Ekka Film: 'ಎಕ್ಕ' ಮುತ್ತು ಪಾತ್ರದಲ್ಲಿ 5 ಶೆಡ್‌ನಲ್ಲಿ ಮಿಂಚಿದ ನಟ ಯುವ!: ಸಿನಿಮಾ ಯಾಕೆ ನೋಡಬೇಕು?
Ekka Film: 'ಯವ' ಸಿನಿಮಾ ನಂತರ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ದೊಡ್ಮನೆಯ ಮೂರನೇ ತಲೆಮಾರಿನ ನಟ ಯುವ ರಾಜ್ ಕುಮಾರ್ ಅವರ 'ಎಕ್ಕ' (Ekka Film) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಿನಿಮಾ ತಂಡ ಭರ್ಜರಿ ಪ್ರಚಾರ ಮುಂದುವರಿಸಿದೆ. ಚಿತ್ರದ 'ಬ್ಯಾಂಗಲ್ ಬಂಗಾರಿ..' ಹಾಡು ಮಿಲಿಯನ್ ಗಟ್ಟಲೇ ವಿವ್ಸ್ ಪಡೆದು ಜನರ ಗಮನ ಸೆಳೆಯುವಳ್ಳಿ ಯಶಸ್ವಿಯಾಗಿದೆ. ಸಿನಿಮಾ ಡಿಫ್ರೆಂಟ್ ಆಗಿದ್ದು, ನಿಮಗೆಲ್ಲರಿಗೂ ಇಷ್ಟವಾಗುತ್ತದೆ ಎಂದು ವಿವಿಧ ಸಂದರ್ಶನಗಳಲ್ಲಿ ನಟ ಯುವ ರಾಜ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಸಿನಿಮಾದ ಇಂಟ್ರಸ್ಟಿಂಗ್ ವಿಷಯಗಳನ್ನು ನಟ ಹಂಚಿಕೊಂಡಿದ್ದಾರೆ. ಪಾತ್ರ ರಿವೀಲ್ ಮಾಡಿದ್ದಾರೆ.
ಮೊದಲ 'ಯುವ' ಸಿನಿಮಾ ಬಳಿಕ ಹೊಸ ಬಗೆಯ ಸಿನಿಮಾ ಮಾಡಬೇಕು ಎಂದು ಹುಡುಕುತ್ತಿದ್ದಾಗ, ಸಿಕ್ಕ ಕಥೆ 'ಎಕ್ಕ'. ಕಥೆಯಲ್ಲಿ ನಾಯಕನ ಪಾತ್ರವನ್ನು ನಿರ್ದೇಶಕ ರೋಹಿತ್ ಪದಕಿ ಅವರು ವಿವರಿಸಿದ ರೀತಿ ಇಷ್ಟವಾಯಿತು. ಇಲ್ಲಿ ನಾನು 'ಮುತ್ತು' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಅವರು ತಮ್ಮ ಪಾತ್ರ ರಿವೀಲ್ ಮಾಡಿದ್ದಾರೆ. ಮೊದಲ ಸಿನಿಮಾದಲ್ಲಿ ಬಂದ ಒಂದಷ್ಟು ಸಲಹೆಗಳು, ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಿದ್ದಾರೆ. ಆಕ್ಷನ್ ಸಿನಿಮಾ ಇಷ್ಟಪಡುವ ಯುವ ಅವರು ಪ್ರೇಕ್ಷಕರಿಗೆ ಈ 'ಎಕ್ಕ' ಸಿನಿಮಾ ಇಷ್ಟವಾಗುವುದು ಪಕ್ಕ ಎಂದಿದ್ದಾರೆ.

