ಕೊನೆಗೂ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಅಸಲಿ ಕಾರಣ ಬಯಲು
ತೆಲುಗು ಬಿಗ್ ಬಾಸ್‌ನಲ್ಲಿ ಧೂಳೆಬ್ಬಿಸಿದ್ದ ಶೋಭಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿಯೂ ಹವಾ ಎಬ್ಬಿಸುವ ರೇಂಜ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಬಂದ ಮೊದಲ ವಾರ ಎಲ್ಲಾ ವಿಚಾರಗಳಿಗೂ ಸ್ಪಷ್ಟನೆ ಕೇಳುತ್ತಾ ಟಾಸ್ಕ್‌ಗಳಲ್ಲಿ ಮಿಂಚಿದ್ದ ಶೋಭಾ ಶೆಟ್ಟಿ ಎರಡನೇ ವಾರ ಸಂಪೂರ್ಣ ಮೂಲೆ ಗುಂಪಾದರು ಅಷ್ಟೇ ಅಲ್ಲದೇ ಕಳಪೆ ಕೂಡ ಆದರು. ಬಳಿಕ ಶೋ ಕ್ವಿಟ್ ಮಾಡಿ ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಬಂದರು.
ಜನರ ಬೆಂಬಲ ಇದ್ದರೂ ಕೂಡ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದೇಕೆ ಎನ್ನುವ ಕುತೂಹಲ ಎಲ್ಲರಿಗಿತ್ತು. ಇದೀಗ ಈ ಬಗ್ಗೆ ಸ್ವತಃ ಶೋಭಾ ಶೆಟ್ಟಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

'ನನ್ನ ಆರೋಗ್ಯ ಈಗ ಸುಧಾರಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಮೆಸೇಜ್ ಮಾಡಿದವರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಾನು ಯಾರಿಗೂ ಸಂದರ್ಶನ ಕೊಟ್ಟಿಲ್ಲ. ಅಷ್ಟು ಜೋಶ್ ಅಲ್ಲಿ ಬಿಗ್ ಬಾಸ್ ಮನೆಯೊಳಗೆ ಹೋದವರು ಯಾಕೆ ಅಷ್ಟು ಬೇಗ ಹೊರಗೆ ಬಂದರು ಎನ್ನುವ ಕಾರಣ ತಿಳಿಯುವ ಕುತೂಹಲ ಅನೇಕರಿಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ'.
'ನನ್ನ ಜೀವನದಲ್ಲಿ ಆಗಿರಬಹುದು ಅಥವಾ ಹೊರಗಡೆ ಆಗಿರಬಹುದು ಅಷ್ಟು ಸುಲಭವಾಗಿ ನಾನು ಸೋಲೋಪ್ಪಿಕೊಳ್ಳುವುದಿಲ್ಲ. ಆದರೆ ನಾನು ಅಷ್ಟು ದೊಡ್ಡ ಶೋಯಿಂದ ಹೊರಗಡೆ ಬಂದಿದ್ದೇನೆ ಎಂದರೆ ಖಂಡಿತವಾಗಿಯೂ ಅದಕ್ಕೆ ಕಾರಣ ಇದೆ. ಅಷ್ಟು ಸುಲಭವಾಗಿ ಅಂತಹ ದೊಡ್ಡ ನಿರ್ಧಾರವನ್ನು ನಾನು ತೆಗೆದುಕೊಳ್ಳುವುದಿಲ್ಲ' ಎಂದರು.
'ತೆಲುಗು ಬಿಗ್ ಬಾಸ್‌ನಲ್ಲಿ ನಾನು ಟಾಪ್ 5 ಎನ್ನುವುದನ್ನು ಕಳೆದುಕೊಂಡೆ. ಆದರೆ ಕನ್ನಡದಲ್ಲಿ ಅದನ್ನು ಪಡೆದುಕೊಳ್ಳಬೇಕು. ಅಲ್ಲಿ ಕಳೆದಿರುವುದನ್ನು ಇಲ್ಲಿ ಪಡೆದುಕೊಳ್ಳಬೇಕು ಎಂದುಕೊಂಡು ಜೋಶ್‌ನಲ್ಲಿ ನಾನು ಮನೆಯೊಳಗಡೆ ಹೋದೆ. ನಾನು ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಬೇಕು ಅಂದುಕೊಂಡಿದ್ದೆ. ಒಂದೊಳ್ಳೆ ಪ್ರಾಜೆಕ್ಟ್ ಮೂಲಕ ಬರಬೇಕು ಅಂದುಕೊಂಡಿದ್ದೆ. ಅದಕ್ಕೆ ಸರಿಯಾಗಿ ನನಗೆ ಬಿಗ್ ಬಾಸ್ ಅವಕಾಶ ಸಿಕ್ಕಿತು'.

'ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ಒಂದು ಚಿಕ್ಕ ಇನ್ಫೆಕ್ಷನ್ ನನಗೆ ಇತ್ತು. ಹುಡುಗಿಯರಿಗೆ ಅದು ಸಾಮಾನ್ಯವಾಗಿ ಇರುತ್ತದೆ. ಆದರೆ ಮನೆಯೊಳಗೆ ಹೋದ ಮೇಲೆ ಊಟ ಹಾಗೂ ಬೇರೆ ಒಂದಷ್ಟು ಸೆಟ್ ಆಗಲಿಲ್ಲ. ಹೀಗಾಗಿ ಇನ್ಫೆಕ್ಷನ್ ಜಾಸ್ತಿ ಆಗಿ ಹೋಯಿತು. ಬಿಗ್ ಬಾಸ್ ತಂಡ ತುಂಬಾ ಚೆನ್ನಾಗಿ ನೋಡಿಕೊಂಡರು. ಆದರೆ ನನ್ನ ಆರೋಗ್ಯ ನನಗೆ ಸಪೋರ್ಟ್ ಮಾಡಲಿಲ್ಲ. ಹೀಗಾಗಿ ನನಗೆ ಆಟದ ಕಡೆ ಜಾಸ್ತಿ ಗಮನಕೊಡಲು ಆಗಲಿಲ್ಲ'.
'ಜೀವನದಲ್ಲಿ ಖಂಡಿತವಾಗಿಯೂ ಕೆಲಸ ಎನ್ನುವುದು ಮುಖ್ಯ ನನಗೆ ಅದರ ಮೇಲೆ ನಂಬಿಕೆ ಇದೆ. ಆದರೆ ಕೆಲಸ ಮಾಡಲು ಆರೋಗ್ಯ ಎನ್ನುವುದು ಕೂಡ ತುಂಬಾ ಮುಖ್ಯ. ಎರಡನ್ನೂ ತೂಗಿದಾಗ ನನಗೆ ಆರೋಗ್ಯನೇ ತುಂಬಾ ಮುಖ್ಯ ಅನಿಸಿತು. ಹೀಗಾಗಿ ಈ ಒಂದು ನಿರ್ಧಾರವನ್ನು ನಾನು ಮಾಡಬೇಕಾಗಿ ಬಂತು. ನಿಜವಾಗಿಯೂ ನಾನು ಇದನ್ನು ಬಯಸಿರಲಿಲ್ಲ. ಯಾಕೆಂದರೆ ತುಂಬಾ ಚೆನ್ನಾಗಿ ನನಗೆ ವೋಟಿಂಗ್ ಬಂದಿತ್ತು. ನನಗೆ ವೋಟ್ ಮಾಡಿದವರಿಗೆ ಧನ್ಯವಾದಗಳು. ಆಗಿದೆಲ್ಲಾ ಒಳ್ಳೆದಕ್ಕೆ ಅಂತಾ ನಾನು ಅಂದುಕೊಳ್ಳುತ್ತೇನೆ' ಎಂದು ಶೋಭಾ ಶೆಟ್ಟಿ ಹೇಳಿದರು.












Click it and Unblock the Notifications