Allu Arjun Arrested: ತೆಲುಗು ನಟ ಅಲ್ಲು ಅರ್ಜುನ್ ಅರೆಸ್ಟ್
ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಇಂದು ಬಂಧಿಸಲಾಗಿದೆ. ಡಿಸೆಂಬರ್ 4ರಂದು ಪುಷ್ಪಾ-2 ಸಿನಿಮಾ ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳೆ ಕಾಲುತುಳಿತದಿಂದ ಸಾವನ್ನಪ್ಪಿದ್ದರು. ಹೈದ್ರಾಬಾದ್ ಸಂಧ್ಯಾ ಥಿಯೇಟರ್‌ಗೆ ಯಾವುದೇ ಸುರಕ್ಷತೆ ಕ್ರಮ ಇಲ್ಲದೇ ನಟ ಅಲ್ಲು ಅರ್ಜುನ್ ಬಂದಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದಕ್ಕೆ ನೇರವಾಗಿ ಅಲ್ಲು ಅರ್ಜುನ್ ಕಾರಣ ಎಂದು ಮೃತ ರೇವತಿ ಪತಿ ದೂರು ನೀಡಿದ ಬೆನ್ನಲ್ಲೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಈ ಘಟನೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಹಾಗೂ ಇನ್ನಿತರ ವಿರುದ್ಧ ದೂರು ದಾಖಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ನಟನಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಅಲ್ಲು ಅರ್ಜುನ್ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಇಂದು ಪೊಲೀಸರು ಅವರನ್ನು ಬಂಧಿಸಿದ್ದಾರೆ.

ನಟ ಥಿಯೇಟರ್ ವಿಸಿಟ್ ವೇಳೆ ಯಾವುದೇ ಸುರಕ್ಷತೆ ಕ್ರಮ ಕೈಗೊಂಡಿರಲಿಲ್ಲ. ಏಕಾಏಕಿ ನಟ ಥಿಯೇಟರ್‌ಗೆ ವಿಸಿಟ್ ಮಾಡಿದ್ದರು. ಹೀಗಾಗಿ ಕಾಲ್ತುಳಿತದಿಂದ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ. ಇದರಿಂದ ಕೆಲವು ವ್ಯಕ್ತಿಗಳು ಕಂಪ್ಲೇಂಟ್ ಕೊಟ್ಟಿದ್ದರು. ಭದ್ರತೆ ಕ್ರಮ ಇಲ್ಲದೆ ನಟ ಥಿಯೇಟರ್‌ಗೆ ಬಂದಿದ್ದೇ ತಪ್ಪು. ಹೈದ್ರಾಬಾದ್ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಬಂದಿಲ್ಲ ಅಂದರೆ ಈ ಘಟನೆ ನಡೆಯುತ್ತಿರಲಿಲ್ಲ. ಸುರಕ್ಷತೆ ಕ್ರಮ ಇಲ್ಲದೆ ಥಿಯೇಟರ್‌ಗೆ ಬಂದಿದ್ದು ತಪ್ಪು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಆಧಾರದ ಮೇಲೆ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಡಿಸೆಂಬರ್ 5 ರಂದು ವಿಶ್ವದಾದ್ಯಂತ ಪುಷ್ಪಾ-2 ರಿಲೀಸ್ ಆಗಿತ್ತು. ಈ ವೇಳೆ ಅಲ್ಲು ಅರ್ಜುನ್ ಥಿಯೇಟ್ ಬಳಿ ಹೋಗಿದ್ದರು. ಆಗ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಏಕಾಏಕಿ ಮುಂದಾಗಿದ್ದರಿಂದ ನೂಕುನುಗ್ಗಲು ಆಗಿದೆ. ಯಾವುದೇ ಮಾಹಿತಿ ನೀಡದೇ ಸುರಕ್ಷತೆ ಕ್ರಮ ಇಲ್ಲದೇ ಥಿಯೇಟರ್ ನಟ ವಿಸಿಟ್ ಮಾಡಿದ್ದು ತಪ್ಪು ಅವರು ಥಿಯೇಟರ್‌ಗೆ ಬಂದಿದ್ದರಿಂದ ಮಹಿಳೆ ಸಾವಾಗಿದೆ ಎಂದು ಮಹಿಳೆಯ ಪತಿ ದೂರು ನೀಡಿದ್ದರಿಂದ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಕೊಚ್ಚಿಗೆದ್ದ ಅಲ್ಲು ಅಭಿಮಾನಿಗಳು
ಇಂದು ಬೆಳಗ್ಗೆ ಪೊಲೀಸರು ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದಾಗ ಹೈಡ್ರಾಮವೇ ನಡೆದಿದೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಪೊಲೀಸರು ಅಲ್ಲು ಅರ್ಜುನ್ ಮನೆಗೆ ಹೋಗುತ್ತಾರೆ. ಡೈರೆಕ್ಟ್ ಬೆಡ್‌ರೂಪ್‌ಗೆ ಬಂದು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ್ದಕ್ಕೆ ಮುಂದಾಗುತ್ತಾರೆ. ಆದರೆ ಅಲ್ಲು ಅರ್ಜುನ್ ಬೆಡ್‌ರೂಮ್‌ಗೆ ಬಂದ ಪೊಲೀಸರೊಂದಿಗೆ ವಾಗ್ವಾದ ಮಾಡುತ್ತಾರೆ ಎಂದು ತಿಳಿದು ಬಂದಿದೆ. ನಂತರ ಅವರು ಕಾಫಿ ಕುಡಿದು ಮನೆಯ ಸದಸ್ಯರೊಂದಿಗೆ ಮಾತನಾಡುವ ದೃಶ್ಯ ವೈರಲ್ ಆಗಿದೆ.
