3.5 ಅಡಿ ಗೋಲ್ಡನ್ ಸ್ಟಾರ್ ಗಣೇಶ್ ಅಂತಾ ಕಿಚ್ಚ ಸುದೀಪ್ ಹೇಳಿ... Golden Star Ganesh
ಗೋಲ್ಡನ್ ಸ್ಟಾರ್ ಗಣೇಶ್ ಇಂದು ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನ ಮಾಡಿ & ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿರಬಹುದು. ಆದರೆ, ಇದೇ ಗೋಲ್ಡನ್ ಸ್ಟಾರ್ ಗಣೇಶ್ ಅವರು ಒಂದು ಕಾಲದಲ್ಲಿ ತುಂಬಾ ಕಷ್ಟ ಅನುಭವಿಸಿದ್ದು ಅಲ್ಲದೆ ದೊಡ್ಡ ದೊಡ್ಡ ಹೀರೋಗಳಿಂದ ಸವಾಲು ಕೂಡ ಎದುರಿಸಿದ್ದರು. ಹೀಗಿದ್ದಾಗಲೇ, 3.5 ಅಡಿ ಗೋಲ್ಡನ್ ಸ್ಟಾರ್ ಗಣೇಶ್ ಅಂತಾ ಕಿಚ್ಚ ಸುದೀಪ್ ಹೇಳಿ...
ಗೋಲ್ಡನ್ ಸ್ಟಾರ್ ಗಣೇಶ್ ಇನ್ನೇನು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಹೊಸ ಮನ್ವಂತರ ಆರಂಭ ಮಾಡಲಿದ್ದಾರೆ. ಆದರೆ ಇದೇ ಗಣೇಶ್ ಅವರ ಜೀವನವು 18 ವರ್ಷಗಳ ಹಿಂದೆ ತುಂಬಾ ಕಷ್ಟದಿಂದ ಕೂಡಿತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದ ಕೆಲವು ನಟರು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಸಾಕಷ್ಟು ಅಡ್ಡಿ ಮಾಡಿದ್ರು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಹೀಗಿದ್ದಾಗಲೇ, 3.5 ಅಡಿ ಗೋಲ್ಡನ್ ಸ್ಟಾರ್ ಗಣೇಶ್ ಅಂತಾ ಕಿಚ್ಚ ಸುದೀಪ್ ಹೇಳಿ...

'3.5 ಅಡಿ ಗೋಲ್ಡನ್ ಸ್ಟಾರ್ ಗಣೇಶ್...'
'ಗೋಲ್ಡನ್ ಸ್ಟಾರ್' ಎಂಬ ಬಿರುದು ಪಡೆದ ನಟ ಗಣೇಶ್ ಅವರಿಗೆ ಈಗ ಸಂಭ್ರಮ ನಟ ಗಣೇಶ್ ಹುಟ್ಟಿದ್ದು 1980ರ ಜುಲೈ 2ರಂದು, ಬೆಂಗಳೂರಿನ ನೆಲಮಂಗಲದ ಅಡಕಮರನ ಹಳ್ಳಿಯಲ್ಲಿ. ಬಡ ಕುಟುಂಬದಲ್ಲಿ ಜನಿಸಿದ್ದ ಗಣೇಶ್ ಬಾಲ್ಯದಲ್ಲೂ & ಯವ್ವನದಲ್ಲೂ ಸಾಕಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿ ನರಳಿದ್ದರು. ಆದ್ರೆ ಸಿನಿಮಾ ರಂಗ ಅವರನ್ನ ಕೈಹಿಡಿದು ನಿಲ್ಲಿಸಿತು. ಅದ್ರರಲ್ಲೂ ಮುಂಗಾರು ಮಳೆ ಸಿನಿಮಾದ ಮೂಲಕ ದೊಡ್ಡ ಹವಾ ಎಬ್ಬಿಸಿದ್ದರು 'ಗೋಲ್ಡನ್ ಸ್ಟಾರ್' ಗಣೇಶ್ ಅವರು. ಹೀಗಿದ್ದಾಗಲೇ, 3.5 ಅಡಿ ಗೋಲ್ಡನ್ ಸ್ಟಾರ್ ಗಣೇಶ್ ಅಂತಾ ಕಿಚ್ಚ ಸುದೀಪ್ ಹೇಳಿ...
ಕಿಚ್ಚ ಸುದೀಪ್ ಅವರು ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಉತ್ತಮ ಸ್ನೇಹ ಹೊಂದಿದ್ದು, ಇಬ್ಬರೂ ಸೇರಿ ಕ್ರಿಕೆಟ್ ಕೂಡ ಆಡುತ್ತಾರೆ. ಆದರೆ 18 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆಲ್ಲಾ ಇರಲಿಲ್ಲ, ಕಿಚ್ಚ ಸುದೀಪ್ & ಗೋಲ್ಡನ್ ಸ್ಟಾರ್ ಗಣೇಶ್ ನಡುವೆ ದೊಡ್ಡ ಮನಸ್ಥಾಪ ಇತ್ತು ಅನ್ನೋ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಖಾಸಗಿ ಸಂದರ್ಶನ ಒಂದರಲ್ಲಿ ಖುದ್ದಾಗಿ ಕಿಚ್ಚ ಸುದೀಪ್ ಅವರೇ ನೀಡಿದ್ದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗಲೂ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಗ್ಗೆ ಏನೇನೋ ಹೇಳಿದ್ದಾರೆ, ಎಂಬ ಆರೋಪವನ್ನು ಮಾಡಲಾಗಿದೆ. ಕೆಲ ಕಿಡಿಗೇಡಿಗಳು ಈ ವಿಡಿಯೋ ಮತ್ತೆ ವೈರಲ್ ಮಾಡುತ್ತಿದ್ದು ಭಾರಿ ಚರ್ಚೆ ಹುಟ್ಟುಹಾಕಿದೆ.
