Bigg Boss: ಎಲ್ಲರನ್ನು ಬೈಯುತ್ತಿರುವ ರಜತ್‌ಗೆ ಟಾಂಗ್ ಕೊಡಲು ಹುಚ್ಚ ವೆಂಕಟ್‌ ಎಂಟ್ರಿ- ಮುಂದೆ ಕಾದಿದೆ ಸೈಕ್ ಗೇಮ್‌!

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ವೈಲ್ಡ್‌ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಅವರು ಬಳಕೆ ಮಾಡುವ ಕೆಟ್ಟ ಶಬ್ದಗಳಿಗೆ ಬಿಗ್‌ಬಾಸ್‌ ಸ್ಪರ್ಧಿಗಳು ಧಂಗಾಗಿ ಹೋಗಿದ್ದಾರೆ. ಗೋಲ್ಡ್‌ ಸುರೇಶ್, ಮಂಜು ಹಾಗೂ ಶೋಭಾ ಇವರೊಂದಿಗೆ ಕಿರಿಕ್ ಮಾಡಿಕೊಂಡ ರಜತ್ ನಾಲಿಗೆ ಹರಿಬಿಟ್ಟು ಮಾತನಾಡಿದ್ದಾರೆ. ಲಗ್ಗೂ ಲಗಾಮ್ ಇಲ್ಲದ ರಜತ್ ಮಾತಿಗೆ ಟಾಂಗ್‌ ಕೊಡಲು ಹುಚ್ಚ ವೆಂಕಟ್ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ.

'ನನ್ ಮಗನ್..!' ಅಂದರೆ ಸಾಕು ಹುಚ್ಚ ವೆಂಕಟ್ ನೆನಪಾಗದವರೇ ಇಲ್ಲ. ಇದೊಂದು ಕಾಮನ್ ಡೈಲಗ್‌ಯಿಂದ ಹುಚ್ಚಾ ವೆಂಕಟ್ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ವೈರಲ್ ಆಗಿದ್ದರು. ಅವರ ಮಾತು, ಜಗಳ ಇವೆಲ್ಲವನ್ನು ಇಂದಿಗೂ ಕೂಡ ಯಾರೂ ಮರೆಯಲು ಸಾಧ್ಯವೇ ಇಲ್ಲ. ಬಿಗ್‌ಬಾಸ್‌ ಸ್ಪರ್ಧಿ ಮೇಲೆ ಕೈ ಮಾಡಿ ಭಾರೀ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಅವರ ಮಾತಿಗೆ ಬಾಯಿ ಕೊಡುವುದು ಅಂದರೆ ಸುಲಭದ ಮಾತಲ್ಲ. ಹುಚ್ಚ ವೆಂಕಟ್ ಇದ್ದಾರೆ ಅಂದರೆ ಸ್ಪರ್ಧಿಗಳು ಗಪ್‌ಚಿಪ್ ಆಗಿ ಬಿಡ್ತಾಯಿದ್ರು. ಹೀಗಾಗಿ ಇದೀಗ ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಆಗಿ ಬಂದ ರಜತ್‌ಗೆ ಹುಚ್ಚಾ ವೆಂಕಟ್ ಸರಿ ಎನ್ನುತ್ತಿದ್ದಾರೆ ಪ್ರೇಕ್ಷಕರು.

huccha venkat entry into bigg boss house rajat vs huccha venkat - real game begun

ರಜತ್‌ ರಂಪಾಟ

ರಜತ್ ತುಂಬಾ ಕೆಟ್ಟ ಶಬ್ದಗಳಿಂದ ಇತರ ಸ್ಪರ್ಧಿಗಳೊಂದಿಗೆ ಜಗಳವಾಡುತ್ತಿದ್ದಾರೆ. ಮಾತುಗಳನ್ನ ಕೇಳಿಸಿಕೊಳ್ಳಲಾಗದಷ್ಟು ಕೆಟ್ಟದಾಗಿ ಬೈದಾಡುತ್ತಿದ್ದಾರೆ. ಗೋಲ್ಡ್‌ ಸುರೇಶ್ ಅವರಿಗೆ ಟಾಸ್ಕ್‌ವೊಂದರಲ್ಲಿ ಜಗಳ ಬಂದಾಗ ತುಂಬಾ ಕೆಟ್ಟದಾಗಿ ಮಾತನಾಡಿದ್ದರು ರಜತ್. ರಜತ್‌ ಅವರ ಅವಾಚ್ಯ ಶಬ್ದಗಳಿಗೆ ಮನೆ ಮಂದಿಯಲ್ಲೆ ಬೇಸತ್ತು ಹೋಗಿದ್ದಾರೆ.

