ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಏನಾಯ್ತು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರು ಜಾಮೀನು ಪಡೆದು ಚಿಕಿತ್ಸೆಗಾಗಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಜಾಮೀನು ಅವಧಿ ವಿಸ್ತರಿಸುವಂತೆ ದರ್ಶನ್‌ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಇಂದು ವಿಚಾರಣೆ ನಡೆಸಿದ ಹೈಕೋರ್ಟ್‌, ನವೆಂಬರ್‌ 28ಕ್ಕೆ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿದೆ.

ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯು ಇಂದು ಬೆಳಿಗ್ಗೆ ನಡೆಯಿತು. ದರ್ಶನ್‌ ಪರ ವಕೀಲರು ಸುದೀರ್ಘ ವಾದ ಮಂಡಿಸಿದರು. ಬಳಿಕ ವಿಚಾರಣೆಯನ್ನು ಸಂಜೆಗೆ ಮುಂದೂಡಲಾಯಿತು. ಈ ವೇಳೆ ದರ್ಶನ್‌ ಪರ ವಕೀಲರು ದರ್ಶನ್ ಕೊಲೆಯೇ ಮಾಡಿಲ್ಲ ಹಾಗೂ ಮೃತ ರೇಣುಕಾಸ್ವಾಮಿಯ ಕಿಡ್ನ್ಯಾಪ್‌ ಆಗಿಲ್ಲ ಎಂದು ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

High Court Adjourns Actor Darshan Thoogudeepa Bail Petition Hearing To November 28

ಈ ಪ್ರಕರಣದಲ್ಲಿ ಕಕ್ಷಿದಾರರಾದ ದರ್ಶನ್ ಅವರನ್ನು ಸಿಲುಕಿಸಲು ದೊಡ್ಡ ಯತ್ನ ನಡೆದಿದೆ ಎಂದೂ ವಕೀಲರು ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖಾಧಿಕಾರಿಗಳು ನೀಡಿರುವ ಮಾಹಿತಿಯಂತೆ ರೇಣುಕಾಸ್ವಾಮಿ ಅವರನ್ನು ಕಿಡ್ಯ್ನಾಪ್‌ ಮಾಡಲಾಗಿದೆ. ಚಿತ್ರದುರ್ಗದಿಂದ ಬರುತ್ತಿದ್ದಾಗ ರೇಣುಕಾಸ್ವಾಮಿ ಬಳಿಯಿಂದಲೇ ಆರೋಪಿಗಳು ಹಣ ಪಾವತಿಸಿದ್ದಾರೆ ಎಂದು ಹೇಳಲಾಗಿದೆ. ಕಿಡ್ನ್ಯಾಪ್‌ ಮಾಡಿರುವ ವ್ಯಕ್ತಿ ಹಣ ಪಾವತಿ ಮಾಡಲು ಹೇಗೆ ಸಾಧ್ಯ? ಎಂದು ವಾದಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ನಟ ದರ್ಶನ್‌ ಅವರಿಂದ ಪೊಲೀಸರು ವಶಕ್ಕೆ ಪಡೆದಿರೋ ಬಟ್ಟೆ ಹಾಗೂ ಶೂ ಮೇಲೆ ರಕ್ತದ ಕಲೆ ಇದೆ ಎಂದು ಹೇಳಿದ್ದಾರೆ. ಆದ್ರೆ ದರ್ಶನ್ ಆದರೆ ದರ್ಶನ್ ಬಟ್ಟೆಗಳನ್ನು ಮೊದಲೇ ಒಗೆಯಲಾಗಿದ್ದು, ರಕ್ತ ಇರಲು ಹೇಗೆ ಸಾಧ್ಯ? ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.

High Court Adjourns Actor Darshan Thoogudeepa Bail Petition Hearing To November 28

ಪೊಲೀಸರು ದರ್ಶನ್‌ ಅವರ ಶೂ ಪಡೆದಾಗ ಅದರ ಮೇಲೆ ಯಾವುದೇ ರಕ್ತದ ಕಲೆ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಎಫ್‌ಎಸ್‌ಎಲ್‌ ರಿಪೋರ್ಟ್‌ನಲ್ಲಿ ರಕ್ತದ ಕಲೆ ಎಂದು ಹೇಳಲಾಗಿದೆ. ಇದು ಹೋಲಿಕೆಯಾಗುತ್ತಿಲ್ಲ. ರೇಣುಕಾಸ್ವಾಮಿ ಮೃತದೇಹದಿಂದ ಸಂಗ್ರಹಿಸಿದ್ದ ರಕ್ತವನ್ನೇ ದರ್ಶನ್‌ ಅವರ ಶೂ ಹಾಗೂ ಬಟ್ಟೆಯ ಮೇಲೆ ಹಾಕಿರುವ ಸಾಧ್ಯತೆಯೂ ಇದೆ ಎಂದು ದರ್ಶನ್‌ ಪರ ವಕೀಲರು ಅನುಮಾನಿಸಿದ್ದಾರೆ.

ಒಟ್ಟಾರೆ ದರ್ಶನ್‌ ಅವರನ್ನು ಈ ಕೇಸ್‌ನಲ್ಲಿ ಸಿಲುಕಿಸಲು ಪೊಲೀಸರು ಯತ್ನಿಸಿದ್ದಾರೆ. ಇನ್ನು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಲ್ಲ. ರೇಣುಕಾಸ್ವಾಮಿ ಅಂದು ಎಂದಿನಂತೆಯೇ ಕೆಲಸಕ್ಕೆ ಹೋಗಿದ್ದಾನೆ. ರೇಣುಕಾಸ್ವಾಮಿ ಮಧ್ಯಾಹ್ನ ಊಟಕ್ಕೆ ಬರೋದಿಲ್ಲ ನಾಲ್ವರು ಸ್ನೇಹಿತರ ಜೊತೆಗೆ ಹೋಗುತ್ತೇನೆ ಎಂದು ಮನೆಯವರಿಗೆ ತಿಳಿಸಿದ್ದಾನೆ. ಈ ಬಗ್ಗೆ ಹೇಳಿಕೆ ದಾಖಲಿಸಲಾಗಿದೆ. ಹೀಗಿದ್ದಾಗ ಇದನ್ನು ಕಿಡ್ನ್ಯಾಪ್‌ ಎನ್ನಲು ಹೇಗೆ ಸಾಧ್ಯ ಎಂದು ದರ್ಶನ್‌ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+