ಮಜಾ ಟಾಕೀಸ್‌ನಲ್ಲಿ ಡಬಲ್ ಮೀನಿಂಗ್ ಜಾಸ್ತಿ ಆಯ್ತು.. ಪ್ಲೇವರ್ ಕಮ್ಮಿ ಆಯ್ತು: ತರಂಗ ವಿಶ್ವ!
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಕಾಮಿಡಿ & ಟಾಕ್ ಶೋ ಮಜಾ ಟಾಕೀಸ್ ಶೋ ಇತ್ತೀಚೆಗೆ ಮುಕ್ತಾಯವಾಗಿದೆ. ಮಜಾ ಟಾಕೀಸ್ ಶೋ ಮುಕ್ತಾಯವಾಗಿದ್ದು ಯಾಕೆ ಏನ್ನುವ ಕುತೂಹಲ ಹಾಗೂ ಬೇಸರ ಈ ಶೋ ನೋಡುತ್ತಿದ್ದ ವೀಕ್ಷಕರಿಗೆ ಇದೆ. ಇದೀಗ ನಿರೀಕ್ಷೆಗಿಂತಯೇ ಮೊದಲೇ ಮುಗಿದಿರುವ ಈ ಶೋನ ಬಗ್ಗೆ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ಈ ಶೋನಲ್ಲಿ ಮುತ್ತುಮಣಿಯಾಗಿ ಫೇಮಸ್ ಆಗಿದ್ದ ತರಂಗ ವಿಶ್ವ ಅವರು ಸಹ ಒಬ್ಬರು. ನಾನು ಮಜಾ ಟಾಕೀಸ್‌ನಲ್ಲಿ ಇನ್ಮುಂದೆ ಮುತ್ತುಮಣಿಯಾಗಿ ಕಾಣಿಸಿಕೊಳ್ಳಲ್ಲ ಅಂತ ಅವರು ಈಚೆಗೆ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಅವರು ಯಾವ ಕಾರಣಕ್ಕೆ ಮಜಾ ಟಾಕೀಸ್ ಬಿಟ್ಟರ ಹಾಗೂ ಮಜಾ ಟಾಕೀಸ್‌ನಲ್ಲಿ ಯಾವ ರೀತಿಯ ಬೆಳವಣಿಗೆಗಳು ನಡೆದಿವೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.
ಮಜಾ ಟಾಕೀಸ್ ನಿರೀಕ್ಷೆಗೂ ಮೊದಲೇ ಮುಕ್ತಾಯವಾಗಿದೆ. ಹಲವು ಘಟಾನುಘಟಿ ಕಲಾವಿದರು ಈ ಶೋನಲ್ಲಿ ಇದ್ದರು. ಈ ಶೋ ಕನ್ನಡದ ಕಾಮಿಡಿ ಶೋಗಳಲ್ಲಿ ಯಾವುದೇ ಡಬಲ್ ಮೀನಿಂಗ್ ಇಲ್ಲದೆ ಮೂಡಿ ಬರುತ್ತಿತ್ತು. ನಟ & ಪ್ರೊಡ್ಯೂಸರ್ ಸೃಜನ್ ಲೋಕೇಶ್ ಮತ್ತು ತರಂಗ ವಿಶ್ವ ಅವರ ಮಧ್ಯೆ ವೈಮನಸ್ಸು ಮೂಡಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಅವರು ಶೋನಿಂದ ಹೊರ ಬಂದರೂ ಅಂತಲೂ ಹೇಳಲಾಗುತ್ತಿತ್ತು. ಆದರೆ, ಕೊನೆಗೂ ಅವರು ಶೋನಿಂದ ಯಾಕೆ ಹೊರಗೆ ಬಂದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

ಮಜಾ ಟಾಕೀಸ್ ಶೋ ಮುಕ್ತಾಯವಾಗಿದೆ. ಈ ಶೋ ಯಾಕೆ ಬೇಕ ಕ್ಲೋಸ್ ಆಯ್ತು ಹಾಗೂ ವಿಶ್ವ ಅವರು ಇದರಿಂದ ಯಾಕೆ ಹೊರ ನಡೆದರು ಎನ್ನುವ ಬಗ್ಗೆ ಫಿಲ್ಲಿಬೀಟ್ ಕನ್ನಡದೊಂದಿಗೆ ಮಾತನಾಡಿದ್ದಾರೆ.
