಮಾನಿಗಳ ಬಳಗ ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಅವರು ಕೂಡ ಇದೀಗ ಸುದ್ದಿ ವಾಹಿನಿಗಳಲ್ಲಿ ಸಂದರ್ಶನ ಕೊಡುವ ಮೂಲಕ ಅಭಿಮಾನಿಗಳ ಅಭಿಮಾನವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಲಾಯರ್ ಜಗದೀಶ್ ಅಂದರೆ ಮೊದಲಿಗೆ ಬರೀ ಮಾಧ್ಯಮದವರಿಗೆ, ಸಮಾಜಿಕ ಜಾಲತಾಣ ಬಳಕೆ ಮಾಡುವವರಿಗೆ ಮಾತ್ರ ಪರಿಚಯ ಇತ್ತು. ಆದರೆ, ಬಿಗ್ ಬಾಸ್‌ಗೆ ಹೋಗಿಬಂದಾಗಿನಿಂದ ಅವರು ಇಡೀ ಕರ್ನಾಕದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇದೀಗ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ಋಣದ ಬಗ್ಗೆ ಮಾತನಾಡಿದ್ದಾರೆ.
ಇದೀಗ ಮಾಧ್ಯಮವೊಂದರ ಸಂದರ್ಶನದ ವೇಳೆ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. "ನಾನು ಬಿಗ್‌ಬಾಸ್‌ಗೆ ಮೂರು ವರ್ಷಗಳ ಹಿಂದೆ ಆಯ್ಕೆ ಆಗಿದ್ದೆ. ಆಗ ಪರಮ್ ಅಂತಾ ಡೈರೆಕ್ಟರ್ ಇದ್ದರು. ಅವರು ನಾನು ಹೋಗಿಲ್ಲದಿದ್ದಕ್ಕೆ ಉಗಿದು ಹೋಗಿದ್ದರು. ಲಾಸ್ಟ್ ಮೂಮೆಂಟ್ ಒಂದು ದಿನ ಮುಂಚೆಯೇ ನಾನು ಬರಲ್ಲ ಅಂದುಬಿಟ್ಟೆ, ಆಗ ಅವರಿಗೆ ಕೋಪ ಬಂದಿತ್ತು," ಎಂದು ಹೇಳಿದರು.
ಇನ್ನು ನಟ ದರ್ಶನ್ ಬಗ್ಗೆ ಕೇಳಿದಾಗ "ದರ್ಶನ್‌ನಿಂದ ನನಗೇನು ಆಗಬೇಕಾಗಿಲ್ಲ. ದರ್ಶನ್‌ನನ್ನ ನಾನು ಪ್ರೊಟೆಕ್ಟ್ ಮಾಡಿದ್ದೇನೆ. ಎಲ್ಲಾ ಚಾರ್ಜ್‌ಶೀಟ್ ಹಾಕಿ ಮೂಲೆಗುಂಪು ಮಾಡಿದ್ರು ಎಂದರು. ಅಲ್ಲದೆ, ದರ್ಶನ್ ಮೇಲೆ ನಮ್ಮ ಋಣ ಇದೆಯೇ ಹೊರತು, ನಮ್ಮ ಮೇಲೆ ಅವರ ಋಣ ಇಲ್ಲ," ಎಂದು ಹೇಳಿದರು.
ನಟ ದರ್ಶನ್ ಅಭಿಮಾನಿಗಳಿಂದ ನಮಗೇನು ಆಗಬೇಕಾಗಿಲ್ಲ. ನಾನು ನನ್ನನ್ನ ನಂಬಿ ಬದುಕಿರುವವನು, ನನ್ನ ಪ್ರಾಮಾಣಿಕತೆ ನಂಬಿ ಬದುಕಿದವನು. ಆದ್ದರಿಂದ ಯಾವನಿಗೂ ಕೇರ್ ಮಾಡುವುದಿಲ್ಲ. ನನಗೆ ಫ್ಯಾನ್ಸ್ ಇದ್ದಾರೆ ಅಂತಾ ನಾನು ಹಿಗ್ಗಲ್ಲ, ಕುಗ್ಗಲ್ಲ, ಜಗ್ಗೋದು ಇಲ್ಲ. ಅಭಿಮಾನಿಗಳು ಬಂದು ಕೇಳಿದರೆ ಅವರಿಗೆ ಫೋಟೋ ಕೊಡುತ್ತೇನೆ. ಆದರೆ, ಪ್ಯಾನ್‌ಬೇಸ್ ಕ್ರಿಯೇಟ್ ಮಾಡೋದಿಕ್ಕೆ ಹೋಗುವುದಿಲ್ಲ," ಎಂದು ಹೇಳಿದರು.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಾಲಂ ಗ್ಯಾಂಗ್ ಜೈಲು ಸೇರಿದ್ದಾರೆ. ಇನ್ನು ದರ್ಶನ್‌ನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆದರೆ, ಇದ್ಯಾವುದು ಕೂಡ ಫಲಿಸುತ್ತಿಲ್ಲ. ಇನ್ನೂ ನಾಳೆ ಅಂದರೆ ಅಕ್ಟೋಬರ್ 28ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹಾಗಾದರೆ ಜಾಮೀನು ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.











Click it and Unblock the Notifications