ಕಿಚ್ಚ ಸುದೀಪ್ ವಿಡಿಯೋದಲ್ಲಿ ಏನ್ ಹೇಳಿದ್ರು?
ಮುಂಗಾರು ಮಳೆ ಸಿನಿಮಾ ರಿಲೀಸ್ ಆದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಹವಾ ಸಖತ್ ಜೋರಾಗಿ ಇತ್ತು. ಹೀಗಿದ್ದಾಗ ಕಿಚ್ಚ ಸುದೀಪ್ ಅವರ ಎದುರು ಖಾಸಗಿ ವಾಹಿನಿಯ ಆಂಕರ್ ಪ್ರಶ್ನೆ ಒಂದನ್ನ ಹಾಕಿದ್ದರು, ಇದೇ ವೇಳೆ ಮುಂಗಾರು ಮಳೆ ಸಿನಿಮಾ ವಿಚಾರವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಅವರು ಕೋಪ ಮಾಡಿಕೊಂಡು ಬೈಯುತ್ತಾರೆ ಎಂಬ ಆರೋಪ ಇದೆ. ಅಲ್ಲದೆ ಮುಂಗಾರು ಮಳೆ ಸಿನಿಮಾ ಒಬ್ಬರಿಂದ ಮಾತ್ರ ಆಗಿಲ್ಲ, ದರ್ಶನ್ ತೂಗುದೀಪ್ ಜೊತೆ ನಟ ಗಣೇಶ್ ಹೋಲಿಕೆ ಯಾಕೆ? ಅಂತಾ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ
ಹಾಗೆಯೇ, 'ನಟ ಗಣೇಶ್ 3.5 ಅಡಿ, ದರ್ಶನ್ 6.5 ಅಡಿ...' ಅಂತಾ ಕೂಡ ಹೈಟ್ ವಿಚಾರ ಸುದೀಪ್ ಪ್ರಸ್ತಾಪಿಸಿದ್ದಾರೆ, ಎಂಬ ವಿಡಿಯೋ ವೈರಲ್ ಆಗುತ್ತಿದೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಕನ್ನಡದ ಮತ್ತೊಬ್ಬರು ಸ್ಟಾರ್ ಹೀರೋ ಅಭಿಮಾನಿಗಳ ನಡುವೆ ಈಗ ದೊಡ್ಡ ಕಿಚ್ಚು ಹೊತ್ತಿಕೊಂಡು ಬಿಸಿಬಿಸಿ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ. ಹೀಗಿದ್ದಾಗಲೇ, ಹಳೆಯ ವಿಚಾರ ಈಗ ಅನಾವಶ್ಯಕ ಅನ್ನೋ ಸಲಹೆ ಕೂಡ ನೀಡಲಾಗುತ್ತಿದ್ದು, ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕು.
'ಗೋಲ್ಡನ್ ಸ್ಟಾರ್' ಜೀವನದ ಕಷ್ಟಗಳು...
2005 ತನಕ ಉದಯ ಟಿವಿ 'ಕಾಮಿಡಿ ಟೈಮ್' ಶೋ ನಡೆಸಿ, ಜೀವನದ ಬಂಡಿ ಸಾಗಿಸುತ್ತಿದ್ದ ನಟ ಗಣೇಶ್ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದ್ದು 2006 ಸಮಯದಲ್ಲಿ. ಇದೇ ವರ್ಷ ಗಣೇಶ್ ಹೀರೋ ಆಗಿ ನಟನೆ ಮಾಡಿದ 'ಚೆಲ್ಲಾಟ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಚೆಲ್ಲಾಟ' ಗಣೇಶ್ ಅವರ ಬದುಕಿನಲ್ಲಿ ಬ್ಲಾಕ್ ಬಸ್ಟರ್ ಆಗದೇ ಇದ್ದರೂ, ಭಾರಿ ದೊಡ್ಡ ಹೆಸರು ತಂದುಕೊಟ್ಟಿತ್ತು. ಅಲ್ಲದೆ ಮುಂದೆ ಗಣೇಶ್‌ಗೆ 'ಮುಂಗಾರು ಮಳೆ' ಚಾನ್ಸ್ ಹುಡುಕಿಕೊಂಡು ಬರುವಂತೆ ಮಾಡಿತ್ತು. ಆ ನಂತರ 'ಮುಂಗಾರು ಮಳೆ' ದೊಡ್ಡ ಅತಿದೊಡ್ಡ ಹಿಟ್ ಕಂಡು ಕನ್ನಡ ಸಿನಿಮಾ ಇಂಡಸ್ಟ್ರಿ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿತ್ತು. ಈ ಮೂಲಕ 'ಮುಂಗಾರು ಮಳೆ' ಸಿನಿಮಾ ನಟ ಗಣೇಶ್ ಅವರಿಗೆ ದೊಡ್ಡ ತಿರುವು ನೀಡಿತ್ತು, ಆ ನಂತರ 'ಗೋಲ್ಡನ್ ಸ್ಟಾರ್' ಹಿಂದೆ ತಿರುಗಿ ನೋಡಲೇ ಇಲ್ಲ.












Click it and Unblock the Notifications