ರಜತ್‌ ಅವರ ಅತಿಯಾದ ವರ್ತನೆ ಮನೆ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಟಾಸ್ಕ್‌ ಆಡುವ ವಿಚಾರದಲ್ಲಿ ಸುರೇಶ್ ಜೊತೆಗೆ ವಾಗ್ವಾದಕ್ಕಿಳಿದ ರಜತ್ ಗುಗ್ಗು, ಸೆಡೆ ಎಂಬ ಪದ ಬಳಕೆ ಮಾಡಿದ್ದಾರೆ. ಎಲ್ಲಾ ಸೆಡೆಗಳನ್ನು ಕಳ್ಸಿಯೇ ನಾನು ಬಿಗ್‌ಬಾಸ್‌ ಮನೆಯಿಂದ ಹೊರಹೋಗುತ್ತೇನೆ. ಹುಟ್ಟಿದಾಗಿನಿಂದ ಹೀಗೆಯೇ ಇರೋದು. ಮುಂದೆಯೂ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತನಾಡುತ್ತೇನೆ ಅಂತ ರಜತ್ ಹೇಳಿದ್ದಾರೆ. ಈ ಪದಗಳನ್ನು ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಬಿಗ್‌ಬಾಸ್‌ ಮನೆಯಲ್ಲಿ ಗೋಲ್ಡ್‌ ಸುರೇಶ್ ಜೊತೆಗೆ ಅಲ್ಲದೆ ಮಂಜು ಅವರೊಂದಿಗೂ ರಜತ್ ಜಗಳ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮೊಂದಿಗೆ ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿ ಬಂದ ಶೋಭಾ ಶೆಟ್ಟಿ ಮೇಲೂ ರಜತ್ ಕೋಪ ಮಾಡಿಕೊಂಡಿದ್ದಾರೆ. ಹೀಗೆ ದೊಡ್ಮನೆಯಲ್ಲಿ ಕೇಳಬಾರದ ಶಬ್ದಗಳು ಕೇಳಿ ಬರುತ್ತಿವೆ. ರಜತ್‌ ಅವರು ದೊಡ್ಮನೆಯಲ್ಲಿ ಬೀಪ್... ಬೀಪ್.... ಬೀಪ್‌... ಪದ ಬಳಿಸಿದ್ದಾರೆ. ಹೀಗಾಗಿ ಮನೆ ಮಂದಿಯಲ್ಲಾ ಅವರಿಗೆ ಕಳಪೆ ನೀಡಲು ತೀರ್ಮಾನಿಸಿ ಅವರಿಗೆ ಕಳಪೆ ಎಂಬ ಪಟ್ಟ ಕಟ್ಟಿದ್ದಾರೆ.

ರಜತ್‌ಗೆ ಹುಚ್ಚಾ ವೆಂಕಟ್ಟೇ ಸರಿ

ಹೀಗಾಗಿ ಬಿಗ್‌ಬಾಸ್‌ ಪ್ರೇಕ್ಷಕರಲ್ಲಿ ಮತ್ತಷ್ಟು ಕೂತೂಹಲವನ್ನು ಹೆಚ್ಚಿಸಿದೆ. ಮಾತ್ರವಲ್ಲದೆ ಬಿಗ್‌ಬಾಸ್‌ ನೋಡುವ ಪ್ರೇಕ್ಷಕರೂ ಕೂಡ ರಜತ್ ಬಾಯಿ ಮುಚ್ಚಿಸಲು ಹುಚ್ಚ ವೆಂಟಕ್‌ ಅವರೇ ಬರಬೇಕು. ಇವರ ಮಾತಿಗೆ ಬ್ರೇಕ್ ಬಿಳಬೇಕು ಅಂದರೆ ಹುಚ್ಚ ವೆಂಕಟ್ ಅವರೇ ಸರಿ ಎಂದು ಹೇಳುತ್ತಿದ್ದಾರೆ.

