Darshan Thoogudeepa: ದರ್ಶನ್ ಅಭಿಮಾನಿಗಳಿಗೆ ಗುಡ್ನ್ಯೂಸ್; ರಿಲೀಸ್ ಆಗುವ ಡೇಟ್ ಯಾವಾಗ ಗೊತ್ತಾ?
ಬೆಂಗಳೂರು, ಅಕ್ಟೋಬರ್ 01: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ವುಡ್ ನಟ ದರ್ಶನ್ ಅವರ ಬಿಡುಗಡೆ ಯಾವಾಗ ಎಂದು ಜಾತಕ ಪಕ್ಷಿಯಂತೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಈಗಾಗಲೇ ದರ್ಶನ್ ಅವರ ಬಿಡುಗಡೆಗೆ ಪತ್ನಿ ಹಾಗೂ ದರ್ಶನ್ ಅವರ ಕುಟುಂಬಸ್ಥರು ಕಾನೂನು ಹೋರಾಟವನ್ನ ನಡೆಸಿದ್ರೆ, ಇತ್ತ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಬಿಡುಗಡೆಗೆ ಹರಕೆಯನ್ನ ಕಟ್ಟಿಕೊಂಡಿದ್ದಾರೆ. ಈ ನಡುವೆ ದರ್ಶನ್ ಬಿಡುಗಡೆಗೆ ಮಹೂರ್ತ ಫಿಕ್ಸ್ ಆಗಿದೆ ಎಂದು ಜ್ಯೋತಿಷಿ ಡಾ. ಲಕ್ಷ್ಮಿಕಾಂತ ಆಚಾರ್ಯ ಸ್ಟೋಟಕ ಭವಿಷ್ಯ ನುಡಿದಿದ್ದಾರೆ.

ತುಮಕೂರು ಹೊರವಲಯದ ಚಿನಗ ಗ್ರಾಮದಲ್ಲಿನ ಶ್ರೀ ಮೂಕಾಂಬಿಕಾ ದೇವಿ ಆರಾಧಕರು, ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಅವರ ಸ್ಟೋಟಕ ಹೇಳಿಕೆ ಈಗ ವೈರಲ್ ಆಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಿಂದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಅವರು ಹೇಳಿದ್ದಾರೆ. ಆಶ್ವೀಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆ ಆಗ್ತಾರೆ ಎನ್ನಲಾಗಿದೆ. 2027ಕ್ಕೆ ಶನಿ ದಶಾಬುಕ್ತಿ ಪ್ರಾರಂಭವಾಗಲಿದ್ದು, ದರ್ಶನ್ ರಾಜಕೀಯ ಜೀವನ ತುಂಬಾ ಚನ್ನಾಗಿರಲಿದೆ. ಆಶ್ವಿಜ-ಕಾರ್ತಿಕ ಮಾಸದ ಮಧ್ಯ ಭಾಗದಲ್ಲಿ ದರ್ಶನ್ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ದರ್ಶನ್ ಬಿಡುಗಡೆ ಬಗ್ಗೆ ಜ್ಯೋತಿಷ್ಯ ಹೇಳುತ್ತಿರುವಾಗಲೇ ತಾಯಿ ಮೂಕಾಂಬಿಕಾ ದೇವಿ ಬಲಗಡೆ ಹೂ ಕೊಟ್ಟಿದ್ದಾರೆ. ಆಶ್ಚರ್ಯ ಮೂಡಿಸಿದ ಮೂಕಾಂಬಿಕಾ ದೇವಿಯ ಹೂ ಪ್ರಸಾದ ದರ್ಶನ್ ಬಿಡುಗಡೆಯ ಸೂಚನೆ ಎಂದು ಹೇಳಲಾಗಿದೆ. ದೇವಿಯ ಹೂ ಪ್ರಸಾದದಿಂದ ದರ್ಶನ್ ಬಿಡುಗಡೆ ದೃಢೀಕರಿಸಿದ ಜ್ಯೋತಿಷಿಗಳು ಕಾರ್ತಿಕ ಮಾಸದ ಅಂತ್ಯದೊಳಗೆ ನಟ ದರ್ಶನ್ ಬಿಡುಗಡೆ ಆಗ್ತಾರೆ ಎಂದು ತಿಳಿಸಿದ್ದಾರೆ.
ದರ್ಶನ್ ಅವರ ಜನ್ಮ ಜಾತಕದ ಪ್ರಕಾರ ಶುಭ ಸಮಯ ಪ್ರಾರಂಭವಾಗಿದೆ. ದೇವಿಯ ಮುನ್ಸೂಚನೆಯಂತೆ ದರ್ಶನ್ ಬಿಡುಗಡೆ ಆಗ್ತಾರೆ, ದೇವಿಯ ಆಶೀರ್ವಾದ ಸಂಪೂರ್ಣ ಇದೆ. ದೇವಿಯ ಆಶೀರ್ವಾದದಿಂದ ಎಲ್ಲವೂ ಶುಭ ಆಗ್ತದೆ. ದರ್ಶನ್‌ರ ದಶಾಬುಕ್ತಿಗಳು ಅಂತ್ಯವಾಗಿ, ಶುಭ ದಶಾಬುಕ್ತಿಗಳು ಪ್ರಾರಂಭವಾಗಿವೆ ಎಂದಿದ್ದಾರೆ. ಅಭಿಮಾನಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಪೂಜಾ-ಪುನಸ್ಕಾರ ಎಲ್ಲವನ್ನೂ ನಡೆಸಿಕೊಂಡು ಬಂದಿರೊದ್ರಿಂದ ಆ ದೇವಿಯ ಅನುಗ್ರಹ ಇರುತ್ತದೆ. ಆ ದೇವಿಯ ಅನುಗ್ರಹ ಕೂಡ ಇರುವುದರಿಂದ ದರ್ಶನ್ ಬಿಡುಗಡೆ ಆಗ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ ಎಂದ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಹೇಳಿದ್ದಾರೆ.
ಅಕ್ಟೋಬರ್ 28 ರವರೆಗೆ ಅವರಿಗೆ ಜಾಮೀನು ಸಿಗಲ್ಲ
ಸ್ಯಾಂಡಲ್ ವುಡ್ ನಟ ದರ್ಶನ್ ಬಂಧನದ ಕುರಿತು ಖ್ಯಾತ ಸ್ವಾಮಿ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 2023 ನವೆಂಬರ್ ನಿಂದ 2024 ಅಕ್ಟೋಬರ್ ವರೆಗೆ ಅವರ ಕುಜ ಭುಕ್ತಿ ಇದೆ. ಅಕ್ಟೋಬರ್ ನಂತರ ನಟ ದರ್ಶನ್ ಅವರ ಜೀವನ ಚೇಂಜ್ ಆಗುತ್ತದೆ. ಅಕ್ಟೋಬರ್ 28 ರವರೆಗೆ ಅವರಿಗೆ ಜಾಮೀನು ಸಿಗಲ್ಲ. ಅಮೇಲೆ ಅವರ ಜೀವನ ಬದಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications