Rachita Ram: ನಟ ದರ್ಶನ್‌ನನ್ನು ಹೇಗೆ ನೋಡಲು ಇಷ್ಟ.? ಪರಪ್ಪನ ಅಗ್ರಹಾರದಲ್ಲಿ ಭೇಟಿ ಬಳಿಕ ರಚಿತಾ ರಾಮ್ ಹೇಳಿದ್ದೇನು ಗೊತ್ತಾ?
Actress Rachita Ram: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಮತ್ತೊಂದೆಡೆ ಪೊಲೀಸರು ಕಲೆಹಾಕುತ್ತಿರುವ ಸಾಕ್ಷ್ಯಗಳು ದರ್ಶನ್‌ಗೆ ಮತ್ತಷ್ಟು ನಡುಕ ಹುಟ್ಟುವಂತೆ ಮಾಡಿವೆ. ಇನ್ನು ದರ್ಶನ್ ಭೇಟಿಗಾಗಿ ಪತ್ನಿ ವಿಜಯಲಕ್ಷ್ಮಿ, ಸಿನಿತಾರೆಯರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ. ಇದೀಗ ಇಂದು (ಆಗಸ್ಟ್ 22) ರಚಿತಾ ರಾಮ್ ಭೇಟಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ನ್ನು ಈಗಾಗಲೇ ಪತ್ನಿ ವಿಜಯಲಕ್ಷ್ಮಿ, ಆಪ್ತರು, ಸಿನಿತಾರೆಯರು ಭೇಟಿಯಾಗಿದ್ದಾರೆ. ಅಲ್ಲದೆ, ದರ್ಶನ್ ಪರ-ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ಆಗುತ್ತಿವೆ. ಇನ್ನು ಇಂದು ದರ್ಶನ್ ಭೇಟಿ ಮಾಡಿದ ನಟಿ ರಚಿತಾ ರಾಮ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲು ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಇದೀಗ ಇಂದು (ಆಗಸ್ಟ್ 22) ನಟಿ ರಚಿತಾ ರಾಮ್ ದರ್ಶನ್ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ಅವರು ಈ ಪ್ರಕರಣದ ಬಗ್ಗೆ ಪೋಸ್ಟ್ ಮಾಡಿದ್ದರು. ಇದೀಗ ಮಾಧ್ಯಮಗಳ ಬಳಿಕ ಈ ಬಗ್ಗೆ ಮಾತನಾಡಿದ್ದಾರೆ.
"ದರ್ಶನ್ ಅವರನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂನಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಕುಟುಂಬದವರು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ದರ್ಶನ್ ಅಭಿಮಾನಿ. ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ, ದಯವಿಟ್ಟು ಬೇಗ ಬನ್ನಿ ಎಂದು ಹೇಳಿಬಂದಿದ್ದೇನೆ," ಎಂದು ರಚಿತಾ ರಾಮ್ ಹೇಳಿದ್ದಾರೆ.
'ನನಗೆ ಕಾನೂನಿನ ಮೇಲೆ ನಂಬಿಕೆಯಿದೆ. ಆದಷ್ಟು ಬೇಗ ಹೊರಗೆ ಬರುತ್ತೇನೆ ಎಂದು ದರ್ಶನ್ ನನಗೆ ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಇನ್ನೂ ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ, ಈ ರೀತಿ ನೋಡಲು ತುಂಬಾ ಬೇಜಾರ್ ಆಗುತ್ತಿದೆ. ನಾನು ಈವರೆಗೆ ಬೆಳೆಯಲು ಅವರೇ ಕಾರಣ," ಅಂತಲೂ ರಚಿತಾ ರಾಮ್ ಹೇಳಿದರು. ಇನ್ನು 'ಬುಲ್ಬುಲ್', 'ಅಂಬರೀಷ', 'ಜಗ್ಗುದಾದ', 'ಕ್ರಾಂತಿ' ಸಿನಿಮಾಗಳಲ್ಲಿ ದರ್ಶನ್ ಜೊತೆ ರಚಿತಾ ರಾಮ್ ನಟನೆ ಮಾಡಿದ್ದಾರೆ.
ಈಗಾಗಲೇ ಸಾಧು ಕೋಕಿಲ, ತರುಣ್ ಸುಧೀರ್, ವಿನೋದ್ ಪ್ರಭಾಕರ್, ವಿನೋದ್ ರಾಜ್ ಸೇರಿದಂತೆ ಹಲವರು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದು, ಇದೀಗ ರಚಿತಾ ರಾಮ್ ಭೇಟಿಯಾಗಿದ್ದಾರೆ. ಅಲ್ಲದೆ ದರ್ಶನ್ ಅವರ ಬಳಿ ಏನೆಲ್ಲಾ ಹೇಳಿದ್ದಾರೆ ಅಂತಲೂ ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.












Click it and Unblock the Notifications