‘ಡಿ-ಬಾಸ್’ ದರ್ಶನ್ ಸಂಸಾರದಲ್ಲಿ ಮತ್ತೆ ಬಿರುಗಾಳಿ? ದರ್ಶನ್ ಅವರ ಪತ್ನಿ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ಕಾಟೇರ' ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿ ಇದ್ದು, ಅವರ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಸಂಭ್ರಮವೂ ಮೇಳೈಸಿದೆ. ಈಗಾಗಲೇ ದರ್ಶನ್ ಅವರ 'ಕಾಟೇರ' ಚಿತ್ರ 200 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದ್ದು, 250 ಕೋಟಿ ಕ್ಲಬ್ ಕಡೆಗೆ ಮುನ್ನುಗ್ಗುತ್ತಿದೆ. ಹೀಗಿದ್ದಾಗ ನಟ ದರ್ಶನ್ ಅವರ ಸಂಸಾರದಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಂತೆ ಕಾಣುತ್ತಿದೆ?
ಹೌದು, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ವಿಜಯಲಕ್ಷ್ಮಿ ಅವರು ದರ್ಶನ್ ಹಾಗೂ ತಮ್ಮ ಪುತ್ರ ವಿನೀತ್ ಜೊತೆಗಿನ ಫೋಟೋನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, 'This is us♥️ with our one and only #familyovereverything' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ 'ಕುಟುಂಬವೇ ಎಲ್ಲ' ಎಂಬ ಸಂದೇಶ ಕೊಟ್ಟಿದ್ದರು ನಟ ದರ್ಶನ್ ಅವರ ಪತ್ನಿ. ಇದರ ಜೊತೆಗೆ ಮತ್ತೊಂದು ಪೋಸ್ಟ್ ಮೂಲಕ ಇದೀಗ ಎಚ್ಚರಿಕೆ ನೀಡಿದ್ದಾರೆ.

ದರ್ಶನ್ ಪತ್ನಿಯಿಂದ ವಾರ್ನಿಂಗ್!
ಹೀಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಕುಟುಂಬದ ಫೋಟೋ ಹಾಕಿದ ಸ್ವಲ್ಪ ಹೊತ್ತಲ್ಲೇ, ಪವಿತ್ರಾ ಗೌಡ ಸಹ ದರ್ಶನ್ ಅವರ ಜೊತೆಗಿನ ಹಲವು ಫೋಟೋ ಮರ್ಜ್ ಮಾಡಿದ್ದು ವಿಡಿಯೋ ಪೋಸ್ಟ್ ಮಾಡಿದ್ದರು. ಅಲ್ಲದೆ 'ನಮ್ಮ ಸಂಬಂಧಕ್ಕೆ 10 ವರ್ಷವಾಯಿತು. ಇನ್ನೂ ಹಲವು ವರ್ಷ ಜೊತೆಗೆ ಸಾಗಬೇಕಿದೆ' ಅಂತಾ ಪವಿತ್ರಾ ಗೌಡ ಅವರು ಕ್ಯಾಪ್ಷನ್ ನೀಡಿದ್ದರು. ಹೀಗೆ ಪವಿತ್ರಾ ಗೌಡ ಅವರು ತಮ್ಮ ಹಾಗೂ ದರ್ಶನ್‌ರ ಹಲವು ಫೋಟೋನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೀಗಾಗಿ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ!
ನಟ ದರ್ಶನ್ ಪತ್ನಿ ಎಚ್ಚರಿಕೆ ಹೇಗಿತ್ತು?
ಪವಿತ್ರಾ ಗೌಡ ಅವರು ದರ್ಶನ್ ಅವರ ಜೊತೆಗಿನ ಫೋಟೋ ಪೋಸ್ಟ್ ಮಾಡಿದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೀಗ ವಿಜಯಲಕ್ಷ್ಮಿ ದರ್ಶನ್, 'ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಬೇರೊಬ್ಬರ ಗಂಡನ ಫೋಟೋ ಪೋಸ್ಟ್ ಮಾಡುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ & ಆದರ್ಶ ಎಂಥಹದ್ದು ಅಂತ ತೋರಿಸುತ್ತೆ.' ಎಂದು ಗರಂ ಆಗಿದ್ದು, ಹಾಗೇ ಎಚ್ಚರಿಕೆ ನೀಡಿದ್ದಾರೆ.

'ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಈ ಫೋಟೋಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯದ ಕುರಿತು ಮಾತನಾಡಲು ಸಾಮಾಜಿಕ ಮಾಧ್ಯಮ ಬಳಸಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದಾಗಿ ಧ್ವನಿ ಎತ್ತುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ವಿಜಯಲಕ್ಷ್ಮಿ ದರ್ಶನ್ ಅವರು ಎಚ್ಚರಿಕೆ ನೀಡಿದ್ದಾರೆ.
ಮತ್ತೆ ದರ್ಶನ್ ಅವರ ಬಾಳಲ್ಲಿ ಬಿರುಗಾಳಿ?
ಅಂದಹಾಗೆ ಈ ಪರಿಸ್ಥಿತಿ ನೋಡುತ್ತಿದ್ದರೆ, ನಟ ದರ್ಶನ್ ಅವರ ಬಾಳಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆಯಾ? ಎಂಬ ಚರ್ಚೆಗಳು ಕೂಡ ಶುರುವಾಗಿವೆ. ಯಾಕಂದ್ರೆ ಹಿಂದೆ ಕೂಡ ಇದೇ ರೀತಿ ಕಿತ್ತಾಟ ನಡೆದಿತ್ತು. ಇದೀಗ ಮತ್ತೊಮ್ಮೆ ಬಿರುಗಾಳಿ ಎದ್ದಿದೆಯಾ? ಎಂಬ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಿರುಗಾಳಿಯೇ ಸೃಷ್ಟಿಯಾಗಿದ್ದು, ಪರ ವಿರೋಧದ ಚರ್ಚೆ ನಡೆಯುತ್ತಿವೆ.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ದರ್ಶನ್ ಅವರ ಕಾಟೇರ ಸಂಭ್ರಮ ಇನ್ನೂ ಜೋರು ಜೋರಾಗುತ್ತಿದೆ. ತಮ್ಮ ನೆಚ್ಚಿನ ನಟನ ಕಾಟೇರ ಸಿನಿಮಾ ನೋಡಿ ಅಭಿಮಾನಿಗಳು ಈ ಮೂಲಕ ಸಂಭ್ರಮಿಸುತ್ತಿದ್ದಾರೆ. ಹಾಗೇ ಕಾಟೇರ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳ ಪೈಕಿ ಮೊದಲ ಸ್ಥಾನವನ್ನೂ ಪಡೆದಿದೆ.












Click it and Unblock the Notifications