ಅನುಶ್ರೀ ಮದುವೆಗೆ ತರುಣ್, ಪ್ರೇಮಾ, ನಿಶ್ವಿಕಾ ಕೊಡುವ ಗಿಫ್ಟ್ ಏನು ಗೊತ್ತಾ?: ಮಹಾನಟಿ ಶೋ ನಲ್ಲಿ ಬಿಚ್ಚಿಟ್ಟ ಗಗನಾ
ಕರಾವಳಿ ಚೆಲುವೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸದ್ಯ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ವೈರಲ್ ಆಗುತ್ತಿದ್ದು, ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಅನುಶ್ರೀ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಆದರೆ, ಈ ಮಾತಿನ ಮಲ್ಲಿಯನ್ನ ಕೈ ಹಿಡಿಯುವ ಹುಡುಗ ಯಾರು ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ.
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ವರ್ಷಾಂತ್ಯದಲ್ಲಿ ಮದುವೆ ಕುರಿತು ಗುಡ್ ನ್ಯೂಸ್ ನೀಡಿದ್ದಾರೆ. ಅನುಶ್ರೀ ಅವರು ಇಷ್ಟು ವರ್ಷ ಯಾಕೆ ಮದುವೆಯಾಗಿಲ್ಲ ಎಂಬುದು ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಏಕೆಂದರೆ ಅನುಶ್ರೀ ಅವರಿಗೆ ಮದುವೆ ವಯಸ್ಸು ದಾಟುತ್ತಿದೆ. ಆಂಕರ್ ಅನುಶ್ರೀ ಅವರು ಇದೇ ತಿಂಗಳು 28ಕ್ಕೆ ಬೆಂಗಳೂರಿನಲ್ಲಿ ಅನುಶ್ರೀ ಅದ್ದೂರಿಯಾಗಿ ಮದುವೆ ನಡೆಯಲಿದೆ.

ಅನುಶ್ರೀ ಮದುವೆ ಆಗುತ್ತಿರೋ ಹುಡುಗ ರೋಷನ್, ಅವರು ಐಟಿ ಉದ್ಯೋಗಿಯಾಗಿದ್ದಾರೆ. ಇನ್ನು ರೋಷನ್ ರಾಜ್ ಕುಮಾರ್ ಕುಟುಂಬಕ್ಕೆ ಆಪ್ತರು ಕೂಡ ಹೌದಂತೆ. ನಟ ಪುನೀತ್ ರಾಜ್ ಕುಮಾರ್ ಅವರಿಂದ ಅನುಶ್ರೀ ಅನವರಿಗೆ ರೋಷನ್ ಪರಿಚಯವಾಗಿದ್ದು, ಸ್ನೇಹ, ಪ್ರೀತಿಯಾಗಿ ಇದೀಗ ಮದುವೆಯಾಗಲಿದ್ದಾರೆ. ಅನುಶ್ರೀ ಹಾಗೂ ರೋಷನ್ ಒಟ್ಟಿಗೋ ಇರೋ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ತಮ್ಮ ಬದುಕಿ ಸೂಟ್ ಆಗುತ್ತಿರೋ ರೋಷನ್ ಕೈ ಹಿಡಿಯಲು ಅನುಶ್ರೀ ಸಮ್ಮತಿ ಸೂಚಿಸಿದ್ದು ಇದು ಲವ್ ಕಂ ಅರೆಂಜ್ ಮ್ಯಾರೇಜ್ ಎಂದು ಹೇಳಲಾಗಿದೆ.
ಇದೀಗ ಮಹಾನಟಿ ವೇದಿಕೆಯಲ್ಲಿ ಪದೇ ಪದೇ ತರುಣ್ ಅನುಶ್ರೀ ಅವರನ್ನ ರೇಗಿಸ್ತಿದ್ದಾರೆ. ಪದೇ ಪದೇ ಮದುವೆ ವಿಚಾರ ಪ್ರಸ್ತಾಪಿಸ್ತಿದ್ದಾರೆ. ಅನುಶ್ರೀ ಲವ್ ಪ್ರಪೋಸ್ ಮಾಡಿದ್ರೇ ಹೆಂಗಿರುತ್ತೆ? ಆ ಮೂಮೆಂಟ್ ಮಹಾನಟಿ ವೇದಿಕೆ ಮೇಲೆ ಕ್ರಿಯೇಟ್ ಮಾಡಲಾಗಿದೆ. ಇದುವರೆಗೂ ನನ್ನ ಜೀವನದಲ್ಲಿ ಅರ್ಧ ಚಂದ್ರ ಇತ್ತು, ಪೂರ್ಣ ಚಂದ್ರನಾಗಿ ನೀ ಬೇಗ ಬಾ ಎಂದು ಪ್ರೀತಿನ ಹೇಳಿ ಬಿಟ್ಟಿದ್ದಾರೆ. ಇದೀಗ ಅನುಶ್ರೀ ಮದುವೆಯಾದರೇ ಯಾರು ಏನೇನು ಗಿಫ್ಟ್ ಕೊಡುತ್ತಾರೆ ಎಂದ ಬಗ್ಗೆಯೂ ಮಹಾನಟಿ ವೇದಿಕೆಯಲ್ಲಿ ಚರ್ಚೆಯಾಗಿದೆ.
ಮಹಾನಟಿ ವೇದಿಕೆಯ ಮೇಲೆ ಆಹಾ.. ನಮ್ಮ ಅಕ್ಕನ ಮದುವೆಯಂತೆ ಎಂದು ಗಗನಾ ಹೇಳಿದ್ದಾರೆ. ಈ ವೇಳೆ ಆಂಕರ್ ಅನುಶ್ರೀ ನಾಚಿ ನೀರಾಗಿದ್ದಾರೆ. ಇನ್ನೂ ಮಹಾನಟಿ ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲಾರು ಅನುಶ್ರೀಗೆ ರೇಗಿಸಿದ್ದಾರೆ. ಇನ್ನೂ ಗಗನಾ ಅನುಶ್ರೀ ಅಕ್ಕನ ಮದುವೆಗೆ ಪ್ರೇಮಾ ಮೇಡಂ 3.5 ಕೊಡ್ತಾರೆ ತರುಣ್ ಸುಧೀರ್ ಸರ್ 501 ಹಾಗೂ ನಿಶ್ವಿಕಾ ಮೇಡಂ ನಾಯಿ ಮರಿ ಗಿಫ್ಟ್ ಕೊಡುತ್ತಾರೆ ಎಂದು ರೇಗಿಸಿದ್ದಾರೆ. ಗಗನಾ ಮಾತಿಗೆ ಮಹಾನಟಿ ವೇದಿಕೆಯಲ್ಲಿ ತರುಣ್ , ಪ್ರೇಮ್ ಹಾಗೂ ನಿಶ್ವಿಕಾ ಸಿಕ್ಕಾಪಟ್ಟೆ ನಕ್ಕಿದ್ದಾರೆ.












Click it and Unblock the Notifications