Pavitra Gowda: ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಚ್ಚರಿ ನೀಡಿದ ಫ್ಯಾನ್, ಏನದು? Video Viral

ನಟ ದರ್ಶನ್ ತೂಗೂದೀಪ ಮತ್ತು ಅವರ ಸ್ನೇಹಿತೆ ನಟಿ ಪವಿತ್ರಾ ಗೌಡ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಇಬ್ಬರು ತಮ್ಮ ಸಿನಿಮಾ, ವೃತ್ತಿಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ಹಿಂದೆ ಡಿ.ಬಾಸ್, ಖೈದಿ ಸಂಖ್ಯೆ, ದರ್ಶನ್ ಫೋಟೋ ಅನ್ನು ಟ್ಯಾಟೋ ಹಾಕಿಸಿಕೊಂಡಿದ್ದ ಫ್ಯಾನ್ಸ್ ವಿಡಿಯೋಗಳು ಭಾರೀ ವೈರಲ್ ಆಗಿದ್ದವು. ಇದೀಗ ಪವಿತ್ರಾ ಗೌಡ ಅವರ ಫೋಟೋ ಹಚ್ಚೆ ಕೈಮೇಲೆ ಹಾಕಿಸಿಕೊಂಡ ಅಭಿಮಾನಿಯು ಪವಿತ್ರಾ ಗೌಡಗೆ ತೋರಿಸಿ ಅಚ್ಚರಿ ಉಂಟು ಮಾಡಿದ್ದಾರೆ. ಅಭಿಮಾನಿ ಕೈ ಹಚ್ಚೆ ನೋಡಿ ಪವಿತ್ರಾ ಗೌಡ ಏನಂದ್ರು?

ಇಷ್ಟದ ರಾಜಕಾರಣಿ, ನಟ, ನಟಿಯರು ಸೇರಿದಂತೆ ಸಲೆಬ್ರೆಟಿಗಳ ಮೇಲೆ ಕೆಲವೊಬ್ಬರಿಗೆ ಅತೀವವಾದ ಪ್ರೀತಿ ಅಭಿಮಾನ ಇರುತ್ತದೆ. ಹೀಗಾಗಿ ನಾನಾ ರೀತಿಯ ಸರ್ಕಸ್‌ಗಳನ್ನು ಮಾಡಿ ತಮ್ಮಿಷ್ಟದ ವ್ಯಕ್ತಿಗಳ ಮುಂದೆ ಬಂದು ನಿಲ್ಲುತ್ತಾರೆ. ಅದರಲ್ಲಿ ಕೆಲವು ನೋಡ ನೋಡುತ್ತಲೇ ವೈರಲ್ ಆಗಿ ಬಿಡುತ್ತವೆ. ಕೆಲವೊಂದು ಹುಚ್ಚಾಟಗಳು ಜೀವಕ್ಕೆ ಆಪತ್ತು ತಂದು ಬಿಡುತ್ತವೆ.

Fan Shows Pavithra Gowda Tattoo Actress Reacts with Surprise and Smile Video

ಇಲ್ಲಿ ಫ್ಯಾನ್ಸ್ ಒಬ್ಬರು ತಮ್ಮ ಕೈ ಮೇಲೆ ನೆಚ್ಚಿನ ನಟಿ ಪವಿತ್ರಾ ಗೌಡರ ಫೋಟೋ ಹಚ್ಚೆ ಹಾಕಿಕೊಂಡು ನೇರ ಅವರ ಮುಂದೆ ಬಂತು ನಿಂತಿದ್ದಾರೆ. ಹಚ್ಚೆ ಹಾಕಿದ ಕೈ ಸುತ್ತಿಕೊಂಡು ಬಂದಿದ್ದ ಅಭಿಮಾನಿ, ನಟಿಗೆ ತೋರಿಸಿದ್ದಾರೆ. ಇದನ್ನು ಕಂಡು ಪವಿತ್ರಾ ಗೌಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಚ್ಚೆ ಪದೇ ಪದೇ ನೋಡಿ ನಕ್ಕಿದ್ದಾರೆ. ಇದೆಲ್ಲ ಯಾಕೆ ಎನ್ನುವಂತೆ ಬೆನ್ನಿಗೆ ಪ್ರೀತಿಯಿಂದ ಏಟು ಕೊಟ್ಟಿದ್ದಾರೆ.

ಟ್ಯಾಟೋ ಮೆಚ್ಚಿದ ಪವಿತ್ರಾ ಗೌಡ

ಅಕ್ಕ ಎನ್ನುತ್ತಲೇ ಕೈ ಮೇಲಿನ ಹಚ್ಚೆ ತೋರಿಸುವ ಅಭಿಮಾನಿ, ನೋಡಿ ನಿಮಗೆ ಗೊತ್ತಾಗುತ್ತೆ ಎನ್ನುತ್ತಾನೆ. ಟ್ಯಾಟೋ ಚೆನ್ನಾಗಿದೆ ಅಕ್ಕ ನೋಡಿ. ಫುಲ್ ಹಚ್ಚೆ ಇದು ಎಂದು ವಿವರಿಸುತ್ತಾನೆ. ಚೆನ್ನಾಗಿದೆಯಾ? ಎಂದು ಕೇಳುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನಗುತ್ತಲೆ ಪವಿತ್ರಾ ಗೌಡ ಪ್ರತಿಕ್ರಿಯಿಸುತ್ತಾರೆ. ಟ್ಯಾಟೋವನ್ನು ಪವಿತ್ರಾ ಮೆಚ್ಚಿಕೊಂಡಿದ್ದಾರೆ. ಅವರು ಅಭಿಮಾನಿ ಜೊತೆಗೆ ಪ್ರೀತಿಯಿಂದ ಮಾತನಾಡಿಸುವ ವಿಡಿಯೋ ಹರಿದಾಡುತ್ತಿದೆ.

ದರ್ಶನ್ ಹಾಗೂ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಡಿಬಾಸ್ ಹೆಸರನ್ನು ಫ್ಯಾನ್ ಹಣೆ ಮೇಲೆ ಹಚ್ಚೆ ಹಾಕಿಕೊಂಡಿದ್ದು. ಕೈದಿ ಸಂಖೆ ಟ್ಯಾಟೋ ಹಾಕಿಕೊಂಡಿದ್ದರು. ಆಟೋ ಹಿಂದೆ ಬರೆಸಿದ್ದರು. ಹೀಗೆ ಅನೇಕ ವಿಧದಲ್ಲಿ ತಮ್ಮ ಅಭಿಮಾನ ಮೆರೆದಿದ್ದರು. ದರ್ಶನ್ ಬೆನ್ನಲ್ಲೆ ಇದೀಗ ಪವಿತ್ರಾ ಗೌಡ ಅವರ ಫೋಟೋ ಅನ್ನು ಫ್ಯಾನ್ಸ್ ಹಚ್ಚೆ ಹಾಕಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ, ಎ2 ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಸೂಚನೆ ಮೇರೆಗೆ ಎಲ್ಲ ಆರೋಪಿಗಳು ವಿಚಾರಣೆ ಇದ್ದಾಗ ಕೋರ್ಟ್ ಮುಂದೆ ಹಾಜರಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+