ಸಾಕಷ್ಟು ಕಥೆಗಳನ್ನು ಕೇಳಿದ ಬಳಿಕ ಬಂದ ನಾನು ಹುಡುಕುತ್ತಿದ್ದ ಪಾತ್ರವೇ ನನಗೆ ಸಿಕ್ಕಿದೆ. ಚಿತ್ರೀಕರಣದುದ್ದಕ್ಕೂ ಹೊಸತನ್ನು ಕಲಿತಿದ್ದೇನೆ. ರೋಹಿತ್ ಪದಕಿ ಸರ್ ತುಂಬಾ ಚೆನ್ನಾಗಿ ತಿಳಿಸಿದ್ದಾರೆ. 'ಯುವ' ಸಿನಿಮಾದಿಂದ ಕ್ಯಾರೆಕ್ಟರ್ ವೇರಿಯೇಷನ್ ಬೇಕಿತ್ತು ಎಂಬ ಮಾತು ಕೇಳಿ ಬಂದಿತ್ತು. ಈ ಸಿನಿಮಾದಲ್ಲಿ ಅದೆಲ್ಲವು ಇದೆ ಎಂದಿದ್ದಾರೆ. 'ಎಕ್ಕ' ವಿವಿಧ ರೀತಿಯ ಶೇಡ್‌ಗಳಲ್ಲಿ ನಾನು 'ಎಕ್ಕ' ಕಾಣಿಸುತ್ತೇನೆ ಎನ್ನುವ ಮೂಲಕ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದಾರೆ. ಒಟ್ಟಾರೆ ಚಿತ್ರತಂಡ ಪ್ರೇಕ್ಷಕರು ಬಯಸಿದ್ದನ್ನೇ ಮಾಡಿ ಉಣಬಡಿಸಲು ಸಜ್ಜಾದಂತಿದೆ.
'ಮುತ್ತು' ಪಾತ್ರದಲ್ಲಿ ನಾನು ತಾಯಿ ಜೊತೆ, ಹುಡುಗಿ ಜೊತೆ, ಕೋಪ ಬಂದಾಗ ಅನ್ನೋದು ಸೇರಿ ಎಲ್ಲವು ಸಿನಿಮಾದಲಲ್ಲಿದೆ. ಒಟ್ಟು 05 ಶೇಡ್‌ಗಳಲ್ಲಿ ನಟಿಸಿದ್ದೇನೆ. ರೋಮ್ಯಾಂಟಿಕ್, ಫೈಟ್, ಸೆಂಟಿಮೆಂಟ್ ಹೀಗೆ ಎಲ್ಲವು ಇದರಲ್ಲಿದೆ. ಆ ಎಲ್ಲ ವರ್ಷನ್ ಗಳಲ್ಲಿ ನನ್ನ ನೀವು ತೆರೆ ಮೇಲೆ ನೋಡಬಹುದು. ಹೋಗಾಗಿ ಈ ಸಿನಿಮಾ ನಿಮಗೆ ತುಂಬಾ ಇಷ್ಟವಾಗುತ್ತದೆ ಎಂದು ಯುವ ತಿಳಿಸಿದ್ದಾರೆ.
ಮೊದಲ ಸಿನಿಮಾದ ನಂತರ ಮುಂದಿನ ಸಿನಿಮಾ ಹೇಗೆ ಆಯ್ಕೆ ಮಾಡಬೇಕು, ಯಾವುದೆಲ್ಲ ಆಯ್ಕೆ ಮಾಡಬೇಕು ಎಂಬುದು ಮನಸ್ಸಲಿತ್ತು. ಹೊಸ ಥರ ಕಥೆ ಹುಡುಕಾಟದಲ್ಲಿದ್ದೆ. ಕೊನೆಗೂ ನನ್ನಿಷ್ಟದ ಕಥೆ ಸಿನಿಮಾ ಆಗಿದೆ. ಜುಲೈ 18 ಎಕ್ಕ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ ಎಂದು ಸಿನಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಆಹ್ವಾನಿಸಿದ್ದಾರೆ.