ಬಳಿಕ ತನ್ನ ಮಗನನ್ನು ಅರೆಸ್ಟ್ ಮಾಡಬೇಡಿ ನನ್ನನ್ನು ಅರೆಸ್ಟ ಮಾಡಿ ಎಂದು ಅಲ್ಲು ಅರ್ಜುನ್ ತಂದೆ ಪೊಲೀಸ್ ಜೀಪ್ ಹತ್ತಿದ್ದಾರೆ. ಆಗ ಪೊಲೀಸರು ದೂರು ಇರುವುದು ನಿಮ್ಮ ಮಗನ ಮೇಲೆ ನಿಮ್ಮ ಮೇಲೆ ಅಲ್ಲ ಎಂದು ಅಲ್ಲು ಅರ್ಜುನ್ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಅಲ್ಲು ಅರ್ಜುನ್ ಫ್ಯಾನ್ಸ್ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಬಂಧಿಸಿರುವ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ. ಅಭಿಮಾನಿಗಳು ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದು ತೆಲಂಗಾಣ & ಆಂಧ್ರ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ನಟಿನಿಗೆ ಚಹಾ ಕಾಫಿ ಕುಡಿಯಲು ಬಿಟ್ಟ ಪೊಲೀಸರು
ಅರೆಸ್ಟ್ ಮಾಡಲು ಬಂದ ಪೊಲೀಸರ ಮುಂದೆ ಅಲ್ಲು ಅರ್ಜುನ್ ಕಾಫಿ ಕುಡಿಯುವ ದೃಶ್ಯ ವೈರಲ್ ಆಗಿದೆ. ಇದೇ ಸ್ಥಾನದಲ್ಲಿ ಬೇರೆ ಸಾಮಾನ್ಯ ವ್ಯಕ್ತಿಗಳು ಇದ್ದಿದ್ದರೆ ಪೊಲೀಸರು ಮೊದಲು ಬಂಧಿಸಿಕೊಂಡು ಹೋಗಿ ಬೆಂಡೆತ್ತಿರುತ್ತಿದ್ದರು. ಆದರೆ ಈ ಸ್ಥಾನದಲ್ಲಿ ನಟ ಅಲ್ಲು ಅರ್ಜುನ್ ಇದ್ದ ಕಾರಣ ಅವರನ್ನು ಕಾಫಿ ಕುಡಿಯುವವರೆಗೂ ಮೌನವಾಗಿ ನಿಂತುಕೊಂಡು ನಂತರ ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಕೂಡ ಒಂದೇ. ಪೊಲೀಸರು ಎಲ್ಲರನ್ನೂ ಒಂದೇ ರೀತಿಯಾಗಿ ನೋಡಬೇಕು ಎಂದು ಕೆಲವರು ಪೋಸ್ಟ್ ಮೂಲಕ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಪುಪ್ಟ-2 ಸಕ್ಸಸ್ ಬೆನ್ನಲ್ಲೆ ನಟ ಅಲ್ಲು ಅರ್ಜುನ್‌ಗೆ ಈ ಘಟನೆ ಅಘಾತವನ್ನುಂಟು ಮಾಡಿದೆ.












Click it and Unblock the Notifications