Bhavya Gowda: ಭವ್ಯಾ ಬಚಾವ್‌: ಬಿಗ್‌ ಬಾಸ್‌ ಮೇಲೆ ಕಿಚ್ಚ ಸುದೀಪ್‌ಗೂ ಡೌಟ್!

ಬಿಗ್ ಬಾಸ್ ಕನ್ನಡ ಸೀಸನ್‌ 11 ಅಂತಿಮ ಹಂತದತ್ತ ಸಾಗುತ್ತಿದೆ. ಕಳೆದ ವಾರ ಟಿಕೆಟ್‌ ಟು ಫಿನಾಲೆಗಾಗಿ ಮನೆಯಲ್ಲಿ ಹೋರಾಟ ಜೋರಾಗಿತ್ತು. ಈ ವೇಳೆ ಟಾಸ್ಕ್‌ವೊಂದರಲ್ಲಿ ಹನುಮಂತನ ಮೇಲೆ ಭವ್ಯಾ ಗೌಡ ಕೈ ಮಾಡಿದ್ದರು. ಈ ಬಗ್ಗೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಮಾತನಾಡಿದ್ದು, ಹನುಮಂತನಿಗೆ ಭವ್ಯ ಗೌಡ ಹೊಡೆದಿರುವ ವಿಡಿಯೋ ತೋರಿಸಿದ್ದಾರೆ. ಇದರ ಜೊತೆಗೆ ಸುದೀಪ್‌ ಕೆಲವು ಮಾತುಗಳನ್ನು ಆಡಿದ್ದು, ಪರೋಕ್ಷವಾಗಿ ಬಿಗ್‌ ಬಾಸ್‌ ತಂಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬಳಿಕ ಭವ್ಯಗೆ ಕೆಲವು ಎಚ್ಚರಿಕೆಗಳನ್ನು ನೀಡಿರುವ ಕಿಚ್ಚ ಸುದೀಪ್‌, 'ನಿಮಗೆ ಗೊತ್ತಾ ಇಷ್ಟಕ್ಕೆ ಮನೆಗೆ ಕಳುಹಿಸುತ್ತಾರೆ. ಹೊಡೆದ ಮೇಲೆ ಪಶ್ಚಾತ್ತಾಪ ಪಟ್ಟರೆಷ್ಟು? ಬಿಟ್ಟರೆಷ್ಟು? ನನಗೆ ಇಲ್ಲಿ ಒಂದು ಮಿಸ್ ಆಗಿರುವುದು ಏನು ಅಂದರೆ ಸಾಮಾನ್ಯವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಈ ರೀತಿ ಮಾಡಿದಾಗ ವ್ಯಕ್ತಿಗಳನ್ನು ಹೊರಗಡೆ ಕಳುಹಿಸುತ್ತಾರೆ. ಆದರೆ ಎಲ್ಲೋ ಒಂದು ಕಡೆ ಈಗ ತಾವು ಹೊರಗಡೆ ಹೋಗುವುದು ಮಿಸ್‌ ಆಯ್ತು ಅನಿಸುತ್ತಿದೆ'.

Host Kiccha Sudeep Expressed Doubt On Bigg Boss Kannada Team

'ಟಾಸ್ಕ್‌ ಸಮಯದಲ್ಲಿ ಬಂದಿರುವ ಒಂದೇ ಒಂದು ಚಿಕ್ಕದಾದ ಗ್ರೇ ಏರಿಯಾ. ನಿಮಗೆ ಹೊಡೆಯುವ ಉದ್ದೇಶ ಇಲ್ಲದೇ ಇರಬಹುದು, ಆದರೆ ಬಲವಾಗಿ ಹೊಡೆದದ್ದು ಹೌದು. ಟಾಸ್ಕ್‌ ಮಧ್ಯೆದಲ್ಲಿ ಆಗಿರುವುದರಿಂದ ಬಿಗ್‌ ಬಾಸ್‌ನವರು ಬಿಟ್ಟರೋ ಏನೋ ಗೊತ್ತಾಗುತ್ತಿಲ್ಲ. ಆದರೆ ಇಷ್ಟೇ ಸಾಕು. ಇದಕ್ಕೆ ಆಟದ ಮಧ್ಯೆ ಹೀಟ್‌ ಆಫ್‌ ದಿ ಮೂಮೆಂಟ್‌ ಅಂತಾ ನೀವು ಹೇಳಲು ಆಗುವುದಿಲ್ಲ. ಇದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ'.

'ನೀವು ನಯವಾಗಿರುವುದು ಬರೀ ತ್ರಿವಿಕ್ರಮ್‌ ಅವರ ಹತ್ತಿರ ಮಾತ್ರ. ಉಳಿದ ಸಮಯದಲ್ಲಿ ನಿಮ್ಮ ಭಾಷೆ, ನಿಮ್ಮ ಧ್ವನಿ, ಒರಟಾಗೇ ಇರುತ್ತದೆ ಯಾವಾಗಲೂ. ಅದು ತಪ್ಪಲ್ಲ. ಆ ಟಾಸ್ಕ್‌ನಲ್ಲಿ ಅಲ್ಲಿಯವರೆಗೂ ಹೊಟ್ಟೆ ನೋವು ಅಂತಾ ಕಣ್ಣೀರು ಹಾಕುತ್ತಿರುತ್ತೀರಾ, ಆದರೆ ನಿಮ್ಮ ಬುಟ್ಟಿ ಮುಟ್ಟಿದ ತಕ್ಷಣ ಎಲ್ಲಾ ಎಳೆದಾಡಿ, ಕಿತ್ತು ಹಾಕುತ್ತೀರಾ' ಎಂದು ಕಿಚ್ಚ ಸುದೀಪ್‌ ಹೇಳುತ್ತಿದ್ದಂತೆ ಭವ್ಯ ಗೌಡ ಕ್ಷಮೆ ಕೇಳಿದ್ದಾರೆ.

ಮಾತು ಮುಂದುವರಿಸಿದ ಸುದೀಪ್‌, 'ಎಲ್ಲೋ ಒಂದು ಕಡೆ ನಿಮ್ಮ ಸಮಯ ಚೆನ್ನಾಗಿ ಇತ್ತು ಅನಿಸುತ್ತದೆ. ಟಾಸ್ಕ್‌ ಮಧ್ಯದಲ್ಲಿ ಚಿಕ್ಕದಾಗಿ ನಡೆದು ಹೋಗುತ್ತದೆ. ಅದರಲ್ಲೂ ಪೆಟ್ಟು ತಿಂದಿರುವುದು ಹನುಮಂತು ಆಗಿರುವುದಿಂದ ನೀವು ಬಚಾವ್‌ ಆದ್ರಿ. ಯಾಕೆಂದರೆ ಅದಕ್ಕೆಲ್ಲಾ ಆ ವ್ಯಕ್ತಿ ರಿಯ್ಯಾಕ್ಟ್‌ ಮಾಡಲ್ಲ. ಭವ್ಯ ಅವರೇ ಕ್ಷಮೆ ಕೇಳುವುದು ಬೇರೆ, ಶಿಕ್ಷೆ ಇಲ್ಲದೆಯಂತೂ ಸಾಧ್ಯ ಇಲ್ಲ' ಎಂದು ಕಳಪೆ ಬಟ್ಟೆಯನ್ನು ಕೊಟ್ಟು ಭವ್ಯ ಗೌಡ ಅವರನ್ನು ಬಿಗ್‌ ಬಾಸ್‌ ಮುಂದಿನ ಆದೇಶದ ವರೆಗೂ ಜೈಲಿನಲ್ಲಿ ಇರುವಂತೆ ಹೇಳಿದರು. ಈ ಮಧ್ಯೆ ಸುದೀಪ್‌ ಬಿಗ್‌ ಬಾಸ್‌ ಯಾಕೆ ಭವ್ಯ ಗೌಡ ಅವರನ್ನು ಮನೆಯಿಂದ ಹೊರ ಹಾಕಲಿಲ್ಲ ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+