ಉಗ್ರಾವತಾರ ತಾಳಿದ ಮಂಜುಗೂ ಡೊಂಟ್‌ ಕೇರ್‌: ಅಯ್ಯೋ ಹನುಮಂತನ ಕಾಟವೇ..!

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಎಂಟು ವಾರಗಳನ್ನು ಪೂರೈಸಿ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧೆ ಈಗೀಗ ರೋಚಕ ಹಂತಕ್ಕೆ ತಲುಪುತ್ತಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿಯೂ ಜೋರಾಗಿದೆ. ಈ ವಾರ ಬಿಗ್‌ ಬಾಸ್‌ ಮನೆ ಬಿಗ್‌ ಬಾಸ್‌ ಸಾಮ್ರಾಜ್ಯವಾಗಿದೆ. ಹೀಗಾಗಿ ಮನೆಯ ಕ್ಯಾಪ್ಟನ್‌ ಮಂಜು ಬಿಗ್ ಬಾಸ್ ಸಾಮ್ರಾಜ್ಯದ ಮಹಾರಾಜ ಮಂಜು ಎಂದು ಬಿಗ್‌ ಬಾಸ್‌ ಘೋಷಿಸಿದ್ದಾರೆ.

ರಾಜನಂತೆ ವೇಷ ತೊಟ್ಟಿರುವ ಮಂಜು ಇತರ ಸ್ಪರ್ಧಿಗಳಿಗೆ ಮನಬದಂತೆ ಆದೇಶ ನೀಡುತ್ತಿದ್ದಾರೆ. ಮಂಜುಗೆ ಬಿಗ್‌ ಬಾಸ್‌ ಕಳೆಯಿಂದಲೂ ವಿಶೇಷ ಅಧಿಕಾರ ಸಿಕ್ಕಿದ್ದು, ತಮ್ಮ ಉಗ್ರ ಅವಾತಾರ ತೋರಿಸುತ್ತಿದ್ದಾರೆ. ಚೈತ್ರಾ ಕುಂದಾಪುರ ಬಾಯಿಗೆ ಆಲೂಗಡ್ಡೆ ತುರುಕುವಂತೆ, ಇತರ ಸ್ಪರ್ಧಿಗಳು ಬಸ್ಕಿ ಹೊಡೆಯುವಂತೆ, ಧನರಾಜ್‌ ತಲೆ ಬಗ್ಗಿಸಿ ಬಹುಪರಾಕ್‌ ಕೂಗುವಂತೆ, ಯಾರೂ ಊಟ ಮಾಡದಂತೆ ಹೀಗೆ ತಮಗೆ ಮನಬಂದಂತೆ ಆದೇಶ ಕೊಡುತ್ತಿದ್ದಾರೆ. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಉಗ್ರಾವಾತಾರ ತಾಳಿರುವ ಉಗ್ರಂ ಮಂಜುವನ್ನು ಹನುಮಂತ ತಮಾಷೆ ಮಾಡುತ್ತಿದ್ದಾರೆ.

Hanumantha take Ugramm Manju As A Comedy In The Bigg Boss House

ಬಿಗ್‌ ಬಾಸ್‌ ನಿಮಗಿಂತ ಈ ರಾಜನ ಕಾಟವೇ ಹೆಚ್ಚಾಗಿದೆ ಎಂದು ಹನುಮಂತ ಬಿಗ್‌ ಬಾಸ್‌ಗೆ ದೂರು ಹೇಳಿದ್ದಾರೆ. ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಾಗಿಲ್ಲ ಎನ್ನುವ ಮಹಾರಾಜ ಮಂಜು ಆಜ್ಞೆಗೆ, ಮತ್ತೇನು ನೋಡಬೇಕು ಎಂದು ಹನುಮಂತ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಮಹಾರಾಜರಿಗೆ ಬಹುಪರಾಕ್‌ ಹಾಕುವಾಗ ಹನುಮಂತ ಏನೇನೋ ಹೇಳುದ್ದು, ಮನೆ ಮಂದಿ ಜೋರಾಗಿ ನಕ್ಕಿದ್ದಾರೆ.

ಇನ್ನು ಮಹಾರಾಜ ಮಂಜು ಅವರ ಬಳಿಯೇ ಫರ್ಫ್ಯೂಮ್‌ ಹಾಕುವಂತೆ ಹನುಮಂತ ಕೇಳಿದ್ದಾರೆ. ಇನ್ನು ಮಹಾರಾಜರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಶಿಶಿರ್‌ ಹೇಳಿದರೆ ಮಹಾರಾಜರನ್ನೇ ಇಲ್ಲಿಗೆ ಬರಲು ಹೇಳು ಎಂದು ಹನುಮಂತ ಹೇಳಿದ್ದಾರೆ. ಹನುಮಂತನ ಈ ಮಾತಿಗೆ ಸಿಟ್ಟಾಗಿರುವ ಮಹಾರಾಜ ಸೊಕ್ಕೇ ನಿನಿಗೆ ಎಂದು ಶಿಕ್ಷೆಗಳನ್ನು ನೀಡಿದ್ದಾರೆ.

Hanumantha take Ugramm Manju As A Comedy In The Bigg Boss House

ಈ ವರೆಗೂ ಜಗಳ, ಬೈದಾಟದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಉಗ್ರಂ ಮಂಜು ಕಳೆದ ವಾರ ತಮ್ಮ ಚಾಣಾಕ್ಯತನದ ಆಟದಿಂದ ಈ ವಾರ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಮನೆಯ ಕ್ಯಾಪ್ಟನ್‌ ಆಗುತ್ತಿದ್ದಂತೆ ಮಂಜುಗೆ ಬಿಗ್‌ ಬಾಸ್‌ ಕಳೆಯಿಂದಲೂ ವಿಶೇಷ ಅಧಿಕಾರ ಸಿಕ್ಕಿದೆ. ಜೊತೆಯಲ್ಲಿ ಕಿಚ್ಚನ ಚಪ್ಪಾಳೆ ಕೂಡ ಮಂಜುಗೆ ಸಿಕ್ಕಿದೆ. ಒಟ್ಟಾರೆ ಕಳೆದ ವಾರ ಉಗ್ರಂ ಮಂಜು ಫುಲ್‌ ಮಿಂಚಿದ್ದು, ವೀಕೆಂಡ್‌ ಸಂಚಿಕೆಯ ಕೊನೆಯಲ್ಲಿ ಒಂದು ಹೇಳಿಕೆಯಿಂದ ಕಿಚ್ಚ ಸುದೀಪ್‌ ಕಡೆಯಿಂದ ಎಚ್ಚರಿಕೆಯನ್ನು ಸಹ ಪಡೆದಿದ್ದಾರೆ.

ಈ ಬಿಗ್‌ ಬಾಸ್‌ ಮನೆಯಲ್ಲಿ ಯಾರನ್ನು ಮೆಚ್ಚಿಸುತ್ತೀರಿ ಎನ್ನುವ ಪ್ರಶ್ನೆಗೆ ಎಲ್ಲರೂ ಯಾರೂ ಇಲ್ಲ ಎಂದಿದ್ದಾರೆ. ಆದರೆ ಉಗ್ರಂ ಮಂಜು ಮಾತ್ರ ಗೌತಮಿಯ ಹೆಸರು ಹೇಳಿದ್ದಾರೆ. ಇದರಿಂದ ಗೌತಮಿಗೂ ಆಶ್ಚರ್ಯ ಆಗಿದೆ. ಈ ವೇಳೆ ಸುದೀಪ್‌ ನೀವು ಅವರನ್ನು ಮೆಚ್ಚಿಸಿಕೊಂಡೇ ಇರಿ ಎಂದು ಎರಡು ಬಾರಿ ಹೇಳುವ ಮೂಲಕ ಮಂಜುಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+