Shiva Rajkumar: 'ನೀನು ಒಬ್ಬ..ನೀನೇ ಒಬ್ಬ':ಅಪ್ಪುಗೆ ಶಿವಣ್ಣ ಭಾವುಕ ವಿಶ್‌

ಇಂದು ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಮೆಚ್ಚಿನ ಅಪ್ಪು, ಕನ್ನಡ ಚಿತ್ರರಂಗದ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಅವರ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕರ್ನಾಟಕದಾದ್ಯಂತ ಪುನೀತ್ ರಾಜ್‌ಕುಮಾರ್‌ ಹುಟ್ಟುಹಬ್ಬದ ಸಂಭ್ರಮ ಜೋರಾಗಿದ್ದು, ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಈ ವಿಶೇಷ ದಿನವನ್ನು ಆಚರಿಸುತ್ತಿದ್ದಾರೆ.

ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪುನೀತ್ ರಾಜ್‌ಕುಮಾರ್‌ ಹುಟ್ಟು ಹಬ್ಬಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಪ್ರತಿಯೊಬ್ಬರು ಕೂಡ ಪ್ರೀತಿಯಿಂದ ಶುಭಾಶಯ ತಿಳಿಸುತ್ತಿದ್ದು, ಅಪ್ಪು ಪ್ರೀತಿಯ ಅಣ್ಣ, ಕನ್ನಡಿಗರ ಪಾಲಿನ ಪ್ರೀತಿಯ ಶಿವಣ್ಣ ಭಾವುಕರಾಗಿ ಅಪ್ಪು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

Dr Shivarajkumar Convey Special Birthday Wishes to Puneeth Rajkumar

'ಹುಟ್ಟು ಹಬ್ಬಕ್ಕೆ ವರುಷಗಳು ಬದಲಾದರು ವ್ಯಕ್ತಿ ಹಾಗೆ ಉಳಿಯುವುದು ತುಂಬಾ ಅಪರೂಪ. ಅಂತಹ ಅಪೂರಪದಲ್ಲಿ ನೀನು ಒಬ್ಬ, ನೀನೇ ಒಬ್ಬ. ಮಗುವಲ್ಲಿ ನಿನ್ನ ಎತ್ತಿ ಮುದ್ದಾಡುವಾಗ ಇದ್ದ ನಿನ್ನ ನಗು ಇಂದಿಗೂ ಮಾಸದೆ ನನ್ನಲಿ ಹಾಗೆ ಉಳಿದಿದೆ. ಇಡೀ ಪ್ರಪಂಚಕ್ಕೆ ಇಂದು ನಿನ್ನ ಐವತ್ತನೇ ಹುಟ್ಟು ಹಬ್ಬ. ನನಗೆ ಈಗಲೂ ಮೊನ್ನೆ ಅಷ್ಟೇ ಮೊದಲ ಹುಟ್ಟುಹಬ್ಬ ಆಚರಿಸಿದಷ್ಟೇ ಸಂಭ್ರಮ. ಇನ್ನು ನೂರು ವರ್ಷವಾದರೂ ಅದು ಬದಲಾಗದು.

ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು.. ನಿನ್ನ ಶಿವಣ್ಣ' ಎಂದು ಶಿವರಾಜ್‌ ಕುಮಾರ್‌ ಶುಭಾಶಯ ಕೋರಿದ್ದಾರೆ.

ಅಪ್ಪು ಸ್ಮಾರಕದಲ್ಲಿ ಅಭಿಮಾನಿಗಳ ಸಾಗರ

ಇನ್ನು ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ. ನಿನ್ನೆ ತಡರಾತ್ರಿಯಿಂದಲೂ ಅಭಿಮಾನಿಗಳು ಆಗಮಿಸುತ್ತಿದ್ದು, ಇಂದು ಗಣ್ಯರು ಹಾಗೂ ಅಪ್ಪು ಕುಟುಂಬದವರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

Dr Shivarajkumar Convey Special Birthday Wishes to Puneeth Rajkumar

ಅಶ್ವಿನಿ ಪುನೀತ್ ರಾಜ್‌ಕುಮಾರ್ ಇಬ್ಬರು ಪುತ್ರಿಯರ ಜೊತೆ ಅಪ್ಪು ಸ್ಮಾರಕಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಘವೇಂದ್ರ ರಾಜ್‌ಕುಮಾರ್‌ ಅವರು, ಪತ್ನಿ ಮಂಗಳ ಜೊತೆಗೆ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಹಾಗೂ ನಟ ಯುವ ರಾಜ್‌ಕುಮಾರ್ ಸಹ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದರು.

ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಅನ್ನದಾಸೋಹ, ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ಐದು ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಿಶೇಷವಾಗಿ 25 ಸಾವಿರ ನಂದಿನಿ ಮಜ್ಜಿಗೆ ಪ್ಯಾಕೆಟ್, 10 ಸಾವಿರ ನಂದಿನಿ ಪೇಡ ಅಪ್ಪು ಹುಟ್ಟಿದ ಹಬ್ಬದ ಅಂಗವಾಗಿ ಹಂಚಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+