Vinay Rajkumar-ಗಡ್ಡ ಬಿಟ್ಟಿದ್ದೇಕೆ.? ವಿನಯ್ ರಾಜ್‌ಕುಮಾರ್ ಹೇಳಿದ್ದೇನು.?
Vinay Rajkumar: ಡಾ.ರಾಜ್‌ಕುಮಾರ್ ಕುಟುಂಬದ ಕುಡಿ ನಟ ವಿನಯ್ ರಾಜ್‌ಕುಮಾರ್ ನಟನೆಯ ಪೆಪೆ ಸಿನಿಮಾ ಇಂದು (ಆಗಸ್ಟ್ 30) ತೆರೆಕಂಡಿದ್ದು, ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇನ್ನು ಈ ಸಿನಿಮಾಗಾಗಿಯೇ ವಿನಯ್ ರಾಜ್‌ಕುಮಾರ್ ಗಡ್ಡವನ್ನು ಬಿಟ್ಟಿದ್ದು, ಈ ಬಗ್ಗೆ ಅಜ್ಜಿಯೊಬ್ಬರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಹೇಳಿದ್ದೇನು ಎಂದು ಇಲ್ಲಿ ತಿಳಿಯಿರಿ.
ಈ ಸಿನಿಮಾದ ಉದಯ್ ಶಂಕರ್ ಎಸ್, ಬಿ.ಎಂ. ಶ್ರೀರಾಮ್ ಕೋಲಾರ ಇರವ ನಿರ್ಮಾಣ, ಶ್ರೀಲೇಶ್ ಎಸ್.ನಾಯರ್-ನಿರ್ದೇಶನದಲ್ಲಿ ಮೂಡಿಬಂದಿದೆ. ಇನ್ನು ವಿನಯ್ ರಾಜ್‌ಕುಮಾರ್, ಮಯೂರ್ ಪಟೇಲ್, ನವೀನ್ ಡಿ.ಪಡೀಲ್, ಯಶ್ ಶೆಟ್ಟಿ, ಕಾಜಲ್ ಕುಂದರ್, ಮೇದಿನಿ ಕೆಳಮನಿ, ಬಾಲರಾಜ್ ವಾಡಿ, ಅರುಣಾ ಬಾಲ್ರಾಜ್, ಸಂಧ್ಯಾ ಅರೆಕೆರೆ ಮುಂತಾದವರು ನಟಿಸಿದ್ದಾರೆ.

ಇನ್ನು ಗಡ್ಡ ಬಿಟ್ಟ ಬಗ್ಗೆ ಅಜ್ಜಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ನಮ್ಮೂರಲ್ಲಿ ಗಡ್ಡ ಬಿಟ್ಟರೆ ಇವರಿಗೇನೋ ತೊಂದರೆ ಇದೆ ಅಂದುಕೊಳ್ಳುತ್ತಾರೆ. ನಮ್ಮ ತಾತನ ಹಳೇ ಮನೆ ಹತ್ರ ಕುಳಿತುಕೊಂಡಿದ್ದೆ. ಅಲ್ಲಿ ತುಂಬಾ ವರ್ಷದಿಂದ ಒಬ್ಬ ಅಜ್ಜಿ ಇದ್ದು, ಅವರು ಕೂಡ "ಗಡ್ಡ ಬಿಟ್ಟಿದಿಯಲ್ಲ, ಯಾಕ್ ವಿನು ಕೆಟ್ಟೋಗಿದ್ಯಾ ಅಂತಾ ಅವರು ಕೇಳಿದರು. ಆಗ ನನಗೆ ಶಾಕ್ ಆಯಿತು," ಎಂದರು.
