ಗಿಲ್ಲಿ ಕೊರಳಿಗೆ ದಪ್ಪನೆಯ ಗೋಲ್ಡ್ ಚೈನ್‌ಗಳನ್ನು ಹಾಕಿದ ಟಿ.ಎ.ಶರವಣ
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರ ಮಾಲೀಕತ್ವದ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ ಭಾನುವಾರ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಬಿಗ್‌ಬಾಸ್ ಕನ್ನಡ ಸೀಸನ್-12ರ ವಿಜೇತ ನಟ ಗಿಲ್ಲಿ ನಟರಾಜ್ ಎಲ್ಲರ ಗಮನ ಸೆಳೆದರು. ಉದ್ಘಾಟನಾ ವೇದಿಕೆಯ ಮೇಲೆ ಟಿ.ಎ.ಶರವಣ ಅವರು ಗಿಲ್ಲಿ ಅವರ ಕೊರಳಿಗೆ ಒಂದರ ಮೇಲೊಂದು ದುಬಾರಿ ಬೆಲೆಯ ದಪ್ಪ ದಪ್ಪ ಚಿನ್ನದ ಸರಗಳನ್ನು ಹಾಕಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.
ಕಾರ್ಯಕ್ರಮದ ವೇಳೆ ಗಿಲ್ಲಿ ಚಿನ್ನದ ಸರಗಳನ್ನು ಧರಿಸಿ ಮಿಂಚುತ್ತಿದ್ದಾಗ, ಸ್ವಲ್ಪ ಅಚ್ಚರಿಯಿಂದಲೇ "ಇವೆಲ್ಲ ನನಗೆ ತಾನೇ?" ಎಂದು ಕೇಳಿರುವುದು ಅಲ್ಲಿದ್ದವರಲ್ಲಿ ನಗು ಮೂಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಶರವಣ ಅವರು, "ಗಿಲ್ಲಿಗಿಂತ ದೊಡ್ಡದು ಯಾವುದೂ ಇಲ್ಲ. ಗಿಲ್ಲಿಯೇ ಬಂಗಾರ. ಅವರಿಗೆ ಇನ್ನಾವ ಬಂಗಾರ ಬೇಕು?" ಎಂಬ ಮಾತುಗಳನ್ನಾಡಿದರು. ಈ ಸಂಭಾಷಣೆ ಸೇರಿದ ವಿಡಿಯೋ ಕ್ಲಿಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಗಿಲ್ಲಿ ಅವರು ಕೂಡ ತಮ್ಮ ಸಹಜ ಸರಳತೆ ಮತ್ತು ಹಳ್ಳಿ ಸೊಗಡಿನ ಹಾಸ್ಯಭರಿತ ಶೈಲಿಯಲ್ಲಿ ಪ್ರತಿಕ್ರಿಯಿಸಿ, "ಬಂಗಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಚಿನ್ನ ಇಷ್ಟ. ಆದರೆ ನನಗೆ ಜನ ಅಂದ್ರೇನೇ ಇಷ್ಟ" ಎಂದು ಹೇಳಿದ್ದಾರೆ. ಜನರ ಪ್ರೀತಿ ಮತ್ತು ಅಭಿಮಾನವೇ ನನ್ನ ದೊಡ್ಡ ಆಸ್ತಿ ಎಂಬರ್ಥದ ಈ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿವೆ.
ಬಂಗಾರ ಸರ ಗಿಲ್ಲಿ ಸ್ವಂತಕ್ಕಾ?