ಬಿಗ್‌ಬಾಸ್‌ 3 ಸೀಸನ್‌ನಲ್ಲಿ ದೊಡ್ಮನೆಯನ್ನು ಮೂರಾಬಟ್ಟೆ ಮಾಡಿದ್ದ ಹುಚ್ಚಾ ವೆಂಕಟ್ ನಂತರದ ಸೀಸನ್‌ಗಳಲ್ಲೂ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿದ್ದರು. ಆಗಲೂ ಹುಚ್ಚ ವೆಂಕಟ್ ಒಳ್ಳೆ ಹುಡುಗ ಪ್ರಥಮ್ ಮೇಲೆ ಕೈ ಮಾಡಿದ್ದರು. ಇದರಿಂದಾಗಿ ಹುಚ್ಚ ವೆಂಕಟ್ ಅವರನ್ನು ಸಹಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇದೀಗ ರಜತ್ ಆಡುವ ರೀತಿಗೆ ನೆಟ್ಟಿಗರು ಹುಚ್ಚ ವೆಂಕಟ್‌ ಅವರನ್ನು ಕರೆಸಿ ಬಿಗ್‌ಬಾಸ್‌ ಮನೆ ನೆಟ್ಟಗಾಗುತ್ತದೆ ಅಂತಿದ್ದಾರೆ.

ಪ್ರೇಕ್ಷಕರ ಆಸೆಯಂತೆ ಒಂದು ವೇಳೆ ಹುಚ್ಚ ವೆಂಕಟ್ ಬಿಗ್‌ಬಾಸ್ ಮನೆಗೆ ಬಂದಿದ್ದೇ ಆದರೆ ರಜತ್ ಎಗರಾಟ ಸಂಪೂರ್ಣವಾಗಿ ಬಂದ್ ಆಗಲಿದೆ. ಅಷ್ಟೇ ಅಲ್ಲ ಎಲ್ಲಾ ನಾಟಕಗಳಿಗೂ ತೆರೆ ಬೀಳುವುದಂತೂ ಗ್ಯಾರಂಟಿ.

ರಜತ್‌ಗೆ ಪಾಠ ಕಲಿಸಿದ ಸ್ಪರ್ಧಿಗಳು

ಬಿಗ್‌ಬಾಸ್‌ ಸ್ಪರ್ಧಿಗಳ ಮಾತಿಗೆ ಲಗಾಮ್ ಹಾಕಲು, ಮಂಕಾದ ಸ್ಪರ್ಧಿಗಳಿಗೆ ಎಚ್ಚರಿಸಲು, ತಮ್ಮ ಪಾಡಿಗೆ ತಾವಿರುವ ಸ್ಪರ್ಧಿಗಳಿಗೆ ಎಚ್ಚರಿಸಲು ಶನಿವಾರ ಹಾಗೂ ಭಾನುವಾರ ಸುದೀಪ್ ಬರಲಿದ್ದಾರೆ. ಈ ವಾರದ ಕಥೆ ಕಿಚ್ಚನ ಜೊತೆಗೆ ಭರ್ಜರಿಯಾಗಿ ನಡೆಯಲಿದೆ. ಆದರೆ ಅದಾಗಲೇ ರಜತ್ ಮಾತಿಗೆ ಬೀಗ ಹಾಕಿದ್ದಾರೆ ಇತರ ಸ್ಪರ್ಧಿಗಳು. ರಜತ್‌ ಅವಾಚ್ಯ ಶಬ್ದಗಳಿಗೆ ಕಡಿವಾಣ ಹಾಕಲು ಸ್ಪರ್ಧಿಗಳು ಕಳಪೆ ಪಟ್ಟ ಕಟ್ಟಿ ಬಿಗ್‌ಬಾಸ್‌ ಮನೆ ಜೈಲಿಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ರಜತ್ ಅಸಲಿ ಆಟ ಇನ್ಮುಂದೆ ಶುರುವಾಗಲಿದೆ ಎನ್ನುವ ಸವಾಲು ಹಾಕಿದ್ದಾರೆ.

ಹೀಗಾಗಿ ರಜತ್ ಮುಂದಿನ ಆಟ ಹೇಗಿರಲಿದೆ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಅದಕ್ಕೂ ಮುನ್ನ ರಜತ್‌ ಆಟದ ಬಗ್ಗೆ ಸುದೀಪ್ ಏನು ಹೇಳ್ತಾರೆ? ರಜತ್ ಅವಾಚ್ಯ ಪದ ಬಳಕೆಗೆ ಸುದೀಪ್ ಹೇಗೆ ಕಡಿವಾಣ ಹಾಕ್ತಾರೆ ಅನ್ನೋ ಕುತೂಹಲವೂ ಇದೆ. ಇಂದಿನ ಸಂಚಿಕೆಯಲ್ಲಿ ಕಿಚ್ಚನ ಜೊತೆ ವಾರದ ಕತೆ ನಡೆಯಲಿದ್ದು ಎಲ್ಲದಕ್ಕೂ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+