ಈ ಸೀಸನ್‌ನಲ್ಲಿ ಮಜಾ ಟಾಕೀಸ್ ಎನ್ನುವುದು ಎಲ್ಲರೂ ಇದ್ದರೆ ಆ ಹಳೆಯ ಖುಷಿ ಅಥವಾ ಪ್ರಾಕಾರ ಸಿಗಲು ಸಾಧ್ಯ ಅಂತ ನಾನು ಮೊದಲೇ ಹೇಳಿದ್ದೆ. ಆದರೆ ಅದು ಚಾನಲ್ ಹಾಗೂ ಸೃಜನ್ ಅವರ ನಡುವಿನ ಸಂಪರ್ಕ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಎಲ್ಲರೂ ಇರಬೇಕಿತ್ತು ಅಂತ ನಾನು ಹೇಳಿದ್ದೆ ಅಂತ ತರಂಗ ವಿಶ್ವ ಅವರು ಹೇಳಿದ್ದಾರೆ.
ಮಜಾಭಾರತ, ಗಿಚ್ಚಿಗಿಲಿಗಿಲಿ ಅವರು ಈ ಕಾರ್ಯಕ್ರಮದಲ್ಲಿ ಇದ್ದಾರೆ. ಆದರೆ, ಈ ಕಲಾವಿದರು ಮಹಾ ಟಾಕೀಸ್‌ಗೆ ಹೊಂದಾಣಿಕೆಯಾಗುತ್ತಾರೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಅವರು ಒಳ್ಳೆಯ ಕಲಾವಿದರು ನಿಜ ಆದರೆ, ಇದನ್ನ ಗಿಚ್ಚಿಗಿಲಿಗಿಲಿಯಾಗಿ ತೆಗೆದುಕೊಳ್ಳಬೇಕಾ ಇಲ್ಲ ಮಜಾ ಟಾಕೀಸ್ ಆಗಿ ತೆಗೆದುಕೊಳ್ಳಬೇಕಾ ಎನ್ನುವ ಗೊಂದಲ ನೋಡುವ ಪ್ರೇಕ್ಷಕರಲ್ಲಿ ಎದುರಾಗುತ್ತೆ.
ನಾನು ಹೊರಗಡೆ ಹೋದಾಗ ಹಾಗೂ ನನ್ನಲ್ಲಿ ಮೂಡಿದ ಪ್ರಶ್ನೆಯೂ ಅದೇ. ನಿಧಾನವಾಗಿ ಸರಿ ಹೋಗಬಹುದು ಅನಿಸ್ತು. ಡಬಲ್ ಮೀನಿಂಗ್ ಸ್ಕ್ರಿಪ್ಟ್ ಪ್ಲೇ ಆಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಈ ಬಾರಿಯ ಎಪಿಸೋಡ್‌ನಲ್ಲಿ ಮಜಾ ಟಾಕೀಸ್ ಪ್ರಾಕಾರ ಇಲ್ಲ ಅಂತ ಅನಿಸ್ತು. ಒಂದು ದುಡ್ಡಿನಲ್ಲಿ ಖುಷಿಯಾಗಿ ಇರಬೇಕು ಇಲ್ಲ ಕೆಲಸದಲ್ಲಿ ಖುಷಿಯಾಗಿ ಇರಬೇಕು. ಈ ಬಾರಿ ಎರಡರಲ್ಲಿ ಈ ಸಲ ಮಿಸ್ ಹೊಡಿತಿದೆ ಅಂತ ಅನಿಸಲು ಶುರುವಾಯ್ತು ಎಂದು ವಿಶ್ವ ಅವರು ಹೇಳಿಕೊಂಡಿದ್ದಾರೆ.












Click it and Unblock the Notifications