ಅಲ್ಲದೆ, "ಗುರು ಚೆನ್ನಾಗಿ ಶೇವ್ ಮಾಡಿಕೊಂಡಿದ್ದಾನೆ, ನೀನು ನೋಡಿದರೆ ಗಡ್ಡ ಬಿಟ್ಟುಕೊಂಡಿದ್ಯಾ ಎಂದು ಕೇಳಿದರು. ಆಗ ನಾನು ಇದು ಸಿನಿಮಾಗೆ ಬಿಟ್ಟಿರೋದು ಎಂದು ಹೇಳಿದೆ. ಆಗ ಸಿನಿಮಾಗೆ ಬಿಟ್ಟಿದ್ದರೆ, ಅಂಟಿಸಿಕೊಳ್ಳಬಹುದಿತ್ತಲ್ಲ, ಸುಮ್ನೆ ಏನುಕ್ಕೆ ಬಿಟ್ಕೊಂಡಿದಿಯಾ?, ಎಂದು ಕೇಳಿದರು. ಆದರೂ ಚೆನ್ನಾಗಿ ಕಾಣುವುದರಿಂದ ಗಡ್ಡವನ್ನು ಬಿಟ್ಟುಕೊಂಡಿದ್ದೇನೆ," ಎಂದು ಹೇಳಿರುವ ವಿಡಿಯೋ ಕನ್ನಡ ಪಿಕ್ಚರ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪೆಪೆ ಟ್ರೈಲರ್ ವೀಕ್ಷಿಸಿದ ನಟ ಕಿಚ್ಚ ಸುದೀಪ್ ಅವರು, ಇದರಲ್ಲಿ ತಮಗೆ ಕಂಡ ಪ್ರತಿ ಒಂದು ವಿಷಯವನ್ನು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಕೊಟ್ಟಿದ್ದು, ಇದನ್ನು ನೋಡಿದ ಸುದೀಪ್ ಮೆಚ್ಚಿಕೊಂಡಿದ್ದರು. ಪೆಪೆ ಚಿತ್ರದ ಟ್ರೈಲರ್‌ನ ಕೊನೆಯಲ್ಲಿ ಒಂದು ದೃಶ್ಯ ಬರುತ್ತದೆ. ಅದಕ್ಕೆ ಕೊಟ್ಟಿರೋ ಮ್ಯೂಸಿಕ್, ವಿನಯ್ ನಟನೆ ಎಲ್ಲವೂ ಸೂಪರ್ ಆಗಿದೆ. ಅಲ್ಲದೆ ಇಸೀಗ ಇಡೀ ಸಿನಿಮಾ ನೋಡಿ ಪ್ರತಿಯೊಂದು ವಿಷಯವನ್ನು ಕೂಡ ಸುದೀಪ್ ವಿಶ್ಲೇಷಿಸಿದ್ದಾರೆ.
ಪೆಪೆ ಚಿತ್ರ ತುಂಬಾ ಚೆನ್ನಾಗಿದೆ. ಕಥೆ ನಿರೂಪಣೆ ವಿಶೇಷವಾಗಿದೆ. ಇಂಟ್ರಸ್ಟಿಂಗ್ ಹೊಸ ರೀತಿಯಲ್ಲಿಯೇ ನಿರೂಪಿಸಲಾಗಿದೆ. ಪ್ರತಿಯೊಬ್ಬ ನಟ ದಿ ಬೆಸ್ಟ್ ಕೊಟ್ಟಿದ್ದಾರೆ. ವಿನಯ್ ನಿಜಕ್ಕೂ ಸೂಪರ್ ಆಗಿಯೇ ಕಾಣಿಸಿಕೊಂಡಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ. ಆಗಸ್ಟ್ 29ರ ರಾತ್ರಿಯೇ ಪೆಪೆ ಸಿನಿಮಾವನ್ನು ಸುದೀಪ್ ವೀಕ್ಷಣೆ ಮಾಡಿದ್ದಾರೆ. ಬಳಿಕ ತಮ್ಮ ಟ್ವಿಟರ್ ಪೇಜ್‌ನಲ್ಲಿಯೇ ಚಿತ್ರದ ಕುರಿತು ಬರೆದುಕೊಂಡಿದ್ದಾರೆ. ಡೈರೆಕ್ಟರ್ ಶ್ರೀಲೇಶ್ ನಾಯರ್ ತುಂಬಾನೆ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಾಯಕಿ ಕಾಜಲ್ ಕುಂದರ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಶ್ರೀಲೇಶ್ ನಾಯರ್ ಸಿನಿಮಾದಲ್ಲು ಪ್ರತಿ ದೃಶ್ಯವನ್ನು ತುಂಬಾ ಚೆನ್ನಾಗಿ ತೆಗೆದಿದ್ದಾರೆ. ಎಲ್ಲನ್ನೂ ಅದ್ಭುತವಾಗಿಯೇ ಮಾಡಿದ್ದಾರೆ. ತುಂಬಾನೆ ಸಂತೋಷವಾಯಿತು ಎಂದು ಹೇಳಿದ್ದಾರೆ.
"ಮನಸ್ಸಿಗೆ ಮುದ ನೀಡುವ ಪ್ರಯತ್ನ ಮತ್ತು ಹೊಸ ನಿರೂಪಣೆಯ ಮಾದರಿಯು #PEPE ಸಿನಿಮಾ ಇಂಟ್ರೆಸ್ಟಿಂಗ್ ಆಗಿದೆ. ಪ್ರತಿಯೊಬ್ಬ ನಟರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ವಿನಯ್ ರಾಜ್‌ಕುಮಾರ್ ಪರದೆಯ ಮೇಲೆ ಕಮಾಲ್ ಮಾಡಿದ್ದಾರೆ. ಮಾಸ್ ಪಾತ್ರಕ್ಕೆ ಸರಿಹೊಂದುವಂತೆ ತಮ್ಮನ್ನು ಚೆನ್ನಾಗಿ ರೂಪಿಸಿಕೊಂಡಿದ್ದಾರೆ. ಶುಭಾಶಯಗಳು ಚಾಂಪ್" ಎಂದು ಬರೆದುಕೊಂಡಿದ್ದಾರೆ.












Click it and Unblock the Notifications