ವಿಡಿಯೋ ವೈರಲ್ ಆದ ನಂತರ, ಗಿಲ್ಲಿಗೆ ಕೋಟ್ಯಂತರ ಮೌಲ್ಯದ ಚಿನ್ನದ ಸರಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂಬ ವದಂತಿಗಳು ಹರಡತೊಡಗಿದವು. ಈ ಹಿನ್ನೆಲೆಯಲ್ಲಿ ಗಿಲ್ಲಿ ಅವರು ಸ್ವತಃ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದರು. "ಅವು ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ ಮಾತ್ರ ನನ್ನ ಕೊರಳಿಗೆ ಹಾಕಿದ ಚಿನ್ನದ ಸರಗಳು. ನನಗೆ ಶಾಶ್ವತವಾಗಿ ಕೊಟ್ಟದ್ದಲ್ಲ" ಎಂದು ಅವರು ಖಚಿತಪಡಿಸಿದರು. ಜೊತೆಗೆ, "ನನ್ನ ಜೀವನದಲ್ಲೇ ಅಷ್ಟು ಬಂಗಾರವನ್ನು ಒಂದೇ ವೇಳೆ ನಾನು ನೋಡಿರಲಿಲ್ಲ. ಕಾರ್ಯಕ್ರಮದ ಕ್ಷಣ ಮಾತ್ರಕ್ಕೆ ಹಾಕಿದ್ದರು" ಎಂದು ನಗುತ್ತಾ ಹೇಳಿದರು.
ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ನೂತನ ಮಳಿಗೆ ಉದ್ಘಾಟನೆಗೆ ರಾಜಕೀಯ, ಸಾಮಾಜಿಕ ಹಾಗೂ ಸಿನಿರಂಗದ ಹಲವು ಗಣ್ಯರು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಗಿಲ್ಲಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ತಂದಿದ್ದು, ಅಭಿಮಾನಿಗಳು ಸೆಲ್ಫಿ ಮತ್ತು ಫೋಟೋಗಳಿಗೆ ಮುಗಿಬಿದ್ದರು.
ಚಿನ್ನದ ಸರಗಳಿಗಿಂತಲೂ ಗಿಲ್ಲಿ ಅವರ ಸರಳ ಮಾತುಗಳು, ಮನಸ್ಥಿತಿ ಮತ್ತು ಜನರೊಂದಿಗೆ ಹೊಂದಿಕೊಂಡು ಮಾತನಾಡುವ ಶೈಲಿಯೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. 'ಗಿಲ್ಲಿಯೇ ಬಂಗಾರ' ಎಂಬ ಶರವಣ ಅವರ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, ಈ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಸುದ್ದಿಯಾಗುತ್ತಿದೆ.
ಗಿಲ್ಲಿ ನೋಡಿ ನಕ್ಕ ಕಾವ್ಯ
ಇದೇ ಉದ್ಘಾಟನಾ ವೇದಿಕೆಯಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್-12ರಲ್ಲಿ ಗಿಲ್ಲಿಯ ಜೋಡಿಯಾಗಿ ಗುರುತಿಸಿಕೊಂಡಿದ್ದ ಕಾವ್ಯ ಕೂಡ ಭಾಗವಹಿಸಿದ್ದರು. ಗಿಲ್ಲಿ ಕೊರಳಲ್ಲಿ ದಪ್ಪ ದಪ್ಪ ಚಿನ್ನದ ಸರಗಳನ್ನು ಧರಿಸಿ ಮಿಂಚುತ್ತಿರುವುದನ್ನು ಕಂಡು ಕಾವ್ಯ ಸಂತಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಗಿಲ್ಲಿಯತ್ತ ನಗುತ್ತಾ ಅಭಿನಂದನೆ ಸಲ್ಲಿಸಿದ ಕಾವ್ಯ, ಅವರ ಯಶಸ್ಸಿಗೆ ಶುಭಹಾರೈಸಿದ ದೃಶ್ಯಗಳು ಗಮನ ಸೆಳೆದವು.
ಬಿಗ್‌ಬಾಸ್ ಮನೆಯೊಳಗೆ ಗಿಲ್ಲಿ-ಕಾವ್ಯ ಜೋಡಿ ಸಾಕಷ್ಟು ಜನಪ್ರಿಯವಾಗಿದ್ದ ಕಾರಣ, ಉದ್ಘಾಟನಾ ಕಾರ್ಯಕ್ರಮದಲ್ಲೂ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ವಿಶೇಷ ಖುಷಿ ತಂದಿತು. ಚಿನ್ನ ಧರಿಸಿದ್ದ ಗಿಲ್ಲಿಯನ್ನು ನೋಡಿ ಕಾವ್ಯ ಹರ್ಷಗೊಂಡಿರುವ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ












Click it and Unblock the Notifications