Darshan Case: ನಟ ದರ್ಶನ್‌ ಪ್ರಕರಣದಲ್ಲಿ ಇಲ್ಲಿವರೆಗೂ ಪೊಲೀಸ್‌ ತನಿಖೆಗೆ ಖರ್ಚಾದ ಹಣ ಎಷ್ಟು ಗೊತ್ತಾ.?

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್‌ ಜೈಲು ಸೇರಿದೆ. ಇನ್ನು ಯಾವುದೇ ಒತ್ತಡಗಳಿಗೆ ಒಳಗಾಗದೇ ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಹಾಗಾದರೆ ಇದಕ್ಕೆಲ್ಲ ಖರ್ಚಾದ ಒಟ್ಟು ಹಣ ಎಷ್ಟಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿ ಮಹತ್ವದ ಸಾಖ್ಷ್ಯಗಳನ್ನು ಕಲೆಹಾಕಿದ್ದು, ಶೀಘ್ರವೇ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಿದ್ದಾರೆ. ಅದರಲ್ಲೂ ರಸ್ತಸಿಕ್ತವಾಗಿ ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಳ್ಳುತ್ತಿರುವ ಫೋಟೋಗಳು ಪೊಲೀಸರ ಕೈಸೇರಿದ್ದು, ನಟ ದರ್ಶನ್‌ಗೆ ಎ2 ನಿಂದ ಎ1 ಆರೋಪಿಯಾಗಿ ಬಡ್ತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೊದು ಲಭ್ಯವಾಗಿದೆ.

How much money spent for police investigation in actor Darshan s case

ಜಾಮೀನಿಗೆ ಯಾವಾಗ ಅರ್ಜಿ ಸಲ್ಲಿಸಬಹುದಾಗಿದೆ?: ಈಗಾಗಲೇ ಪೊಲೀಸರು ಸಂಗ್ರಹಿಸಿರುವ ಸಾಕ್ಷಿಗಳನ್ನು ಗಮನಿಸುವುದಾದರೆ, ದರ್ಶನ್‌ ಹೊರಗಡೆ ಬರುವುದೇ ಡೌಟ್‌ ಎನ್ನಲಾಗುತ್ತಿದೆ. ಇನ್ನು ಚಾರ್ಜ್‌ಶೀಟ್‌ ಸಲ್ಲಿಕೆಯಾಗುವವರೆಗೂ ನಟ ದರ್ಶನ್‌ಗೆ ​ಜೈಲೇ ಗತಿಯಾಗಲಿದ್ದು, ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದರ ನಡುವೆ ದರ್ಶನ್ ಅವರನ್ನು ಎ2 ಆರೋಪಿ ಸ್ಥಾನದಿಂದ ಎ1 ಆರೋಪಿಯನ್ನಾಗಿ ಮಾಡಲು ಪೊಲೀಸರು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಇಲ್ಲಿಯವರೆಗೆ ಪ್ರಕರಣದ ತನಿಖೆಗೆ ಎಷ್ಟು ಹಣ ಖರ್ಚಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ತನಿಖೆಗೆ ಈವರೆಗೆ 2,50,000 ರೂಪಾಯಿ ಖರ್ಚಾಗಿದೆ. ಈ ಹಣವನ್ನು ಸರ್ಕಾರ ಪೊಲೀಸರಿಗೆ ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಸರ್ಕಾರ ಬಿಲ್‌ಗಳನ್ನು ಕ್ಲಿಯರ್ ಮಾಡುತ್ತಾ ಬಂದಿದೆ ಎಂದು ತಿಳಿದುಬಂದಿದೆ.

ತನಿಖೆಗೆ ಹಣ ಯಾರು ಕೊಡಬೇಕು?: ಒಂದು ಹೈ ಪ್ರಫೈಲ್‌ ಕೇಸ್‌ ಅಂದಮೇಲೆ ಅದನ್ನು ತನಿಕೆ ನಡೆಸಲು ಸುಮಾರು ಹಣ ಖರ್ಚಾಗುತ್ತದೆ. ಈ ಹಣವನ್ನು ಸರ್ಕಾರವೇ ಬರಿಸಬೇಕಾಗುತ್ತದೆ. ಆದರೆ ದರ್ಶನ್‌ ಪ್ರಕರಣದ ತನಿಖೆಗೆ ಹಣ ನೀಡಲು ಸರ್ಕಾರ ಮೊದಲಿಗೆ ಕೈಚೆಲ್ಲಿ ಕುಳಿತ್ತಿದ್ದು, ಬಳಿಕ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಹಣ ನೀಡುತ್ತಾ ಬಂದಿದೆ ಎನ್ನಲಾಗಿದೆ.

ಇಂತಹ ತನಿಖೆಯನ್ನು ಪೊಲೀಸರು ನಿದ್ದೆಗೆಟ್ಟು ಮಾಡುವುದರಿಂದ ಅವರಿಗೆ ಈ ವೇಳೆ ಅವರಿಗೆ ಊಟ, ತಿಂಡಿ, ಟ್ರಾವೆಲಿಂಗ್‌ ಚಾರ್ಚ್ ಸೇರಿದಂತೆ ಮತ್ತಿತರ ವ್ಯವಸ್ಥೆಗಳಿಗೆ ತುಂಬಾ ಹಣ ಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+