Bigg Boss: ಚೈತ್ರಾಗೆ ಅಣ್ಣ ಅನ್ಬೇಡಿ ಎಂದ ಡ್ರೋನ್ ಪ್ರತಾಪ್; ತನಿಷಾ ನೋಡಿ ಚುಟು ಚುಟು ಎಂದ ಹನುಮಂತ
ಬಿಗ್ ಬಾಸ್ 11ನೇ ಆವೃತ್ತಿಯ ಆಟ ಇನ್ನು ಕೆಲವೇ ವಾರಗಳಲ್ಲಿ ಮುಗಿಯಲಿದ್ದು ಸದ್ಯ ಮನೆಯಲ್ಲಿ 12 ಜನ ಉಳಿದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ಆಟ ರೋಚಕತೆ ಪಡೆಯುತ್ತಿದ್ದು ಸ್ಪರ್ಧಿಗಳು ಕೂಡ ಜನ ಮನ ಗೆಲ್ಲಲು ಮನೆಯಲ್ಲಿ ಯೋಜನೆಯೊಂದಿಗೆ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಕೂಡ ಮನೆಯ ಸದಸ್ಯರ ಜೊತೆ ಮೈಂಡ್ ಗೇಮ್ ಆಡುತ್ತಿದ್ದು ಯಾರು ಎಷ್ಟು ಮಾನಸಿಕವಾಗಿ ಬಲವಾಗಿದ್ದಾರೆ ಎಂದು ಪರೀಕ್ಷಿಸಲಾಗುತ್ತಿದೆ. ಈ ಬೆನ್ನಲ್ಲೇ ಬಿಗ್ ಬಾಸ್ 10ರ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿಯಾಗಿದ್ದಾರೆ.
ಬಿಗ್ ಬಾಸ್ 10ನೇ ಆವೃತ್ತಿಯ ಸ್ಪರ್ಧಿಗಳಾದ ತನಿಷಾ ಕುಪ್ಪಂಡ, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಸ್ಪರ್ಧಿಗಳ ಜೊತೆ ಸಮಯ ಕಳೆದಿದ್ದಾರೆ. ಸೋಮವಾರ ಈ ಎಪಿಸೋಡ್ ಪ್ರಸಾರವಾಗಲಿದ್ದು ಕಲರ್ಸ್ ಕನ್ನಡ ಈಗಾಗಲೇ ಪ್ರೋಮೊ ಬಿಡುಗಡೆ ಮಾಡಿದೆ.

ವರ್ತೂರು ಸಂತೋಷ್ ಬೀನ್ ಬ್ಯಾಗ್ ಹಿಡಿದುಕೊಂಡು ಮನೆಯೊಳಗೆ ಪ್ರವೇಶಿಸಿದ್ದಾರೆ. ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಮತ್ತು ಡ್ರೋನ್ ಪ್ರತಾಪ್‌ರನ್ನು ನೋಡಿ ಸ್ಪರ್ಧಿಗಳು ಖುಷಿಯಾಗಿದ್ದಾರೆ.
ಹನುಮಂತು - ತುಕಾಲಿ ಸಂತೋಷ್ ಕಾಮಿಡಿ
ತುಕಾಲಿ ಸಂತೋಷ್ ಮನೆಯೊಳಗೆ ಕಾಲಿಡುತ್ತಿದ್ದಂತೆ ಹನುಮಂತ ಸಖತ್ ಖುಷಿಯಾಗಿದ್ದು ಮಾವ ಮಾವ ಎಂದು ಮಾತನಾಡಿಸಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್, ಮಾವ ಮಾವ ಅಂತಾನೆ ಮಾನಸನ್ನ ಮನೆಗೆ ಕಳಿಸ್ಬಿಟ್ಟಲ್ಲೋ ಎಂದು ಕಾಲೆಳೆದಿದ್ದಾರೆ. ಕಳೆದ ಸೀಸನ್‌ನ ಜೋಡೆತ್ತು ಎಂದೇ ತುಕಾಲಿ ಸಂತೋಷ್ ಮತ್ತು ವರ್ತೂರ್ ಸಂತೋಷ್‌ರನ್ನು ಕರೆಯಲಾಗುತ್ತಿತ್ತು. ವರ್ತೂರು ಸಂತೋಷ್ ಮನೆಯೊಳಗೆ ಬರುತ್ತಿದ್ದಂತೆ ತುಕಾಲಿ ಸಂತೋಷ್ ಸಖತ್ ಖುಷಿಯಾದರು.
ಅಣ್ಣ ಅನ್ನಬೇಡಿ ಎಂದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ಸ್ಪರ್ಧಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಪದೇ ಪದೇ ಅಣ್ಣ ಎಂದು ಕರೆದರು. ನನ್ನನ್ನು ಅಣ್ಣ ಅನ್ನಬೇಡಿ ಅಕ್ಕ ಎಂದು ಪ್ರತಾಪ್ ಚೈತ್ರಾ ಕುಂದಾಪುರ ಬಳಿ ಮನವಿ ಮಾಡಿಕೊಂಡರು.
ತನಿಷಾ ಕುಪ್ಪಂಡ ಜೊತೆ ಹನುಮಂತು ಡ್ಯಾನ್ಸ್ ಮಾಡಿದ್ದು, ಚುಟು ಚುಟು ಅಂತೈತಿ ಎಂದು ಹಾಡಿದ್ದಾರೆ. ಪ್ರೋಮೋ ನೋಡಿದ ಬಿಗ್ ಬಾಸ್ ವೀಕ್ಷಕರು ಸಖತ್ ಖುಷಿಯಾಗಿದ್ದು ಸೋಮವಾರದ ಸಂಚಿಕೆಗಾಗಿ ಕಾಯುತ್ತಿದ್ದಾರೆ.
ಸೀಸನ್ ಮುಗಿಯಲು ದಿನ ಹತ್ತಿರವಾಗುತ್ತಿದ್ದಂತೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಹೊಸ ಹೊಸ ಸವಾಲನ್ನು ನೀಡುತ್ತಿದ್ದಾರೆ. ಭಾನುವಾರ ಇಬ್ಬರನ್ನು ಎಲಿಮಿನೇಷನ್ ಮಾಡಲಾಗುತ್ತದೆ ಎಂದೇ ನಿರೀಕ್ಷೆ ಮಾಡಲಾಗಿತ್ತಾದರೂ, ಐಶ್ವರ್ಯ ಸಿಂಧೋಗಿ ಅವರಿಗೆ ಜೀವದಾನ ಸಿಕ್ಕಿದ್ದು ಮನೆಯೊಳಗೆ ಉಳಿದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಕನ್ಫೆಷನ್ ರೂಂನಿಂದಲೇ ಸ್ಪರ್ಧಿಗಳು ತಮ್ಮ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಎನ್ನುವುದನ್ನು ಕೇಳಿಸಿಕೊಂಡು ಕಣ್ಣೀರಾಕಿದ್ದಾರೆ.












Click it and Unblock the Notifications