ಹೊಸತನ್ನು ಕೊಡಬೇಕು ಎನ್ನುವುದಕ್ಕಾಗಿಯೇ ಒಂದಷ್ಟು ವರ್ಕ್ ಶಾಪ್‌ಗಳನ್ನು ಮಾಡಿದ್ದೇನೆ. ನಟನಾಗಿ ನನಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಅವರದ್ದೇ ಆದ ಒತ್ತಡ ಇರುತ್ತದೆ. ಅಭಿಮಾನಿಗಳಿಗೆ ಒಳ್ಳೆಯ ಸಿನಿಮಾ ನಿಡಬೇಕು ಎಂಬ ಒತ್ತಡ ಇದ್ದೇ ಇರುತ್ತದೆ. ಅದನ್ನು ಖುಷಿಯಿಂದ ಮಾಡಿದ್ದೇವೆ. ಅದರ ಫಲಿತಾಂಶವನ್ನು ನೀವು ತೆರೆ ಮೇಲೆ ನೋಡುತ್ತೀರಾ ಎಂದು ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಈ ಸಿನಿಮಾದಲ್ಲಿ ಯುವ ಅವರು ಕಥೆ ತಕ್ಕಂತೆ ಬ್ಲೆಂಡ್ ಆಗಿದ್ದಾರೆ. ಮೊದಲ ಸಿನಿಮಾದಿಂದ ಈ ಸಿನಿಮಾಗೆ ಮತ್ತಷ್ಟು ಮಾಗಿದ್ದಾರೆ ಎಂದನಿಸುತ್ತದೆ. ಅದೆಲ್ಲವು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ.
ಜಯಣ್ಣ, ಕೆಆರ್‌ಜಿ ಹೋಂ ಬ್ಯಾನರ್ ಇದ್ದಂತೆ
'ಎಕ್ಕ' ಹೋಮ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ನನ್ನ ಸಿನಿಮಾ ಬರಬೇಕು ಎಂಬ ಕನಸಿತ್ತು. ಅದರಂತೆ ಆಗಿದೆ. ಅಂದು ವಜ್ರೇಶ್ವರಿ ಕಂಬೈನ್ಸ್ ಇಂದು ಪಿಆರ್‌ಕೆ ಪ್ರೊಡಕ್ಷನ್. ಇಲ್ಲಿ ಹೋಮ್ ಬ್ಯಾನರ್ ರೀತಿಯಲ್ಲಿ ನನ್ನ ಕುಟುಂಬದಂತಿರುವ ಜಯಣ್ಣ ಕಂಬೈನ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಸೇರಿ ಮೂರು ಪ್ರೊಡಕ್ಷನ್‌ನಲ್ಲಿ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜಮಾರ್ ಅವರೊಂದಿಗೆ ಪ್ರೊಡಕ್ಷನ್ ಟೀಂ ನಲ್ಲಿ ಸಿನಿಮಾಗಾಗಿ ಕೆಲಸ ಮಾಡಿದ್ದು ಸಖತ್ ಖುಷಿ ಇದೆ.
ಸದ್ಯ ಸಿನಿಮಾದಲ್ಲಿ ಯುವಾಗೆ ಜೋಡಿಯಾಗಿ ಸಂಜನಾ ಆನಂದ್, ಸಂಪದಾ ಅವರು ನಟಿಸಿದ್ದಾರೆ. ನಟರಾದ ಅತುಲ್ ಕುಲಕರ್ಣಿ, ಆದಿತ್ಯ ಮತ್ತು ರಾಹುಲ್ ದೇವ್ ಶೆಟ್ಟಿ ಅವರು ನಟಿಸಿದ್ದಾರೆ. ಸಿನಿಮಾ ಏಕ ಭಾಷೆಯಲ್ಲಿ ತೆರೆಗೆ ಬರುತ್ತಿದ್ದು, ದೊಡ್ಮಣೆ ಅಭಿಮಾನಿಗಳು ಸ್ವಾಗತಕ್ಕೆ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications