Dulquer Salmaan: ದುಲ್ಕರ್ ಸಲ್ಮಾನ್‌ಗೆ ಆ ಕಾರುಗಳಿಂದ ಸಂಕಷ್ಟ, ಅಕ್ರಮವಾಗಿ ಕಾರು ತರಿಸಿಕೊಂಡ್ರಾ ನಟ?
ಸೆಲೆಬ್ರಿಟಿಗಳು ಅಂದ ಮೇಲೆ ಅವರ ಲೈಫ್‌ಸ್ಟೈಲ್ ಕೂಡ ಐಷಾರಾಮಿಯಾಗಿರುತ್ತೆ. ಅವರ ಸ್ಟೇಟಸ್‌ಗೆ ತಕ್ಕಂತೆ ದೊಡ್ಡ ಬಂಗಲೆ, ದುಬಾರಿ ಕಾರುಗಳ ಕಲೆಕ್ಷನ್ ಇಡುವುದು ಹಿಂದಿನಿಂದಲೂ ನಟರು ಮಾಡಿಕೊಂಡು ಬಂದಿದ್ದಾರೆ. ಈಗಿನ ಬಹುತೇಕ ನಟರೆಲ್ಲರೂ ಕಾರುಗಳನ್ನು ಖರೀದಿಸಿ ತಮ್ಮ ಮನೆಯ ಮುಂದೆ ನಿಲ್ಲಿಸುತ್ತಲೇ ಇರುತ್ತಾರೆ. ಇದನ್ನು ಕೆಲವರು ಕ್ರೇಜ್‌ಗೂ ಮಾಡ್ತಾರೆ. ಆದರೆ ಖ್ಯಾತ ನಟ ದುಲ್ಕರ್ ಸಲ್ಮಾನ್‌ಗೆ ಈಗ ಕಾರಿನಿಂದಲೇ ದೊಡ್ಡ ಆಪತ್ತು ಎದುರಾಗಿದೆ.
ಭೂತಾನ್ ಮೂಲಕ ಭಾರತಕ್ಕೆ ತರಲಾದ ಐಷಾರಾಮಿ ವಾಹನಗಳ ಕುರಿತು ತನಿಖೆ ನಡೆಯುತ್ತಿದ್ದು, ಇದರಲ್ಲಿ ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಹೆಸರು ಕೂಡ ಕೇಳಿಬಂದಿದೆ. ಈ ತನಿಖೆಯ ಭಾಗವಾಗಿ, ನಟ-ನಿರ್ಮಾಪಕ ದುಲ್ಕರ್ ಸಲ್ಮಾನ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ಲ್ಯಾಂಡ್ ರೋವರ್ ಡಿಫೆಂಡರ್ ಸೇರಿದಂತೆ ಎರಡು ಕಾರುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಈ ಕಾರುಗಳಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಹಾಜರುಪಡಿಸಲು ಸಮನ್ಸ್ ಕೂಡ ಜಾರಿ ಮಾಡಲಾಗಿದೆ.

ದುಬಾರಿ ಬೆಲೆಯ ವಾಹನಗಳನ್ನು ನೋಂದಣಿ ವಿನಾಯಿತಿಗಳನ್ನು ದುರ್ಬಳಕೆ ಮಾಡಿಕೊಂಡು, ಸುಂಕ ಪಾವತಿಸದೆ ವಿದೇಶದಿಂದ ಆಮದು ಮಾಡಿಕೊಳ್ಳುವ ಜಾಲವನ್ನು ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಇದರ ಭಾಗವಾಗಿ ದೇಶದಾದ್ಯಂತ ಆಪರೇಷನ್ ನಮ್‌ಖೋರ್ ನಡೆಸಲಾಗುತ್ತಿದೆ. ಕೇರಳ ಮತ್ತು ಲಕ್ಷದ್ವೀಪ ಕಸ್ಟಮ್ಸ್ ಕಮಿಷನರೇಟ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಆ ರಾಜ್ಯದಲ್ಲೇ ಸುಮಾರು 30 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳು ಪಣಂಪಿಲ್ಲಿ ನಗರದ ದುಲ್ಕರ್, ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಮಮ್ಮುಟ್ಟಿ ಅವರ ಮನೆಗಳನ್ನು ಸಹ ಪರಿಶೀಲಿಸಿದ್ದಾರೆ.
ರಾಜ್ಯಾದ್ಯಂತ ಕಳ್ಳಸಾಗಣೆ ಕಾರುಗಳ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ ನಟ ದುಲ್ಕರ್ ಸಲ್ಮಾನ್ ಅವರ ನಿವಾಸದಿಂದ ಎರಡು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಕಸ್ಟಮ್ಸ್‌ನಿಂದ ನಟ ಔಪಚಾರಿಕ ಸಮನ್ಸ್ ಸ್ವೀಕರಿಸಲಿದ್ದಾರೆ. ನಟನಿಗೆ ಸಂಬಂಧಿಸಿದ ಇನ್ನೆರಡು ಹೆಚ್ಚುವರಿ ವಾಹನಗಳು ಸಹ ಪರಿಶೀಲನೆಯಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾವ ಕಾರುಗಳು ಜಪ್ತಿ?
ಕಸ್ಟಮ್ಸ್ ಅಧಿಕಾರಿಗಳು ದುಲ್ಕರ್ ಅವರ ಎಲಂಕುಲಂ ಆಸ್ತಿಯಿಂದ ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗುದೆ. ತ್ರಿಶೂರ್‌ನಲ್ಲಿ ನೋಂದಾಯಿಸಲಾದ ಲ್ಯಾಂಡ್ ಕ್ರೂಸರ್ ಎಂಬ ವಾಹನಗಳಲ್ಲಿ ಒಂದು ಅವರ ಹೆಸರಿನಲ್ಲಿಲ್ಲ. ಹಾಗಾಗಿ ಅದರ ಮಾಲೀಕತ್ವ ಪತ್ತೆಹಚ್ಚಲು ವಿಚಾರಣೆ ನಡೆಯುತ್ತಿವೆ. ವಶಪಡಿಸಿಕೊಂಡ ಕಾರುಗಳಿಗೆ ಸಂಬಂಧಿಸಿದ ನೋಂದಣಿ ಪತ್ರಗಳು ಮತ್ತು ಇತರ ದಾಖಲೆಗಳನ್ನು ದಂಧೆಯ ಮೂಲಕ ಪಡೆದಿರುವ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ನಟನಿಗೆ ನೋಟಿಸ್ ನೀಡಲಾಗಿದೆ.
ಏನಿದು ದಂಧೆ?
ಭೂತಾನ್ ಸೇನಾ ವಾಹನಗಳನ್ನು ಭಾರತಕ್ಕೆ ಸಾಗಿಸಿ, ನಕಲಿ ದಾಖಲೆಗಳೊಂದಿಗೆ ಮರು ನೋಂದಣಿ ಮಾಡಿ, ಮಧ್ಯವರ್ತಿಗಳ ಮೂಲಕ ಖರೀದಿದಾರರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಆಪರೇಷನ್ ನಮ್‌ಖೋರ್ ತನಿಖೆ ಮಾಡುತ್ತಿದೆ. ಇದರ ಭಾಗವಾಗಿ ಹಲವರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications