Dr.Rajkumar: ಡಾ.ರಾಜ್‌ಕುಮಾರ್ ಜೀವನದಲ್ಲಿ ಈಡೇರದ ಮಹದಾಸೆ ಯಾವ್ದು ಗೊತ್ತಾ?
Dr.Rajkumar: ಎಂಥವರಿಗೂ ತಾವು ಹೀಗೆ ಇರಬೇಕು ಎಂಬ ಆಸೆ-ಆಕಾಂಕ್ಷೆಗಳು ಇರುತ್ತವೆ. ಅದರಲ್ಲೂ ಬಹುತೇಕ ಕನಸುಗಳು ನನಸಾಗಿದರೆ, ಇನ್ನೂ ಕೆಲವು ಬರೀ ಕನಸುಗಳಾಗಿಯೇ ಉಳಿದುಬಿಡುತ್ತವೆ. ಹಾಗೆಯೇ ನಟ ಡಾ.ರಾಜ್‌ಕುಮಾರ್ ಜೀವನದಲ್ಲೂ ಕೂಡ ಮಹದಾಸೆಯೊಂದು ಈಡೇರಲೇ ಇಲ್ಲ. ಹಾಗಾದರೆ ಆ ಆಸೆ ಯಾವುದು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿ ಬಹುತೇಕ ಮಂದಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಈ ಮೂಲಕ ರೈತ ಈ ದೇಶದ ಬೆನ್ನೆಲುಬು ಎನ್ನಲಾಗುತ್ತಿದೆ. ಬೆನ್ನೆಲುಬು ಇಲ್ಲದಿದ್ದರೆ, ಒಬ್ಬ ಮನುಷ್ಯ ಹೇಗೆ ಸ್ಥಿರವಾಗಿರುವುದಿಲ್ಲವೋ, ಹಾಗೆಯೇ ರೈತ ಇಲ್ಲದಿದ್ದರೆ ಅನ್ನ ಸಿಗದಂತಾಗುತ್ತದೆ. ಅದೆಷ್ಟೇ ತಂತ್ರಜ್ಞಾನ ಬಂದರೂ ಕೂಡ, ರೈತನಿಗಿಂತ ಆರೋಗ್ಯಕರ ಆಹಾರ ಕೊಡಲು ಸಾಧ್ಯವೆ ಇಲ್ಲ.

ಇನ್ನೂ ಹಲವು ಸಿನಿಮಾ ನಟ, ಕ್ರಿಕೆಟಿಗರು ಕೂಡ ಕೃಷಿಯಲ್ಲಿ ತೊಡಗಿರುವ ಉದಾಹರಣೆಗಳಿವೆ. ಆದರೆ ಅಣ್ಣವ್ರು ಕಂಡಿದ್ದ ಕೃಷಿ ಮಾಡುವ ಕನಸ್ಸು ಮಾತ್ರ ಈಡೇರದಂತಾಯಿತು. ಇದಕ್ಕೆ ಪ್ರಮುಖ ಕಾರಣವೂ ಇಲ್ಲಿದೆ ನೋಡಿ. ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್‌ಕುಮಾರ್ ವರನಟ ಎಂದೇ ಪ್ರಖ್ಯಾತಿ ಪಡೆದಿದ್ದರು.
ಅಲ್ಲದೆ ಕುಟುಂಬ ಕುಳಿತು ನೋಡುವಂತಹ ತುಂಬಾ ಸೂಪರ್ ಹಿಟ್ ಸಿನಿಮಾಗಳನ್ನು ಕೂಡ ಕೊಟ್ಟಿದ್ದಾರೆ. ಕೊನೆಯವರೆಗೂ ಕನ್ನಡ ಪ್ರೇಮ ಮೆರೆದ ಡಾ.ರಾಜ್‌ಕುಮಾರ್ ಕನ್ನಡ ಸಿನಿಮಾ ಇಂಡಷ್ಟ್ರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ಡಾ.ರಾಜ್‌ಕುಮಾರ್‌ಗೆ ಬರೀ ರಾಜ್ಯ ಅಲ್ಲದೆ, ಹೊರರಾಜ್ಯ, ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗವಿದೆ. ಇಷ್ಟರ ಮಟ್ಟಿಗೆ ಪ್ರಖ್ಯಾತಿಯಾಗಿದ್ದರೂ ಅವರ ಕೃಷಿ ಮಾಡುವ ಆಸೆ ಮಾತ್ರ ಹಾಗೆ ಉಳಿದುಬಿಟ್ಟಿತು.
ಹಳ್ಳಿಯ ಹಿನ್ನೆಲೆಯಿಂದ ಬಂದಂತಹ ಡಾ.ರಾಜ್‌ಕುಮಾರ್, ನಾಟಕಗಳಲ್ಲಿ ಪಾತ್ರ ಮಾಡುವ ಮೂಲಕ ಬಣ್ಣ ಹಚ್ಚಿದವರಾಗಿದ್ದಾರೆ. ನಾಟಕವಿಲ್ಲದ ಸಮಯದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು, ದನ ಕಾಯುತ್ತಿದ್ದರು. ಕೃಷಿಯ ಬಗ್ಗೆ ಡಾ.ರಾಜ್‌ಕುಮಾರ್ ಅಪಾರ ಆಸಕ್ತಿ ಹೊಂದಿದ್ದರಾಗಿದ್ದರು. ಆದರೆ, ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ಹೆಚ್ಚೆಚ್ಚು ಅವಕಾಶಗಳು ಬರತೊಡಗಿದವು. ಆದ್ದರಿಂದ ಬಳಿಕ ಕೃಷಿ ಮಾಡಲು ಸಾಧ್ಯವೇ ಆಗಿರಲಿಲ್ಲ.
ಡಾ.ರಾಜ್‌ಕುಮಾರ್ ಚಿಕ್ಕ ವಯಸ್ಸಿನ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದು, ಚಿಕ್ಕವನಿದ್ದಾಗ ಕಾಡಿಗೆ ಹೋಗುತ್ತಿದ್ದೆ. ಕುರಿ ಮರಿ, ಹಸುಗಳನ್ನು ಮೇಯಿಸುತ್ತಿದ್ದೆ. ನನಗೆ ಸಿನಿಮಾ ವೃತ್ತಿ ಬಿಟ್ಟು ಅತೀ ಹೆಚ್ಚು ತೃಪ್ತಿ ನೀಡುವ ಕೆಲಸ ಅಂದರೆ ಅದು ಕೃಷಿ ಮಾತ್ರ ಅಂತಾ ಹೇಳಿದ್ದರು. ಅಲ್ಲದೆ, ಹೀಗೆ ಹೇಳಿರುವ ಅವರ ವಿಡಿಯೋಗಳು ಸಹ ಹುಡುಕಿದರೆ ಖಂಡಿತ ಬೇಕಾದಷ್ಟು ಸಿಗುತ್ತವೆ.
ಇನ್ನು ಅವರು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಕೂಡ ಸ್ವಲ್ಪನೂ ಅಹಂ ಇರಲಿಲ್ಲ. ಯಾರೇ ಮನೆಗೆ ಬಂದರೂ ಮೊದಲು ಊಟ ಮಾಡಿ ಎಂದು ಹೇಳುತ್ತಿದ್ದರು. ಬಳಿಕ ಅವರು ಬಂದಂತಹ ಕೆಸಲಗಳ ಬಗ್ಗೆ ಸಮಾಧಾನದಿಂದ ವಿಚಾರ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಸರಳತೆಯಿಂದ ರಾಜ್‌ಕುಮಾರ್ ಜೀವನ ಸಾಗಿಸಿದ್ದರು. ಅದಕ್ಕೆ ಈಗಲೂ ಅವರ ಮನೆ ದೊಡ್ಮನೆ ಅಂತಲೇ ಹೆಸರುವಾಸಿಯಾಗಿದೆ.












Click it and Unblock the Notifications